ಇನ್ನು ಮುಂದಿನ ದಿನಗಳಲ್ಲಿ ಗ್ರಾಹಕರು ನೂತನ ಕಾರಿನ ನಂಬರ್ ಪ್ಲೇಟನ್ನು ಪ್ರತ್ಯೇಕವಾಗಿ ಖರೀದಿಸುವ ಅಗತ್ಯವಿರುವುದಿಲ್ಲ. ಉತ್ಪಾದನೆ ಸಂದರ್ಭದಲ್ಲೇ ನಂಬರ್ ಪ್ಲೇಟ್ ಅಳವಡಿಸಿದ ಕಾರುಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನವ ದೆಹಲಿ (ಏ. 02): ಇನ್ನು ಮುಂದಿನ ದಿನಗಳಲ್ಲಿ ಗ್ರಾಹಕರು ನೂತನ ಕಾರಿನ ನಂಬರ್ ಪ್ಲೇಟನ್ನು ಪ್ರತ್ಯೇಕವಾಗಿ ಖರೀದಿಸುವ ಅಗತ್ಯವಿರುವುದಿಲ್ಲ. ಉತ್ಪಾದನೆ ಸಂದರ್ಭದಲ್ಲೇ ನಂಬರ್ ಪ್ಲೇಟ್ ಅಳವಡಿಸಿದ ಕಾರುಗಳು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿವೆ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಹಾಲಿ ನಂಬರ್ ಪ್ಲೇಟ್‌ಗಳನ್ನು ಸಾಮಾನ್ಯವಾಗಿ ಆಯಾ ರಾಜ್ಯಗಳಲ್ಲಿರುವ ಪರವಾನಗಿ ಹೊಂದಿದ ಏಜೆನ್ಸಿಗಳು ಮತ್ತು ಆರ್‌ಟಿಒಗಳ ಮೂಲಕ ಕಾರಿನ ನೋಂದಣಿ ಸಂಖ್ಯೆಯ ಪ್ಲೇಟ್ ಅನ್ನು ಅಳವಡಿಸಲಾಗುತ್ತಿತ್ತು. ಈ ಬಗ್ಗೆ ಭಾನುವಾರ ಮಾತನಾಡಿದ ಸಚಿವ ಗಡ್ಕರಿ, ‘ಈ ಸಂಬಂಧ ಮುಖ್ಯವಾದ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಕಾರಿನ ಉತ್ಪಾದಕರೇ ನಂಬರ್ ಅಳವಡಿಸಲಿದ್ದಾರೆ. ಇದಕ್ಕೆ ತಗುಲುವ ವೆಚ್ಚವನ್ನು ಕಾರಿನ ಒಟ್ಟು ಬೆಲೆಯಲ್ಲೇ ಸೇರಿಸಲಾಗಿರುತ್ತದೆ. ಇದು ದೇಶದ್ಯಾಂತ ಏಕ ಮಾದರಿಯ ನಂಬರ್‌ಪ್ಲೇಟ್‌ಗೆ ಇದು ಸಹಕಾರಿಯಾಗಲಿದೆ,’ ಎಂದಿದ್ದಾರೆ.

Last Updated 14, Apr 2018, 1:13 PM IST