ಸದ್ಯ ಎಲ್ಲೆಡೆ #MeToo ಅಭಿಯಾನ ಸದ್ದು ಮಾಡುತ್ತಿದ್ದರೆ ಇಲ್ಲೋರ್ವ ಕ್ಯಾಬ್ ಚಾಲಕನ ಕಾರ್ಯ ಎಲ್ಲರಿಂದ ಪ್ರಶಂಸೆಗೆ ಪಾತ್ರವಾಗಿದೆ.
ನವದೆಹಲಿ : ಸದ್ಯ ಎಲ್ಲೆಡೆ #MeToo ಅಭಿಯಾನ ಸದ್ದು ಮಾಡುತ್ತಿದ್ದರೆ ಇತ್ತ ಇಲ್ಲೋರ್ವ ಕ್ಯಾಬ್ ಚಾಲಕನ ಕಾರ್ಯ ಎಲ್ಲರಿಂದ ಪ್ರಶಂಸೆಗೆ ಪಾತ್ರವಾಗಿದೆ.
ಸಂತೋಷ್ ಎನ್ನುವ ಉಬರ್ ಕ್ಯಾಬ್ ಚಾಲಕ ಪ್ರಿಯಾಸ್ಮಿತಾ ಗುಹಾ ಮತ್ತು ಆಕೆಯ ತಾಯಿಯನ್ನು ಅವರ ಸ್ಥಳಕ್ಕೆ ಡ್ರಾಪ್ ಮಾಡಿದ್ದಾರೆ. ಆದರೆ ಅಷ್ಟರಲ್ಲೇ ಅವರು ತೆರಳಬೇಕಿದ್ದ ಸ್ಥಳದಲ್ಲಿ ಗೇಟ್ ಬಂದ್ ಮಾಡಲಾಗಿತ್ತು.
ಸುತ್ತಮುನ್ನ ಯಾರೂ ಕೂಡ ಇಲ್ಲದ ಈ ಸ್ಥಳದಲ್ಲಿ ಇಬ್ಬರನ್ನೇ ಬಿಟ್ಟು ಬರುವುದು ಸೂಕ್ತವಲ್ಲವೆಂದು ಅರಿತ ಕ್ಯಾಬ್ ಚಾಲಕ ಒಂದೂವರೆ ಗಂಟೆಗಳ ಕಾಲ ಅವರಿಬ್ಬರಿಗಾಗಿ ಸ್ಥಳದಲ್ಲಿಯೇ ಕಾಯ್ದು ಮಧ್ಯ ರಾತ್ರಿ ಅವರನ್ನು ಸುರಕ್ಷಿತವಾಗಿ ಸೇರಬೇಕಾದ ಸ್ಥಳಕ್ಕೆ ಸೇರಿಸಿ ಬಂದಿದ್ದಾರೆ.
ಬೇರೆ ಪ್ರಯಾಣಿಕರು ಕ್ಯಾಬ್ ಬುಕ್ ಮಾಡಲು ಯತ್ನಿಸಿದ್ದರೂ ಅವರಿಗೆ ಬುಕಿಂಗ್ ಕ್ಯಾನ್ಸಲ್ ಮಾಡುವ ಮೂಲಕ ತಾಯಿ ಮಗಳನ್ನು ಕಾದು ಬಂದಿದ್ದಾರೆ.
ಮಧ್ಯ ರಾತ್ರಿ ಒಂದು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು ಈ ಬಗ್ಗೆ ಸ್ವತಃ ಸ್ಮಿತಾ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು , #Me Too ನಡೆಯುತ್ತಿರುವ ಈ ಸಂದರ್ಭದಲ್ಲಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದಾರೆ.
