ಶ್ರೀನಗರ(ಮಾ.30): ಪುಲ್ವಾಮಾ ದಾಳಿ ಮಾಸುವ ಮುನ್ನವೇ ಕಣಿವೆಯಲ್ಲಿ ಮತ್ತೊಂದು ದರ್ಘಟನೆ ಸಂಭವಿಸಿದ್ದು, CRPF ವಾಹನದ ಸಮೀಪವೇ ಕಾರೊಂದು ಬ್ಲಾಸ್ಟ್ ಆಗಿದೆ.

CRPF ವಾಹನ ಸಾಗುತ್ತಿದ್ದ ದಾರಿಯಲ್ಲೇ ಕೆಲವೇ ಅನತಿಯಲ್ಲಿ ಕಾರೊಂದು ಬ್ಲಾಸ್ಟ್ ಆಗಿದೆ. ಆದರೆ ಇದೊಂದು ಭಯೋತ್ಪಾದಕ ದಾಳಿಯಾಗಿರದೇ ಕಾರಿನ ಸಿಲಿಂಡರ್ ಸ್ಫೋಟಗೊಂಡ ಪರಿಣಾಂ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಜಮ್ಮು-ಶ್ರೀನಗರ ಹೆದ್ದಾರಿ ಬನಿಹಲ್ ನಲ್ಲಿ CRPF ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದು ಸ್ಫೋಟಗೊಂಡಿದೆ ಎನ್ನಲಾಗಿದೆ. ವಾಹನಕ್ಕೆ ಡಿಕ್ಕಿ ಹೊಡೆದ ಕೂಡಲೇ ಕಾರಿನ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ.

"

ಸ್ಫೋಟದ ತೀವ್ರತೆ ಕಡಿಮೆ ಇದ್ದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ಕಾರು ಚಾಲಕನ ಬಂಧನಕ್ಕೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದೆ.

CRPF ವಾಹನಕ್ಕೆ ಡಿಕ್ಕಿ ಹೊಡೆದಿರುವ ಕಾರಣದಿಂದ ಭಯೋತ್ಪಾದಕ ದಾಳಿಯ ಅನುಮಾನ ಮೂಡಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.