ಕೊಡಗು (ಸೆ.13): ಅಕ್ರಮ ಹೋಂಸ್ಟೇಮೇಲೆ ಪೊಲೀಸರ ದಾಳಿನಡೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಓರ್ವ ಮಹಿಳೆಯನ್ನು ಕ್ಷಿಸಿದ್ದಾರೆ. ಗುಡ್ಡೆಹೊಸೂರುವಿನ ಚಿಕ್ಕ ಬೆಟಗೇರಿ ನಲ್ಲಿ ನಡೆದ ಘಟನೆ ನಡೆದಿದೆ.

ಖಚಿತ ಮಾಹಿತಿಮೇರೆಗೆ ಕುಶಾಲನಗರ ಇನ್ಸ್'ಪೆಕ್ಟರ್ ಕ್ಯಾತೆಗೌಡ,ಕುಶಾಲನಗರ ಗ್ರಾಮಾಂತರ ಎಸ್.ಐ.ಮಹೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಶನಿವಾರಸಂತೆ ಗ್ರಾಮದ ಪ್ರಸನ್ನ ,ಮಧು,ಪ್ರಮೋಧ,ರಾಜೀವ ಬಂಧಿಸಿದ್ದಾರೆ.

ಬಂಧಿತರಿಂದ 34 ಸಾವಿರ ನಗದು,ಒಂದು ಮಾರುತಿ ಕಾರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.