Asianet Suvarna News Asianet Suvarna News

ವರ್ಷಾರಂಭಕ್ಕೆ ಸ್ತಬ್ಧವಾಗಲಿವೆಯಾ ಕೇಬಲ್ ಟೀವಿ

ಪ್ರತಿ ಚಾನೆಲ್‌ಗೆ ಪ್ರತ್ಯೇಕ ಶುಲ್ಕ ನೀತಿಯು ಡಿ. 29ರಿಂದ ಕಟ್ಟು​ನಿ​ಟ್ಟಾಗಿ ಜಾರಿ​ಯಾ​ದರೆ ರಾಜ್ಯದಲ್ಲಿ ಬಹುತೇಕ ಕೇಬಲ್‌ ಟಿವಿ ಸ್ತಬ್ಧ​ವಾ​ಗುವ ಸಾಧ್ಯ​ತೆ​ಯಿ​ದೆ.
 

Cable tv network rules implementation to be put off
Author
Bengaluru, First Published Dec 21, 2018, 10:21 AM IST

ಬೆಂಗಳೂರು :  ಇನ್ನೊಂದು ವಾರದಲ್ಲಿ ಜಾರಿಗೆ ಬರಲಿರುವ ‘ಪ್ರತಿ ಚಾನೆಲ್‌ಗೆ ಪ್ರತ್ಯೇಕ ಶುಲ್ಕ’ ಎಂಬ ಭಾರತೀಯ ದೂರಸಂಪರ್ಕ ಪ್ರಾಧಿಕಾರದ (ಟ್ರಾಯ್‌) ನೀತಿಯಡಿ ಕೇಬಲ್‌ ಟಿವಿ ವೀಕ್ಷಕರ ನೋಂದಣಿಗೆ ಕೇಬಲ್‌ ಟಿವಿ ಆಪರೇಟಿಂಗ್‌ ಸಿಸ್ಟಂ ಸಿದ್ಧವಾಗಿಲ್ಲ. 

ಇದ​ರಿಂದಾಗಿ ಯಾವ ರೀತಿ ನೋಂದಣಿ ಮಾಡಿ​ಸಿ​ಕೊ​ಳ್ಳ​ಬೇಕು ಎಂಬ ಮಾಹಿತಿಯೇ ದೊರೆ​ಯದೇ ರಾಜ್ಯದ ಗ್ರಾಹ​ಕ​ರನ್ನು ತೀವ್ರ ಗೊಂದ​ಲಕ್ಕೆ ನೂಕಿದೆ. ಒಂದು ವೇಳೆ ಕೇಂದ್ರದ ಈ ನೀತಿಯು ಡಿ. 29ರಿಂದ ಕಟ್ಟು​ನಿ​ಟ್ಟಾಗಿ ಜಾರಿ​ಯಾ​ದರೆ ರಾಜ್ಯದಲ್ಲಿ ಬಹುತೇಕ ಕೇಬಲ್‌ ಟಿವಿ ಸ್ತಬ್ಧ​ವಾ​ಗುವ ಸಾಧ್ಯ​ತೆ​ಯಿ​ದೆ.

ಆದರೆ, ರಾಜ್ಯದಲ್ಲಿ ಮಾತ್ರ​ವ​ಲ್ಲದೆ, ಇಡೀ ದೇಶ​ದಲ್ಲಿ ಇದೇ ಸ್ಥಿತಿ​ಯಿ​ರು​ವು​ದ​ರಿಂದ ಡಿ. 29ರಿಂದ ಈ ನೀತಿ ಜಾರಿ​ಯಾ​ಗು​ವುದೋ ಅಥವಾ ಇಲ್ಲವೋ ಎಂಬ ಅನು​ಮಾ​ನ​ಗಳು ಇವೆ.

ಕೇಂದ್ರ ಸರ್ಕಾರ ಏಕಾಏಕಿ ಜಾರಿಗೊಳಿಸುವುದಕ್ಕೆ ಮುಂದಾಗಿರುವ ಟ್ರಾಯ್‌, ಈ ನೀತಿಗೆ ಪೂರ್ವ ಸಿದ್ಧತೆ ಮಾಡಿಕೊಂಡಂತೆ ಕಾಣುತ್ತಿಲ್ಲ. ಇನ್ನೇನು ನೀತಿ ಜಾರಿಗೆ ಕೆಲವೇ ದಿನಗಳು ಬಾಕಿ ಉಳಿದರೂ ಈವರೆಗೆ ಕೇಬಲ್‌ ಟಿವಿ ಅಪರೇಟರ್‌ಗಳಿಗೆ ಹೊಸ ಆಪರೇಟಿಂಗ್‌ ಸಿಸ್ಟಂ ನೀಡಿಲ್ಲ.

