ಬಿಪಿಎಲ್‌ ಪಡಿತರ ಚೀಟಿ ಪಡೆಯಲು ಆದಾ ಯ ಪ್ರಮಾಣಪತ್ರದ ಜತೆ ಸ್ವಯಂ ಘೋಷಿತ ದೃಢೀಕರಣ ಪತ್ರ ನೀಡಬೇಕು. ಒಂದು ವೇಳೆ ಸುಳ್ಳು ದೃಢೀಕರಣ ಪತ್ರ ಕೊಟ್ಟಿರುವುದು ಸಾಬೀತಾದರೆ ಐಪಿಸಿ ಸೆಕ್ಷನ್‌ 420 ಅನ್ವಯ ಮೋಸ ವಂಚನೆ ದಾಖಲಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ. ಖಾದರ್‌ ತಿಳಿಸಿದ್ದಾರೆ.
ಬೆಂಗಳೂರು(ಮಾ.31): ಬಿಪಿಎಲ್ ಪಡಿತರ ಚೀಟಿ ಪಡೆಯಲು ಆದಾ ಯ ಪ್ರಮಾಣಪತ್ರದ ಜತೆ ಸ್ವಯಂ ಘೋಷಿತ ದೃಢೀಕರಣ ಪತ್ರ ನೀಡಬೇಕು. ಒಂದು ವೇಳೆ ಸುಳ್ಳು ದೃಢೀಕರಣ ಪತ್ರ ಕೊಟ್ಟಿರುವುದು ಸಾಬೀತಾದರೆ ಐಪಿಸಿ ಸೆಕ್ಷನ್ 420 ಅನ್ವಯ ಮೋಸ ವಂಚನೆ ದಾಖಲಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾಡಿದ ಅವರು, ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಈ ಮುಂಚೆ ಇದ್ದ ನಾಲ್ಕು ಬಗೆ ಯ ನಿಯಮಾವಳಿ ಸಡಿಲಗೊಳಿಸಲಾಗಿದೆ. ಸರ್ಕಾರಿ ನೌಕರರು, ಕಾರು ಹೊಂದಿದವರು, ವಾರ್ಷಿಕ 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರು ಮತ್ತು ಮಾಸಿಕ 150 ಯೂನಿಟ್'ಗಿಂತ ಹೆಚ್ಚು ವಿದ್ಯುತ್ ಬಳಸುವವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಸ್ವಯಂ ದೃಢೀಕರಣ ನೀಡಿ, ಬಿಪಿಎಲ್ ಕಾರ್ಡ್ ಪಡೆಯಬಹುದು ಎಂದರು.
ನಿಯಮದಲ್ಲಿ ಬದಲಾವಣೆ ಮಾಡಿದೆ ಎಂದಾಕ್ಷಣ ಎಪಿಎಲ್ ಕಾರ್ಡ್ಗೆ ಅರ್ಹತೆ ಇರುವವರೂ ಕೂಡ ಬಿಪಿಎಲ್ ಕಾರ್ಡ್'ಗೆ ಅರ್ಜಿ ಹಾಕುವಂತಿಲ್ಲ. ಸ್ವಯಂ ದೃಢೀಕರಣ ಪತ್ರ ಆಧರಿಸಿ, ಬಿಪಿಎಲ್ ಕಾರ್ಡ್ ನೀಡಲಾಗುವುದು. ನಂತರ ಪ್ರತಿಯೊಬ್ಬರ ಸ್ವಯಂ ದೃಢೀಕರಣ ಪತ್ರ ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ ವಾರ್ಷಿಕ ಆದಾಯ 1.20 ಲಕ್ಷ ರು. ಮೀರಿದಲ್ಲಿ ಅಂಥವರ ವಿರುದ್ಧ ಮೋಸದ ಪ್ರಕರಣ ದಾಖಲಿಸಿ, ಬಿಪಿಎಲ್ ಪಡಿತರ ಚೀಟಿ ಮುಟ್ಟು ಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರು ನಗರದ 198 ವಾರ್ಡ್ಗಳಲ್ಲಿ ಇಂದಿರಾ ಕ್ಯಾಂಟೀನ್ ಯೋಜನೆ ಶೀಘ್ರ ಕಾರ್ಯಾರಂಭ ಮಾಡಲಿದೆ. ಬಳಿಕ ಇತರ ಪಾಲಿಕೆಗೆ ವಿಸ್ತರಿಸಲಾಗುವುದು ಎಂದರು.
