ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಕನ್ನಡಮ್ಮ ಪತ್ರಿಕೆ ಸಂಪಾದಕ ರಾಜೀವ್ ಟೋಪಣ್ಣವರ ಸೇರಿ ಮೂವರ ವಿರುದ್ಧ ಕೇಸ್ ದಾಖಲಾಗಿದೆ‌. ನಿನ್ನೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಟೋಪಣ್ಣವರ ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಲಿಕೆ ಸದಸ್ಯರು ಪಾಕಿಸ್ತಾನ ಸೈನ್ಯದ ಹಾಡು ಹಚ್ಚಿ ಕುಣಿದಿದ್ದಾರೆ ಎಂದು ಆರೋಪಿಸಿದ್ದರು. ಜತೆಗೆ ವಿಡಿಯೋವನ್ನು ಬಿಡುಗಡೆ ಮಾಡಿದ್ದರು.
ಬೆಳಗಾವಿ: ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಕನ್ನಡಮ್ಮ ಪತ್ರಿಕೆ ಸಂಪಾದಕ ರಾಜೀವ್ ಟೋಪಣ್ಣವರ ಸೇರಿ ಮೂವರ ವಿರುದ್ಧ ಕೇಸ್ ದಾಖಲಾಗಿದೆ.
ನಿನ್ನೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಟೋಪಣ್ಣವರ ಈದ್ ಮಿಲಾದ್ ಮೆರವಣಿಗೆಯಲ್ಲಿ ಪಾಲಿಕೆ ಸದಸ್ಯರು ಪಾಕಿಸ್ತಾನ ಸೈನ್ಯದ ಹಾಡು ಹಚ್ಚಿ ಕುಣಿದಿದ್ದಾರೆ ಎಂದು ಆರೋಪಿಸಿದ್ದರು. ಜತೆಗೆ ವಿಡಿಯೋವನ್ನು ಬಿಡುಗಡೆ ಮಾಡಿದ್ದರು.
ಆದರೆ ಅದು 2016ರಲ್ಲಿ ನಡೆದ ಮೆರವಣಿಗೆ ವಿಡಿಯೋ ತುಣುಕು ನೀಡಿರೋದು ಬೆಳಕಿಗೆ ಬಂದಿದೆ. ಜತೆಗೆ ಹಾಲಿ ಇಬ್ಬರು ಪಾಲಿಕೆ ಸದಸ್ಯರು ಮತ್ತು ಮಾಜಿ ಪಾಲಿಕೆ ಸದಸ್ಯರ ಮೇಲೆ ಆರೋಪ ಮಾಡಿದ್ದರು.
ಹೀಗಾಗಿ ಎರಡು ಕೋಮುಗಳ ನಡುವೆ ಶಾಂತಿ ಕದಡಲು ಯತ್ನ ಮತ್ತು ಗಲಾಟೆಗೆ ಸಂಚು ರೂಪಿಸಲಾಗಿದೆ ಎಂಬ ಆರೋಪದಡಿ ಕೇಸ್ ದಾಖಲಾಗಿದೆ. ಬಿಜೆಪಿ ಮುಖಂಡರಾದ ರಾಜೀವ್ ಟೊಪಣ್ಣವರ್ ಸೇರಿ ಮೂವರ ವಿರುದ್ಧ ಎಫ್’ಐಆರ್ ದಾಖಲಾಗಿದೆ.
ಹೀಗಾಗಿ 2016ರಲ್ಲಿ ಪಾಕಿಸ್ತಾನ ಸೇನೆ ಹಾಡಿಗೆ ಹಾಲಿ ಇಬ್ಬರು ಪಾಲಿಕೆ ಸದಸ್ಯರು ಮತ್ತು ಒಬ್ಬ ಮಾಜಿ ಪಾಲಿಕೆ ಸದಸ್ಯರು ಹೆಜ್ಜೆ ಹಾಕಿದ್ರಾ ಎಂಬ ಪ್ರಶ್ನೆ ಉದ್ಭವಿಸಿದೆ.
ಆದರೆ ಎಂಇಎಸ್ ನಾಯಕರು ಮತ್ತು ಮಹಾರಾಷ್ಟ್ರದ ಶಿವಸೇನೆ ನಾಯಕರು ನಮ್ಮ ನಾಡಲ್ಲೇ ಬಂದು ನಾಡ ವಿರೋಧಿ ಹೇಳಿಕೆ ನೀಡಿದರೂ ಈವರೆಗೆ ಪೊಲೀಸರು ಅವರ ವಿರುದ್ದ ಪ್ರಕರಣ ದಾಖಲಿಸದ ಪೊಲೀಸರ ಈ ದ್ವಂದ್ವ ನೀತಿಯನ್ನು ಬೆಳಗಾವಿ ಬಿಜೆಪಿ ವಿರೋಧಿಸುತ್ತಿದೆ.
