ಅತ್ತೆ-ಸೊಸೆ ಯಾವ್ವಾವುದೋ ವಿಚಾರಕ್ಕೆ ಜಗಳ ಮಾಡುವುದನ್ನು ನೋಡುತ್ತೇವೆ. ಇಲ್ಲೊಬ್ಬ ಅತ್ತೆ-ಸೊಸೆ ಮಾವಿನ ಹಣ್ಣಿಗಾಗಿ ಜಗಳ ಕಾದಿದ್ದಾರೆ. 

ಮಾವಿನ ಫಸಲು ತನಗೂ ಬೇಕೆಂದು ಕೇಳಿದ ಅತ್ತೆಗೆ ಗಂಡನೆದುರೇ ಮನಬಂದಂತೆ ಥಳಿಸಿದ್ದಾರೆ ಸೊಸೆ. ಕೆಳಕ್ಕೆ‌ ಬಿದ್ದರೂ ಬಿಡದೆ ವೃಧ್ದೆ ಮೇಲೆ ಹಲ್ಲೆ ನಡೆಸಿದ್ದಾರೆ.  ಪತ್ನಿ ಕ್ರೌರ್ಯಕ್ಕೆ ಪತಿಯೂ ಬೆಂಬಲ ನೀಡಿದ್ದಾರೆ.  ಇಂಥದ್ದೊಂದು ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ. 

ಮಾವಿನ‌ ಹಣ್ಣು ಕೊಯ್ಯುತ್ತಿದ್ದ ಮಗ ಸೊಸೆಗೆ, ನನಗೂ ಸ್ವಲ್ಪ ಉಳಿಸಿ ಎಂದು ಅಮ್ಮ ಕೇಳಿದ್ದಾಳೆ. ಅತ್ತೆ ಮಾತಿಗೆ ಕೆರಳಿದ ಸೊಸೆ ಆಕೆ ಮೇಲೆ ಹಲ್ಲೆ ನಡೆಸಿದ್ದಾರೆ. 

ಹಲ್ಲೆಯಿಂದ ಅಸ್ವಸ್ಥ ಗೊಂಡ‌ ವೃದ್ದೆಗೆ ಹೊಳೆನರಸೀಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

"