ಇತರೆ ಹಿಂದುಳಿದ ವರ್ಗದಲ್ಲಿನ ಕೆನೆಪದರದವರಿಗೆ ಈಗಾಗಲೇ ಉದ್ಯೋಗ ಬಡ್ತಿಯಲ್ಲಿ ಮೀಸಲು ನಿರಾಕರಿಸಲಾಗಿದೆ. ಹೀಗಿರುವಾಗ ಈ ನಿಯಮವನ್ನು ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಕೆನೆಪದರಕ್ಕೆ ಏಕೆ ವಿಸ್ತರಿಸಿಲ್ಲ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ನವದೆಹಲಿ: ಉನ್ನತ ಸರ್ಕಾರಿ ಹುದ್ದೆಗಳಲ್ಲಿ ಇರುವ ಪರಿಶಿಷ್ಟಜಾತಿ ಮತ್ತು ಪಂಗಡಗದ ಅಧಿಕಾರಿಗಳ ಮಕ್ಕಳು ಮತ್ತು ಸಂಬಂಧಿಕರಿಗೆ ಉದ್ಯೋಗ ಬಡ್ತಿಯಲ್ಲಿ ಮೀಸಲು ನೀಡುವ ಕ್ರಮವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ಇತರೆ ಹಿಂದುಳಿದ ವರ್ಗದಲ್ಲಿನ ಕೆನೆಪದರದವರಿಗೆ ಈಗಾಗಲೇ ಉದ್ಯೋಗ ಬಡ್ತಿಯಲ್ಲಿ ಮೀಸಲು ನಿರಾಕರಿಸಲಾಗಿದೆ. ಹೀಗಿರುವಾಗ ಈ ನಿಯಮವನ್ನು ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಕೆನೆಪದರಕ್ಕೆ ಏಕೆ ವಿಸ್ತರಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಸಂವಿಧಾನ ಪೀಠ ಪ್ರಶ್ನಿಸಿದೆ.
ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಉದ್ಯೋಗ ಬಡ್ತಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಪೀಠ ಈ ಪ್ರಶ್ನೆ ಎತ್ತಿದೆ. ಆದರೆ ಸುಪ್ರೀಂನ ಈ ವಾದ ತಳ್ಳಿಹಾಕಿದ ಕೇಂದ್ರ ಸರ್ಕಾರದ ಪರ ವಕೀಲರ ತಂಡ, ಕೆನೆಪದರದವರಿಗೂ ಬಡ್ತಿ ಮೀಸಲು ನೀಡುವುದನ್ನು ಬಲವಾಗಿ ಸಮರ್ಥಿಸಿಕೊಂಡಿತು.
