Asianet Suvarna News Asianet Suvarna News

ರಾಮಲಿಂಗಾರೆಡ್ಡಿ ಹೇಳಿದ ಅಚ್ಚರಿ ಭವಿಷ್ಯ

ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ ಅಚ್ಚರಿಯ ಭವಿಷ್ಯವೊಂದನ್ನು ನುಡಿದಿದ್ದಾರೆ. ಇದೇ ಡಿಸೆಂಬರ್ 22 ಕ್ಕೆ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದ್ದು ಇದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

Cabinet Will Not Be Expanded On December 22
Author
Bengaluru, First Published Dec 7, 2018, 7:38 AM IST

ಬೆಂಗ​ಳೂರು :  ಸಚಿವ ಸಂಪು​ಟ​ ವಿಸ್ತ​ರಣೆ ಮುಂದೂ​ಡಿಕೆ ಕಂಡ ಬಗ್ಗೆ ಕಾಂಗ್ರೆ​ಸ್‌ನ ಸಚಿವ ಸ್ಥಾನಾ​ಕಾಂಕ್ಷಿ​ಗ​ಳಲ್ಲಿ ಅಸ​ಮಾ​ಧಾನ ಮಡು​ಗ​ಟ್ಟಿದೆ. ಈ ಅತೃ​ಪ್ತಿಗೆ ಪ್ರಮುಖ ನಾಯಕ ಹಾಗೂ ಹಿರಿಯ ಶಾಸಕ ರಾಮ​ಲಿಂಗಾ​ರೆಡ್ಡಿ ಮತ್ತು ಕಂಪ್ಲಿ ಶಾಸಕ ಗಣೇಶ್‌ ಅವರು ಧ್ವನಿ​ಯಾ​ಗಿದ್ದಾರೆ. ಸಮನ್ವಯ ಸಮಿತಿ ಡಿ. 22ಕ್ಕೆ ಸಂಪುಟ ವಿಸ್ತ​ರ​ಣೆಯ ಮಹೂರ್ತ ನಿಗದಿ ಪಡಿ​ಸಿ​ರು​ವುದು ಕೇವಲ ಕಣ್ಣೊ​ರೆ​ಸುವ ತಂತ್ರ. ಲೋಕ​ಸಭಾ ಚುನಾ​ವಣೆವರೆಗೂ ಸಂಪುಟ ವಿಸ್ತ​ರ​ಣೆ​ಯಾ​ಗು​ವು​ದಿಲ್ಲ ಎಂದು ರಾಮಲಿಂಗಾರೆಡ್ಡಿ ಹಾಗೂ ಗಣೇಶ್‌ ಭವಿಷ್ಯ ನುಡಿದಿದ್ದು, ಅಚ್ಚರಿ ಮೂಡಿಸಿದ್ದಾರೆ.

ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ರಾಮ​ಲಿಂಗಾ​ರೆಡ್ಡಿ ಅವರು, ಡಿ.22ರಂದು ಸಂಪುಟ ವಿಸ್ತರಣೆ ಸಾಧ್ಯವೇ ಇಲ್ಲ. ಶೂನ್ಯ ಮಾಸದಲ್ಲಿ ವಿಸ್ತ​ರಣೆ ನಡೆ​ಯು​ವು​ದಿಲ್ಲ. ಮೈತ್ರಿ ಸರ್ಕಾರ ಅಧಿ​ಕಾ​ರಕ್ಕೆ ಬಂದ ನಂತರ ಇದು​ವ​ರೆಗೂ 10ಕ್ಕೂ ಹೆಚ್ಚಿನ ಬಾರಿ ಸಂಪುಟ ವಿಸ್ತರಣೆಯನ್ನು ಮುಂದೂಡಲಾಗಿದೆ. ನೇರವಾಗಿ ಸಂಸತ್‌ ಚುನಾವಣೆವರೆಗೂ ಸಂಪುಟ ವಿಸ್ತರಣೆ ಮಾಡುವುದಿಲ್ಲ ಎಂದಾ​ದರೂ ಹೇಳಿ​ದರೆ, ಶಾಸಕರು ತಮ್ಮ ಕ್ಷೇತ್ರಗಳ ಕೆಲ​ಸ​ವ​ನ್ನಾ​ದರೂ ನೋಡ​ಬ​ಹುದು ಎಂದ​ರು.

ಏತನ್ಮಧ್ಯೆ ಸಂಪುಟ ವಿಸ್ತ​ರಣೆ ಮುಂದೂ​ಡಿಕೆ ಬಗ್ಗೆ ಅಸಮಾಧಾನ ವ್ಯಕ್ತ​ಪ​ಡಿ​ಸಿದ ಕಂಪ್ಲಿ ಶಾಸಕ ಗಣೇಶ ಅವರು, ‘22ಕ್ಕೆ ಮಹೂರ್ತ ಎಂಬು​ದೆಲ್ಲ ಕಣ್ಣೊ​ರೆ​ಸುವ ತಂತ್ರ. ನನ್ನ ಪ್ರಕಾರ ಲೋಕ​ಸಭಾ ಚುನಾ​ವ​ಣೆ ಮುಗಿ​ಯು​ವ​ವ​ರೆಗೂ ಸಂಪುಟ ವಿಸ್ತ​ರ​ಣೆ​ಯಾ​ಗು​ವು​ದಿಲ್ಲ’ ಎಂದ​ರು.

