ಯುಪಿಎಸ್'ಸಿ ಕ್ರಮವನ್ನು ಅಸಿಂಧುಗೊಳಿಸಿದ ಸುಪ್ರೀಂ
ನವದೆಹಲಿ (ಫೆ.19): ಅರ್ಜಿ ನಮೂನೆಯಲ್ಲಿ ಹುಟ್ಟಿದ ದಿನಾಂಕ ಮತ್ತು ಹೆಸರಿನಲ್ಲಿನ ಕಾಗುಣಿತ ದೋಷವನ್ನೇ ಆಧಾರವಾಗಿಟ್ಟುಕೊಂಡು, ಅಭ್ಯರ್ಥಿಯ ಆಯ್ಕೆಯನ್ನು ಕೇಂದ್ರ ಲೋಕಸೇವಾ ಆಯೋಗವು ತಿರಸ್ಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅಜಯ್ ಕುಮಾರ್ ಮಿಶ್ರಾರನ್ನು, ರಾಷ್ಟ್ರೀಯ ರಕ್ಷಣಾ ಅಕಾಡೆಮಿಗೆ ಆಯ್ಕೆ ಮಾಡಿಕೊಳ್ಳಬೇಕು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಯುಪಿಎಸ್'ಸಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠವು, ಯುಪಿಎಸ್'ಸಿ ಕ್ರಮವನ್ನು ಅಸಿಂಧುಗೊಳಿಸಿದೆ.
ಮಿಶ್ರಾ ಅರ್ಜಿ ತುಂಬುವಾಗ ಹುಟ್ಟಿದ ದಿನಾಂಕವನ್ನು ಜುಲೈ 10, 1998 ಎಂದು ಬರೆಯುವ ಬದಲು, ಜುಲೈ 11, 1998 ಎಂದು ಬರೆದಿದ್ದರು.
