ಬೆಂಗಳೂರು(ಜ.17): ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಸಲಿಂಗ ಪ್ರೇಮ ಪ್ರಕರಣ ಬಯಲಿಗೆ ಬಂದಿದ್ದು, ಮಹರಾಷ್ಟ ಮತ್ತು ಬೆಂಗಳೂರು ಯುವತಿಯರ ನಡುವೆ ಪ್ರೇಮಕಹಾನಿ ನಡೆದಿದೆ. ಫೇಸ್'ಬುಕ್ ಮೂಲಕ ಪರಿಚಿತವಾದ ಈ ಜೋಡಿಗೆ ಪೋಷಕರು ಅಡ್ಡಿಯಾಗಿದ್ದಾರೆ.

ಒಂದು ವರ್ಷದಿಂದ ಫೇಸ್'ಬುಕ್'ನಲ್ಲಿ ಪರಿಚಯವಾಗಿದ್ದ ಇಬ್ಬರು ಯುವತಿಯರು. ಆ ಬಳಿಕ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಈ ವಿಷಯ ತಿಳಿದ ಬೆಂಗಳೂರು ಮೂಲದ ಯುವತಿ ಮೆಹಕ್ ಶರೀಫ್'ಳ ಪೋಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಪೋಷಕರ ವಿರೋಧದ ನಡುವೆಯೇ ಮೆಹಕ್ ಶರೀಫ್ ಮಹರಾಷ್ಟ್ರಗೆ ಹೋಗಿದ್ದಳು. ಈ ಕುರಿತಂತೆ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದರು. ಮೆಹಕ್(17 ವರ್ಷ) ಅಪ್ರಾಪ್ತೆಯಾದ ಹಿನ್ನಲೆಯಲ್ಲಿ ಆಕೆಯ ಮನವೊಲಿಸಿ ಮಹರಾಷ್ಟ್ರದಿಂದ ಕೆಲ ತಿಂಗಳ ಹಿಂದಷ್ಟೇ ಪೊಲೀಸರು ಕರೆತಂದಿದ್ದರು.

ಆದರೆ ಈ ಪ್ರಕರಣಕ್ಕೆ ಹೊರ ಟ್ವಿಸ್ಟ್ ಸಿಕ್ಕಿದ್ದು, ಮಹರಾಷ್ಟ್ರದ ಯುವತಿ, ಮೆಹಕ್ 18 ವರ್ಷವಾಗುವವರೆಗೂ ಕಾದು ಆಕೆಯನ್ನು ಹುಡುಕಿಕೊಂಡು ಕಳೆದ 3 ದಿನಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದಾಳೆ. ಮೆಹಕ್ ಮನೆಗೆ ಬಂದಾಗ ಅವರ ಪೋಷಕರು ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಮಹರಾಷ್ಟ್ರ ಮೂಲದ ರೂಪಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆ ಬಳಿ ಕೋರಮಂಗಲ ಪೊಲೀಸರು ಯುವತಿಯ ಪೋಷಕರೊಂದಿಗೆ ರಾಜಿ ಮಾಡಿ ಕಳಿಸಿದ್ದಾರೆ. ಆದರೆ ಪೋಷಕರೊಂದಿಗೆ ಮನೆಗೆ ತೆರಳಲು ಒಪ್ಪದ ಮೆಹಕ್ ಪೋಷಕರ ವಿರೋಧದ ನಡುವೆಯೂ ಸಲಿಂಗ ಜೋಡಿ ಪರಾರಿಯಾಗಿದ್ದಾರೆ.

ಈ ಘಟನೆಯಿಂದ ಮೆಹಕ್ ಪೋಷಕರು ಶಾಕ್'ಗೆ ಒಳಗಾಗಿದ್ದಾರೆ.