ಬೆಂಗಳೂರಿಗರೇ ಇನ್ಮುಂದೆ ಎಚ್ಚರವಾಗಿರಿ...! ನಿಮಗೆ ಗೊತ್ತಿಲ್ಲದೆ ನಿಮ್ಮ ಕಾರಿನ್​ ವೀಲ್​ ಮಾಯವಾಗುತ್ತೆ.

ಬೆಂಗಳೂರು(ಅ.01): ಬೆಂಗಳೂರಿಗರೇ ಇನ್ಮುಂದೆ ಎಚ್ಚರವಾಗಿರಿ...! ನಿಮಗೆ ಗೊತ್ತಿಲ್ಲದೆ ನಿಮ್ಮ ಕಾರಿನ್​ ವೀಲ್​ ಮಾಯವಾಗುತ್ತೆ.

ಹೌದು ಸಿಲಿಕಾನ್ ಸಿಟಿಯಲ್ಲಿ ಕಾರ್ ವೀಲ್  ಕಳ್ಳರಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ  ಕಾರಿನ ವೀಲ್​ ಬಿಚ್ಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ. ಟಾಟಾ ಸಫಾರಿ ಕಾರ್'​ನಲ್ಲಿದ್ದ   ಸ್ಟೆಪ್ನಿ ಸಮೇತವಾಗಿ  ಐದೂ ವೀಲ್​'ಗಳನ್ನು  ಕಳವು ಮಾಡಿಕೊಂಡಿರುವ ಘಟನೆ ಕೊಡಿಗೇಹಳ್ಳಿಯ ಕೆನರಾ ಬ್ಯಾಂಕ್​ ಲೇಔಟ್​ನಲ್ಲಿ   ನಡೆದಿದೆ. 

ಇನ್ನು  ಈ ಸಂಬಂಧ ಕೊಡಿಗೇಹಳ್ಳಿಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.