ಬ್ರಾಹ್ಮಣರಿಗೇ ಹೆಚ್ಚು ಅಧಿಕಾರ- ಅತೃಪ್ತಿ:

ಕಾಂಗ್ರೆ​ಸ್‌ನ ಹಿರಿಯ ಶಾಸ​ಕ​ರನ್ನು ನಿರ್ಲ​ಕ್ಷಿ​ಸು​ತ್ತಿ​ರುವ ಬಗ್ಗೆ ತೀವ್ರ ಅಸ​ಮಾ​ಧಾನ ವ್ಯಕ್ತ​ಪ​ಡಿ​ಸಿದ ರಾಮಲಿಂಗಾರೆಡ್ಡಿ ಅವರು, ಮಂತ್ರಿ ಸ್ಥಾನವನ್ನು ಜಾತಿ ಆಧಾರದ ಮೇಲೆ ಪರಿಗಣಿಸಬಾರದು. ಹಿರಿ​ತನ, ಅರ್ಹತೆ ನೋಡಿ ನೀಡಬೇಕು ಎಂಬುದನ್ನು ಮೊದಲಿನಿಂದಲೂ ಹೇಳಿಕೊಂಡಿಯೇ ಬಂದಿದ್ದೇನೆ. ಆದರೆ, ಸಚಿವ ಸ್ಥಾನ ನೀಡು​ವಾಗ ಜಾತಿಗೆ ಇಂತಿಷ್ಟೇ ಎಂದು ಕೆಲ ಜಾತಿಯ ಹಿರಿ​ಯರನ್ನು ಪಕ್ಕಕ್ಕೆ ಸರಿ​ಸ​ಲಾ​ಗು​ತ್ತದೆ. ಆದರೆ, ಬ್ರಾಹ್ಮಣ ಜನಾಂಗದ ನಾಲ್ವರು ಶಾಸಕರ ಪೈಕಿ ಕೆ.ಆರ್‌. ರಮೇಶ್‌ಕುಮಾರ್‌ ಸ್ಪೀಕರ್‌ ಆಗಿದ್ದಾರೆ. ದಿನೇಶ್‌ ಗುಂಡೂರಾವ್‌ ಪಕ್ಷದ ಅಧ್ಯಕ್ಷರಾಗಿದ್ದಾರೆ. ಆರ್‌.ವಿ. ದೇಶಪಾಂಡೆ ಸಚಿವರಾಗಿದ್ದಾರೆ. ಅಂದರೆ, ನಾಲ್ವ​ರಲ್ಲಿ ಮೂವರು ಅಧಿ​ಕಾರ ಪಡೆ​ದಿ​ದ್ದಾರೆ. ಈ ನೀತಿ ಉಳಿದ ಜಾತಿ​ಯ​ವ​ರಿಗೆ ಏಕೆ ಅನು​ಸ​ರಿ​ಸು​ವು​ದಿಲ್ಲ ಎಂದು ಪ್ರಶ್ನಿ​ಸಿ​ದರು.

ಇನ್ನು ಹೊಸಬರಿಗೆ ಅವಕಾಶ ಕಲ್ಪಿಸಬೇಕು ಎಂಬ ಕಾರಣಕ್ಕೆ ಕೆಲವು ಹಿರಿಯ ನಾಯಕರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಸಬೂಬು ನೀಡ​ಲಾ​ಗು​ತ್ತಿದೆ. ಆದರೆ, ಈ ಸರ್ಕಾ​ರ​ದಲ್ಲಿ ದೇಶ​ಪಾಂಡೆ, ಜಾಜ್‌ರ್‍ ಹಾಗೂ ಪರ​ಮೇ​ಶ್ವ​ರ್‌​ರಂತಹ ಹಿರಿಯ ನಾಯ​ಕರು ಸಚಿ​ವ​ರಾ​ಗಿ​ಲ್ಲವೇ ಎಂದು ಅವರು ಪ್ರಶ್ನಿ​ಸಿ​ದರು.

1973ರಲ್ಲಿ ಪಕ್ಷ ಸೇರಿದ್ದು, ಕಾಲೇಜು ದಿನಗಳಿಂದಲೂ ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ. ನಾನು 7 ಬಾರಿ ಶಾಸಕನಾಗಿದ್ದೇನೆ. ಎಂದಿಗೂ ಸಚಿವರಾಗಿ ಮಾಡಿ ಎಂದು ಕೇಳಿಕೊಂಡಿಲ್ಲ. ವೀರಪ್ಪ ಮೊಯ್ಲಿ, ಎಸ್‌.ಎಂ. ಕೃಷ್ಣ, ಸಿದ್ದರಾಮಯ್ಯ ಸೇರಿದಂತೆ ಯಾರನ್ನೂ ಕೇಳಿಲ್ಲ. ಈಗಲೂ ಕೇಳು​ವು​ದಿಲ್ಲ. ಸಚಿವ ಸ್ಥಾನ ನೀಡಿ​ದರೆ ಕೆಲಸ ಮಾಡು​ತ್ತೇನೆ. ಇಲ್ಲ​ದಿ​ದ್ದರೆ, ನನ್ನ ಕ್ಷೇತ್ರ​ವನ್ನು ನೋಡಿ​ಕೊಂಡು ಹೋಗು​ತ್ತೇನೆ. ಆದರೆ, ತಾರ​ತಮ್ಯ ನೀತಿ ಹಾಗೂ ಹಿರಿ​ಯ​ರನ್ನು ಕಡೆ​ಗ​ಣಿ​ಸುವ ಧೋರಣೆ ಸರಿ​ಯಲ್ಲ ಎಂದು ಬೇಸರ ವ್ಯಕ್ತ​ಪ​ಡಿ​ಸಿ​ದ​ರು.

Follow Us:
Download App:
  • android
  • ios