ಕಾರ್ ಮಾಲೀಕರೇ ಎಚ್ಚರ, ನಿಮ್ಮ ಕಾರು ನಿಮ್ಮ ಕಣ್ಮುಂದೆಯೇ ಹೈಜಾಕ್ ಆಗಬಹುದು. ಹಿಂಗ್ ಬಂದು ಹಂಗ್ ಹೋಗೋ ಖದೀಮರು 32 ಸೆಕೆಂಡ್'ನಲ್ಲಿ ನಿಮ್ಮ ಕಾರನ್ನ ಕದ್ದುಕೊಂಡು ಹೋಗಬಹುದು.
ಬೆಂಗಳೂರು(ಅ.10): ಕಾರ್ ಮಾಲೀಕರೇ ಎಚ್ಚರ, ನಿಮ್ಮ ಕಾರು ನಿಮ್ಮ ಕಣ್ಮುಂದೆಯೇ ಹೈಜಾಕ್ ಆಗಬಹುದು. ಹಿಂಗ್ ಬಂದು ಹಂಗ್ ಹೋಗೋ ಖದೀಮರು 32 ಸೆಕೆಂಡ್'ನಲ್ಲಿ ನಿಮ್ಮ ಕಾರನ್ನ ಕದ್ದುಕೊಂಡು ಹೋಗಬಹುದು.
ಇಂಥದ್ದೊಂದು ಘಟನೆ ನಿನ್ನೆಯಷ್ಟೇ ನಡೆದಿದೆ. ಒಬ್ಬ ಮಹಿಳೆ ತನ್ನ ಕಾರ್'ನಲ್ಲಿ ಬಂದು ಟೋಲ್ ಹತ್ರ ನಿಂತ್ಕೊಂಡಿದ್ಳು. ಟೋಲ್ ಓಪನ್ ಆಗೋಷ್ಟ್ರಲ್ಲಿ ಹಿಂದಿಂದ ಬಂದ ಖದೀಮರು, ಗನ್ ತೋರಿಸಿ ಬಲವಂತವಾಗಿ ಕಾರ್'ನಿಂದ ಇಳಿಸಿದ್ದಾರೆ.
ನಂತರ ಆ ಕಾರನ್ನ ಕದ್ಕೊಂಡ್ ಹೋಗಿದ್ದರು. ಇದೆಲ್ಲಾ ಆಗಿದ್ದು ಜಸ್ಟ್ 32 ಸೆಕೆಂಡ್ನಲ್ಲಿ. ಅಂದ್ಹಾಗೆ ಈ ಘಟನೆ ನಡೆದಿದ್ದು ಸೌತ್ ಆಫ್ರೀಕಾದಲ್ಲಿ. ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಖದೀಮರ ಚಾಲಾಕಿತನ ಕಾರು ಚಾಲಕರಲ್ಲಿ ಗಾಬರಿ ಉಂಟು ಮಾಡ್ತಿದೆ.
