ಬಿಜೀಂಗ್(ಸೆ.15): ಹೆದ್ದಾರಿಗಳಲ್ಲಿ ದುಬಾರಿ ಕಾರಿನಲ್ಲಿ ವೇಗವಾಗಿ ಸವಾರಿ ಮಾಡುವುದು ಒಂದು ರೀತಿಯ ಕ್ರೇಜ್ ಎಂದರೆ ತಪ್ಪಾಗುವುದಿಲ್ಲ. ಕುಡಿದ ನೀರು ಅಲುಗಾದಂತಹ ಸೂಪರ್ ರೋಡ್ ಗಳಲ್ಲಿ ವೇಗವಾಗಿ ಚಲಿಸುವ ಕಾರುಗಳು ರಸ್ತೆಯ ಮಧ್ಯ ಸಿಗುವ ಲ್ ಗೇಟ್ ಗಳಿಗೆ ಡಿಕ್ಕಿ ಹೊಡೆಯುವುದು ಸಾಮಾನ್ಯ.
ಹೀಗೆ ಚೀನಾದ ರಾಜಧಾನಿ ರಾಜಧಾನಿ ಬಿಜೀಂಗ್ ನಲ್ಲಿ ಬೇಗವಾಗಿ ಬಂದ ಕಾರೋಂದು ಟೋಲ್ ಗೇಟ್'ಗೆ ಡಿಕ್ಕಿ ಹೊಡೆದ ಪರಿಣಾಮ 360 ಡಿಗ್ರಿ ಮೇಲಕ್ಕೆ ಹಾರಿ ಒಂದು ಸುತ್ತು ಹಾಕಿ ನೆಲಕ್ಕೆ ಅಪ್ಪಳಿಸಿದೆ.
ಈ ದೃಶ್ಯವನ್ನು ನೋಡಿದರೆ ಓ ಡ್ರೈವರ್ ಸತ್ತ ಅಂತಲೇ ಎಂದು ಕೊಳ್ಳುತ್ತಿದ್ದಂತೆ ಕಾರಿನಿಂದ ಆರಾಮವಾಗಿ ಕೆಳಗೆ ಇಳಿಯುವ ಡ್ರೈವರ್, ಬದುಕಿಸಿದಕ್ಕೆ ಭಗವಂತನಿಗೆ ಕೈ ಮುಗಿದಿದ್ದಾನೆ. ಭೀಕರ ಅಪಘಾತದಲ್ಲೂ ಬದುಕಿಸಿದ ಭಗವಂತನಿಗೆ ಧನ್ಯವಾದ ಹೇಳಿದ್ದಾನೆ.
