ಇಂದಿರಾಗಾಂಧಿಗೆ ಬಂದ ಸ್ಥಿತಿ ಮೋದಿಗೆ ಬರಬೇಕು ಅಂತ ಆಸೆನಾ..?ಎಂದು ವಿವಾದತ್ಮಕವಾಗಿ ಬರೆದುಕೊಂಡಿರುವ ಅಮೀನ್ ಮಟ್ಟು ಇತಿಹಾಸ ಕೆದಕುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ .
ಬೆಂಗಳೂರು(ನ.07): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತ ಮರಿಗೌಡರ ಕೇಸ್ ಮುಗಿಯುತ್ತಿದ್ದಂತೆಯೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಫೇಸ್ ಬುಕ್ ನಲ್ಲಿ ಸ್ಟೇಟಸ್ ಅಪ್ ಡೇಟ್ ಮಾಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.
ಇಂದಿರಾಗಾಂಧಿಗೆ ಬಂದ ಸ್ಥಿತಿ ಮೋದಿಗೆ ಬರಬೇಕು ಅಂತ ಆಸೆನಾ..?ಎಂದು ವಿವಾದತ್ಮಕವಾಗಿ ಬರೆದುಕೊಂಡಿರುವ ಅಮೀನ್ ಮಟ್ಟು ಇತಿಹಾಸ ಕೆದಕುವ ಮೂಲಕ ತೀವ್ರ ಟೀಕೆಗೆ ಗುರಿಯಾಗಿದ್ದಾರೆ .
ಸದ್ಯ ಪ್ರಧಾನಿ ಮೋದಿ ಬಗ್ಗೆ ದಿನೇಶ್ ಅಮಿನುಮಟ್ಟು ಫೇಸ್ ಬುಕ್ ನಲ್ಲಿ ಕಾಮೆಂಟ್ ಹಿನ್ನೆಲೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿಜೆಪಿಯ ಯುವಮೋರ್ಚಾದಿಂದ ದೂರು ದಾಖಲಾಗಿದ್ದು ಕೂಡಲೆ ಅಮಿನುಮಟ್ಟುವನ್ನು ಅರೆಸ್ಟ್ ಮಾಡುವಂತೆ ಆಗ್ರಹಿಸಿದ್ದಾರೆ.