ಮಹಾನಗರಗಳಲ್ಲಿ ನೀರಿನ ಸಮಸ್ಯೆ ಹೊಸದೇನಲ್ಲ. ಆದರೆ ದಕ್ಷಿಣ ಆಫ್ರಿಕಾದ ಪ್ರಸಿದ್ಧ ನಗರ ಕೇಪ್‌ಟೌನ್‌ನಲ್ಲಿ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಪ್ರತಿಯೊಬ್ಬರು ದಿನಕ್ಕೆ 50 ಲೀಟರ್ ನೀರನ್ನು ಮಾತ್ರ ಬಳಸಬೇಕು ಎಂಬ ಕಟ್ಟಾಜ್ಞೆ ಹೊರಡಿಸಲಾಗಿದೆ.

ಕೇಪ್‌ಟೌನ್: ಮಹಾನಗರಗಳಲ್ಲಿ ನೀರಿನ ಸಮಸ್ಯೆ ಹೊಸದೇನಲ್ಲ. ಆದರೆ ದಕ್ಷಿಣ ಆಫ್ರಿಕಾದ ಪ್ರಸಿದ್ಧ ನಗರ ಕೇಪ್‌ಟೌನ್‌ನಲ್ಲಿ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಪ್ರತಿಯೊಬ್ಬರು ದಿನಕ್ಕೆ 50 ಲೀಟರ್ ನೀರನ್ನು ಮಾತ್ರ ಬಳಸಬೇಕು ಎಂಬ ಕಟ್ಟಾಜ್ಞೆ ಹೊರಡಿಸಲಾಗಿದೆ.

ಜೊತೆಗೆ ನಾಗರಿಕರು ಗೊತ್ತುಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಬಳಸಿದವರ ಮೇಲೆ ದಂಡ ವಿಧಿಸಲಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವ್ಯಕ್ತಿ ಯೊಬ್ಬರು, ‘ನಾವು ಈಗಾಗಲೇ ಒಮ್ಮೆ ಬಳಸಿದ ನೀರನ್ನು ಶುಚಿಗೊಳಿಸಿ ಶೌಚಾಲಯ ಸೇರಿದಂತೆ ಇನ್ನಿತರ ಕಾರ್ಯ ಗಳಿಗಾಗಿ ಬಳಸುತ್ತಿದ್ದೇವೆ. ವಿಶೇಷ ಸಂದರ್ಭಗಳಲ್ಲಿ ಮಾತ್ರವೇ ಸ್ನಾನ ಮಾಡುತ್ತೇವೆ,’ ಎಂದಿದ್ದಾರೆ.