Asianet Suvarna News Asianet Suvarna News

ಬೀಜಿಂಗ್'ನಲ್ಲಿ ಕಾರು ನಿಷೇಧಕ್ಕೆ ನಿರ್ಧಾರ..!

ಈಗ ಸದ್ಯಕ್ಕೆ ಪ್ರತಿ ತಿಂಗಳು ಲಾಟರಿ ಮೂಲಕ ಹೊಸ ಕಾರುಗಳ ನೊಂದಣಿ ಮಾಡಲಾಗುತ್ತಿದ್ದು 2018 ಕ್ಕೆ ಈ ಸಂಖ್ಯೆಯನ್ನು 15 ಲಕ್ಷ ದಿಂದ 10ಲಕ್ಷಕ್ಕೆ ಇಳಿಸಲಾಗುವುದು ಎಂದು ಬೀಜಿಂಗ್ ಸಾರಿಗೆ ಮುನ್ಸಿಪಲ್ ಕಮಿಷನ್ ಹೇಳಿದೆ. 

car ban in Beijing

ಬೀಜಿಂಗ್(ಅ.26): ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ 2020 ರ ವೇಳೆಗೆ ನಗರದ ರಸ್ತೆಯ ಮೇಲೆ ಚಲಿಸುವ ಕಾರುಗಳನ್ನು 6.3 ದಶಲಕ್ಷಕ್ಕೆ ನಿಯಂತ್ರಿಸುವ ನಿರ್ಧಾರವನ್ನು ಬೀಜಿಂಗ್ ಸಾರಿಗೆ ಪ್ರಾಧಿಕಾರ ಕೈಗೊಂಡಿದೆ.

ಈಗ ಸದ್ಯಕ್ಕೆ ಪ್ರತಿ ತಿಂಗಳು ಲಾಟರಿ ಮೂಲಕ ಹೊಸ ಕಾರುಗಳ ನೊಂದಣಿ ಮಾಡಲಾಗುತ್ತಿದ್ದು 2018 ಕ್ಕೆ ಈ ಸಂಖ್ಯೆಯನ್ನು 15 ಲಕ್ಷ ದಿಂದ 10ಲಕ್ಷಕ್ಕೆ ಇಳಿಸಲಾಗುವುದು ಎಂದು ಬೀಜಿಂಗ್ ಸಾರಿಗೆ ಮುನ್ಸಿಪಲ್ ಕಮಿಷನ್ ಹೇಳಿದೆ. 

ಹಂತ-ಹಂತವಾಗಿ ಬೀಜಿಂಗ್'ನಲ್ಲಿ ಕಾರು ನಿಷೇಧಕ್ಕೆ ಸರಕಾರ ನಿರ್ಧಾರ ಮಾಡದಂತೆ ಕಾಣುತ್ತಿದ್ದು, ವಾಯು ಮಾಲಿನ್ಯ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಇಂತಹ ಕಠಿಣ ನಿರ್ಧಾರ ಅಗತ್ಯ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ಚೀನಾ ಸರಕಾರ ಕಾರು ನಿಷೇಧದಂತಹ ಕಠಿಣ ಕಾನೂನುನನ್ನು ಜಾರಿಗೆ ತಂದರು ಯಾವುದೇ ಆಚ್ಚರಿ ಪಡಬೇಕಾಗಿಲ್ಲ. ಸದ್ಯ ಜೀನಾದಲ್ಲಿ ಇಂತಹ ಅದೆಷ್ಟೋ ಕಾನೂನುಗಳು ಜಾರಿಯಾಗಿದೆ. 

Follow Us:
Download App:
  • android
  • ios