Asianet Suvarna News Asianet Suvarna News

ಎಟಿಎಂನಲ್ಲಿ ಹರಿದ ನೋಟು: ಕೆನರಾ ಬ್ಯಾಂಕ್ ರಿಯಾಕ್ಷನ್ ಲೇಟು!

ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹರಿದ ನೋಟುಗಳು! ಬೆಳಗಾವಿ ಜಿಲ್ಲೆಯ ಎಂ.ಕೆ. ಹುಬ್ಬಳ್ಳಿಯ ಕೆನರಾ ಬ್ಯಾಂಕ್ ಎಟಿಎಂ! ಹರಿದ 2000 ರೂ. ಮುಖಬೆಲೆಯ ನೋಟು ಕಂಡು ಕಂಗಾಲಾದ ಗ್ರಾಹಕ! ಗ್ರಾಹಕರ ದೂರಿಗೆ ತುರ್ತಾಗಿ ಸ್ಪಂದಿಸದ ಬ್ಯಾಂಕ್ ಸಿಬ್ಬಂದಿ
 

Canara Bank ATM Dispenses Mutilated Notes in Belagavi
Author
Bengaluru, First Published Oct 6, 2018, 7:29 PM IST
  • Facebook
  • Twitter
  • Whatsapp

ಬೆಳಗಾವಿ(ಅ.6): ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹರೆದ ನೋಟುಗಳು ಪತ್ತೆಯಾಗಿದ್ದು, ಎಟಿಎಂ ಮೂಲಕ ಹಣ ಡ್ರಾ ಮಾಡಿದ ಅನೇಕ ಗ್ರಾಹಕರು ಕಂಗಾಲಾದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. 

ಇಲ್ಲಿನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಹರಿದ 2000 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿವೆ. ನಿನ್ನೆಯಿಂದ ಇಂದಿನ ವರೆಗೆ ಅನೇಕ ಗ್ರಾಹಕರು ಡ್ರಾ ಮಾಡಿದ ಎರಡು ಸಾವಿರ ಮುಖ ಬೆಲೆಯ ಎಲ್ಲಾ ನೋಟುಗಳು ಹಾಳಾಗಿವೆ.

Canara Bank ATM Dispenses Mutilated Notes in Belagavi

ಕೆಲ ನೊಟುಗಳು ತುಂಡಾಗಿ ಅಂಟಿನ ಪಟ್ಟಿ ಹಚ್ಚಿದ್ದರೆ, ಇನ್ನೂ ಕೆಲವು ನೊಟುಗಳ ಕೆಲಭಾಗ ಸಂಪೂರ್ಣವಾಗಿ ತುಂಡಾಗಿವೆ ಎಂದು ಗ್ರಾಹಕರು ಆರೋಪಿಸಿದ್ದಾರೆ. ಅಲ್ಲದೇ ಈ ಕೂಡಲೇ ಬ್ಯಾಂಕ್ ಸಿಬ್ಬಂದಿ ಈ ನೋಟುಗಳ ಬದಲಾವಣೆಗೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
 

Follow Us:
Download App:
  • android
  • ios