ಪ್ರಸ್ತುತ ಟಿವಿ ಚಾನಲ್‌ಗಳಿಂದ ಎಂಎಸ್‌ಓ (ಮಲ್ಟಿಸರ್ವಿಸ್‌ ಅಪರೇಟರ್‌)ಗಳು ಸಿಗ್ನಲ್‌ಗಳನ್ನು ಪಡೆದು ಕೇಬಲ್‌ ಮೂಲಕ ಕೇಬಲ್‌ ಟಿವಿ ಆಪರೇಟರ್‌ಗಳಿಗೆ ಕೊಡುತ್ತಾರೆ. ಕೇಬಲ್‌ ಟಿವಿ ಆಪರೇಟರ್‌ಗಳು ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಾರೆ. ಆದರೆ, ಹೊಸ ನೀತಿ ಜಾರಿಗೆ ಅನುಕೂಲವಾಗುವ ನೂತನ ಆಪರೇಟಿಂಗ್‌ ಸಿಸ್ಟಂ ಅನ್ನು ಕೇಬಲ್‌ ಆಪರೇಟರ್‌ಗಳಿಗೆ ನೀಡಬೇಕಾಗಿತ್ತು. ಆದರೆ, ಈ ವರೆಗೆ ನೀಡಿಲ್ಲ. ಒಂದು ವೇಳೆ ನೀಡಿದರೂ ಈಗಿರುವ ಕಡಿಮೆ ಅವಧಿಯಲ್ಲಿ ಕೋಟ್ಯಾಂತರ ಮಂದಿ ಕೇಬಲ್‌ ಟಿವಿ ಗ್ರಾಹಕರನ್ನು ನೋಂದಣಿ ಮಾಡುವುದಕ್ಕೆ ಸಾಧ್ಯವಿಲ್ಲ ಎನ್ನುತ್ತಾರೆ ಕೇಬಲ್‌ ಟಿವಿ ಆಪರೇಟರ್‌ಗಳು.

ಆಪ​ರೇ​ಟಿಂಗ್‌ ಸಿಸ್ಟಂ ಅನ್ನು ಒದ​ಗಿ​ಸದೇ ತರಾ​ತು​ರಿ​ಯಲ್ಲಿ ಈ ನೀತಿ ಜಾರಿ ಮಾಡಲು ಮುಂದಾ​ಗಿ​ರು​ವುದು ಸಮ​ಸ್ಯೆ​ಗಳ ಮೂಲ​ವಾ​ಗಿದೆ. ಹೀಗಾಗಿ ಗಡು​ವನ್ನು ವಿಸ್ತ​ರಿ​ಸು​ವುದು ಅನಿ​ವಾ​ರ್ಯ​ವಾ​ಗ​ಬ​ಹುದು. ಅಕ​ಸ್ಮಾತ್‌ ಟ್ರಾಯ್‌ ತನ್ನ ನೀತಿ​ಯನ್ನು ಡಿ. 29ರಿಂದಲೇ ಜಾರಿ ಮಾಡಲು ಪಟ್ಟು ಹಿಡಿ​ದರೆ ಮಾತ್ರ ರಾಜ್ಯ ಮಾತ್ರ​ವಲ್ಲ ಇಡೀ ದೇಶ​ದಲ್ಲಿ ವ್ಯವ​ಸ್ಥೆಯೇ ಹದ​ಗೆ​ಟ್ಟು​ಹೋ​ಗುವ ಸಾಧ್ಯ​ತೆ​ಯಿ​ದೆ.

ಡಿ.29ರಿಂದ ಪೇ ಚಾನೆಲ್‌ ಸ್ಥಗಿತ?:

ಹೊಸ ನೀತಿ ಕಟ್ಟುನಿಟ್ಟಾಗಿ ಜಾರಿ​ಯಾ​ದರೆ ಡಿ.29ಕ್ಕೆ ದೂರದರ್ಶನ ಮತ್ತು ಕೆಲವು ಉಚಿತ ಚಾನಲ್‌ಗಳು ಮಾತ್ರ ಪ್ರಸಾರವಾಗಲಿವೆ. ಉಳಿದಂತೆ ಎಲ್ಲ ಪೇ ಚಾನಲ್‌ಗಳು ಸ್ಥಗಿತಗೊಳ್ಳಲಿವೆ. ಕೋಟ್ಯಂತರ ಮಂದಿ ಕೇಬಲ್‌ ಟಿವಿ ಗ್ರಾಹಕರು ಇರುವುದರಿಂದ ಅವರನ್ನು ಒಂದೇ ಬಾರಿಗೆ ಎಲ್ಲರನ್ನು ಆಪರೇಟಿಂಗ್‌ ಸಿಸ್ಟಂಗೆ ಸೇರಿಸುವುದಕ್ಕೆ ಸಾಧ್ಯವಿಲ್ಲ, ಹಂತ ಹಂತವಾಗಿ ಸೇರಿಬೇಕಾಗುತ್ತದೆ. ಕಾರಣ ಮಲ್ಟಿಸರ್ವಿಸ್‌ ಅಪರೇಟರ್‌ಗಳ ಅಪರೇಟಿಂಗ್‌ ಸಿಸ್ಟಂ ಅಷ್ಟೊಂದು ದೊಡ್ಡದಾಗಿಲ್ಲ ಎಂದು ಕರ್ನಾಟಕ ರಾಜ್ಯಕೇಬಲ್‌ ಟಿವಿ ಆಪರೇಟರ್‌ ಆಸೋಸಿಯೇಷನ್‌ ಅಧ್ಯಕ್ಷ ಪ್ಯಾಟ್ರಿಕ್‌ ರಾಜು ತಿಳಿಸಿದ್ದಾರೆ.

