ನವದೆಹಲಿ: ಪೊಲೀಸ್ ಠಾಣೆಗೆ ಹೋಗಿ, ದೂರು ದಾಖಲಿಸಲು ಹೆದರುವ ಸಾರ್ವಜನಿಕರು ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ‘ಪ್ರಥಮ ಮಾಹಿತಿ ವರದಿ’(ಎಫ್ ಐಆರ್) ಅಥವಾ ಇ-ಎಫ್‌ಐಆರ್ ಸಲ್ಲಿಸಲು ಅವಕಾಶ ಕಲ್ಪಿಸಬಹುದೇ ಎಂದು ಕೇಂದ್ರ ಗೃಹ ಇಲಾಖೆ, ಕಾನೂನು ಆಯೋಗವನ್ನು ಪ್ರಶ್ನಿಸಿದೆ. 

ಈ ಬಗ್ಗೆ ಪರಿಶೀಲನೆ  ಮಾಡಿದ ಕಾನೂನು ಆಯೋಗ, ‘ಆನ್‌ಲೈನ್ ಮೂಲಕ ಪ್ರಕರಣಗಳನ್ನು ದಾಖಲಿಸಲು ಅನುಮತಿಸುವ ರೀತಿ ಸಿಆರ್‌ಪಿಸಿ ಕಾನೂನನ್ನು ತಿದ್ದುಪಡಿ ಮಾಡಿದಲ್ಲಿ, ಕೆಲವು ವ್ಯಕ್ತಿಗಳ ತೇಜೋವಧೆಗೆ ಈ ಕಾನೂನು ಬಳಕೆ ಯಾಗುವ ಸಾಧ್ಯತೆಯಿದೆ’ ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಕಾನೂನು ಆಯೋಗ ದ ಸದಸ್ಯರೊಬ್ಬರು, ‘ದೂರು ಸಲ್ಲಿಸಲು ಆಗಮಿಸುವವ
ರ ವರ್ತನೆ ಗಮನಿಸಿಯೇ ಪ್ರಕರಣ ನೈಜ ಎಂಬುದನ್ನು ಪೊಲೀಸರು ಅರ್ಥೈಸಿಕೊಳ್ಳುತ್ತಾರೆ. 

ಆದರೆ, ಆನ್‌ಲೈನ್ ನಲ್ಲಿ ಎಫ್‌ಐಆರ್ ದಾಖಲಿಗೆ ಅವಕಾಶ ಕಲ್ಪಿಸಿದರೆ ಯಾರು ಬೇಕಾದರೂ, ತಮಗೆ ಆಗದವರ ತೇಜೋವಧೆ ಗಾಗಿ ದುರುಪಯೋಗಪಡಿಸಿ ಕೊಳ್ಳಬಹುದು ಎಂಬುದ ನ್ನು ಅರ್ಥೈಸಿಕೊಂಡಿದ್ದೇವೆ. ಹೀಗಾಗಿ, ಈ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲಾಗಿಲ್ಲ,’ ಎಂದಿದ್ದಾರೆ.