ಮೇಲ್ಮನೆಗೆ ಬೈರತಿ ಸುರೇಶ್‌ ರಾಜೀನಾಮೆ

First Published 10, Apr 2018, 8:10 AM IST
Byrathi Suresh Resignation for MLC
Highlights

ವಿಧಾನಪರಿಷತ್‌ ಸದಸ್ಯ ಬೈರತಿ ಸುರೇಶ್‌ ಅವರು ತಮ್ಮ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆಯನ್ನು ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅಂಗೀಕರಿಸಿದ್ದಾರೆ.

ಬೆಂಗಳೂರು : ವಿಧಾನಪರಿಷತ್‌ ಸದಸ್ಯ ಬೈರತಿ ಸುರೇಶ್‌ ಅವರು ತಮ್ಮ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆಯನ್ನು ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅಂಗೀಕರಿಸಿದ್ದಾರೆ.

ಸೋಮವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸಭಾಪತಿಗಳು, ಬೈರತಿ ಸುರೇಶ್‌ ಭಾನುವಾರ ತಮ್ಮ ನಿವಾಸಕ್ಕೆ ಆಗಮಿಸಿ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಪತ್ರ ಕ್ರಮಬದ್ಧವಾಗಿರುವುದರಿಂದ ಅಂಗೀಕರಿಸಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರಬಹುದೆಂದು ಅವರು ತಿಳಿಸಿದರು.

ಹೆಬ್ಬಾಳದಿಂದ ಕಣಕ್ಕೆ: ಬೈರತಿ ಸುರೇಶ್‌ ಅವರು ಹೆಬ್ಬಾಳ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಮೇಲ್ಮನೆ ಸದಸ್ಯತ್ವಕ್ಕೆ ಅವರು ರಾಜೀನಾಮೆ ನೀಡಿದ್ದಾರೆ.

loader