ಮುಂದಿನ ತಿಂಗಳು ಜಿಯೋ ಎಂಟ್ರಿ

ಕಳೆದ ಆರು ತಿಂಗಳಯಿಂದ ಜಿಯೋ ಕಂಪನಿ ಕೇಬಲ್‌ ನೆಟ್‌ವರ್ಕ್ನ ದೊಡ್ಡ ನೆಟ್‌ವರ್ಕ್ಗಳಾದ ಡೆನ್‌ ನೆಟ್‌ ವರ್ಕ್, ಹಾಥ್‌ ವೇ ನೆಟ್‌ ವರ್ಕ್ಗಳನ್ನು 5,500 ಕೋಟಿ ರುಗಳಿಗೆ ಖರೀದಿ ಮಾಡಿದ್ದಾರೆ. ಇನ್ನೊಂದು ತಿಂಗಳಲ್ಲಿ ಜಿಯೋ ಕಂಪನಿ ಕೇಬಲ್‌ ನೆಟ್‌ವರ್ಕ್ ಉದ್ಯಮಕ್ಕೆ ಬರಲಿದೆ. ಹಾಗಾಗಿ ತರತುರಿಯಲ್ಲಿ ಟ್ರಾಯ್‌ ಹೊಸ ನೀತಿ ಜಾರಿ ಮಾಡುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ರಾಜ್ಯ ಕೇಬಲ್‌ ಟಿವಿ ಅಪರೇಟರ್‌ ಅಸೋಸಿಯೇಷನ್‌ ಅಧ್ಯಕ್ಷ ಪ್ಯಾಟ್ರಿಕ್‌ ರಾಜು ಆರೋಪಿಸಿದ್ದಾರೆ.


ಹೊಸ ನೀತಿ ಜಾರಿ ಮುಂದೂಡಿಕೆ ?

ಟ್ರಾಯ್‌ ನೀತಿ ಜಾರಿ ಮಾಡುವುದಕ್ಕೆ ಹಲವಾರು ತಾಂತ್ರಿಕ ಸಮಸ್ಯೆಗಳು ಇರುವುದರಿಂದ ಗ್ರಾಹಕರಿಗೆ ಮತ್ತು ಕೇಬಲ್‌ ಅಪರೇಟರ್‌ಗಳಿಗೆ ಸಾಕಷ್ಟುತೊಂದರೆ ಉಂಟಾಗುವ ಸಾಧ್ಯತೆಗಳಿರುವುದರಿಂದ ಡಿ.29ಕ್ಕೆ ನೀತಿ ಜಾರಿಗೆ ನೀಡಲಾಗಿರುವು ಗಡುವು ಮೂಂದೂಡಿಕೆ ಸಾಧ್ಯತೆಗಳಿವೆ. ಆದರೆ, ಈ ಬಗ್ಗೆ ಟ್ರಾಯ್‌ ಅಥವಾ ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಬೇಕಾಗಿದೆ.


ಸೆಟ್‌ಅಪ್‌ ಬಾಕ್ಸ್‌ ಹಾಕಿಸುವುದಕ್ಕೆ ಮೂರು ವರ್ಷ ಗಡುವು ನೀಡಲಾಯಿತು. ಆದರೆ, ಹೊಸ ನೀತಿ ಜಾರಿಗೆ ಯಾಕೆ ಇಷ್ಟುತರಾತುರಿಯಲ್ಲಿ ಮಾಡಲಾಗುತ್ತಿದೆ. ಕನಿಷ್ಠ ಮೂರು ತಿಂಗಳು ಕಾಲಾವಧಿ ನೀಡಿದರೆ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ವ್ಯವಸ್ಥೆ ಸರಿಪಡಿಸಬಹುದಾಗಿದೆ.

ಪ್ಯಾಟ್ರಿಕ್‌ ರಾಜು, ಅಧ್ಯಕ್ಷ. ರಾಜ್ಯ ಕೇಬಲ್‌ ಟಿವಿ ಅಪರೇಟರ್‌ ಅಸೋಸಿಯೇಷನ್‌


ಟೀವಿ ಗ್ರಾಹಕರ ವಿವರ

ಗ್ರಾಹಕರು    ದೇಶ    ಕರ್ನಾಟಕ    ಬೆಂಗಳೂರು

ಕೇಬಲ್‌ ಟಿವಿ    9.6 ಕೋಟಿ    60-80 ಲಕ್ಷ    25-30 ಲಕ್ಷ

ಡಿಟಿಎಚ್‌    3.5 ಕೋಟಿ    6-10 ಲಕ್ಷ    3-5 ಲಕ್ಷ

Follow Us:
Download App:
  • android
  • ios