ತೀರ್ಥಹಳ್ಳಿ[ಮೇ. 28]  ತೀರ್ಥಹಳ್ಳಿ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯ ಕುಡುಮಲ್ಲಿಗೆ ಸಮೀಪದ ಬಾಳಗಾರು ಬಳಿ ಕಾರೊಂದು ರಸ್ತೆಯಿಂದ ಮನೆ ಮೇಲೆ ಹಾರಿ ನಿಂತಿದೆ.

ಮುಡುಬ ಬಳಿಯ ಉಳ್ಳೋಡಿ ಬಸ್ ಸ್ಟಾಪ್ ಹತ್ತಿರವಿರುವ ಮನೆಯೊಂದರ ಮಾಡಿನ ಮೇಲೆ ಕಾರೊಂದು ಅಪ್ಪಳಿಸಿ ನಿಂತಿದೆ. ಈ ಕಾರು ತೀರ್ಥಹಳ್ಳಿ ಕಡೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣದ ತಪ್ಪಿದ ಕಾರು ಮನೆಗೆ ಹಾರಿ ಕಂಬದ ಮೇಲಿಂದ ನೇತು ಹಾಕಿಕೊಂಡಂತೆ ಸಿಲುಕಿದೆ. ಮನೆಯ ಮುಂದೆ ಯಾರೂ ಇಲ್ಲದಿದ್ದರಿಂದ ಅಪಾಯ ಆಗಿಲ್ಲ.

ಮಲೆನಾಡಿಗರೇ ಎಚ್ಚರ, ಈ ಸೈಕೋ ನಿಮ್ಮ ಮನೆ ಹತ್ತಿರವೂ ಬರಬಹುದು!

ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೂ ಕೂಡ ಯಾವುದೇ ಗಂಭೀರ ಗಾಯವಾಗಿಲ್ಲ.  ಕಾರು ಮೇಲಿನಿಂದ ಹಾರಿಬಿದ್ದ ರಭಸಕ್ಕೆ ಹಂಚಿನ ಮಾಡು, ಕಾಂಪೌಂಡ್, ಗೇಟು ಹಾನಿಗೊಂಡಿದೆ.