ಪಶ್ಚಿಮ ಬಂಗಾಳದಲ್ಲಿ ತೀರಾ ನಗಣ್ಯವಾಗಿದ್ದ ಬಿಜೆಪಿಗೆ ಒಂದಷ್ಟು ಸಮಾಧಾನಕರ ಅಂಶವೂ ಸಿಕ್ಕಿದೆ. ಕೂಚ್ ಬಿಹಾರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಎರಡನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಇದು ಬಂಗಾಳದಲ್ಲಿ ಕೇಸರಿ ಬಣ್ಣ ಹರಡುತ್ತಿರುವ ಸೂಚನೆಯೇ? ಅಥವಾ ಮೋದಿಗೆ ವ್ಯಕ್ತವಾಗುತ್ತಿರುವ ಜನಪ್ರಿಯತೆಯೇ?

ನವದೆಹಲಿ(ನ. 23): ದೇಶದ ವಿವಿಧೆಡೆ 4 ಲೋಕಸಭಾ ಸ್ಥಾನ ಹಾಗೂ 10 ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಆಯಾ ರಾಜ್ಯಗಳ ಆಡಳಿತ ಪಕ್ಷಗಳ ಅಭ್ಯರ್ಥಿಗಳು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೋಟು ರದ್ದು ಕ್ರಮ ಘೋಷಣೆಯಾದ ಬಳಿಕ ಮೋದಿ ಸರಕಾರಕ್ಕೆ ಇದು ಮೊದಲ ಅಗ್ನಿಪರೀಕ್ಷೆಯಾಗಿತ್ತು. ಇದರಲ್ಲಿ ಬಿಜೆಪಿ ಒಂದಷ್ಟು ಯಶಸ್ಸು ಗಳಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹಾಗೂ ಜಯಲಲಿತಾ ಅವರ ಪಕ್ಷಗಳೂ ಭರ್ಜರಿ ಜಯ ಪಡೆದಿವೆ. ಕಾಂಗ್ರೆಸ್ ಪಕ್ಷ ಮುಖಭಂಗ ಅನುಭವಿಸಿದೆ. ಕಮ್ಯೂನಿಸ್ಟ್ ಪಕ್ಷಗಳಿಗೆ ಮಿಶ್ರಫಲ ಸಿಕ್ಕಿದೆ.

ಬಿಜೆಪಿಗೆ ಲಾಭವೆಷ್ಟು?
ಅಸ್ಸಾಂನ ಲಖೀಂಪುರ್ ಹಾಗೂ ಮಧ್ಯಪ್ರದೇಶದ ಶಾಹದೋಲ್ ಲೋಕಸಭಾ ಸ್ಥಾನಗಳನ್ನು ಬಿಜೆಪಿ ಉಳಿಸಿಕೊಂಡಿದೆ. ಲಖೀಂಪುರದಲ್ಲಿ ಬಿಜೆಪಿ ನಿರಾಯಾಸ ಗೆಲುವು ಸಾಧಿಸಿದರೆ, ಶಹದೋಲ್'ನಲ್ಲಿ ಪ್ರಯಾಸಕರ ಜಯ ಸಿಕ್ಕಿದೆ. ಮಧ್ಯಪ್ರದೇಶದ ಈ ಕ್ಷೇತ್ರದಲ್ಲಿ ಬಿಜೆಪಿ ಕಳೆದ ಬಾರಿ ಸುಮಾರು ಎರಡೂವರೆ ಲಕ್ಷ ಮತಗಳ ಅಂತರದಿಂದ ಜಯಿಸಿತ್ತು. ಈ ಬಾರಿ ಈ ಅಂತರ 60 ಸಾವಿರಕ್ಕೆ ಕುಸಿದಿದೆ.

ಇನ್ನು, 10 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಮೂರರಲ್ಲಿ ಗೆಲುವು ಸಾಧಿಸಿದೆ. ಈ ಮೂರರ ಪೈಕಿ ಬಿಜೆಪಿ ಎರಡು ಸ್ಥಾನಗಳನ್ನು ಕಾಂಗ್ರೆಸ್'ನಿಂದ ಕಸಿದುಕೊಂಡಿದೆ. ಮಧ್ಯಪ್ರದೇಶದ ನೆಪಾನಗರ್ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿದೆ. ಅಸ್ಸಾಂನ ಬೈತಾಲಾಂಗ್ಸೋ ಮತ್ತು ಅರುಣಾಚಲ ಪ್ರದೇಶದ ಹಾಯುಲಿಯಾಂಗ್ ಕ್ಷೇತ್ರಗಳು ಕಾಂಗ್ರೆಸ್'ನ ಕೈತಪ್ಪಿವೆ.

ದೀದಿ ದಿಗ್ವಿಜಯ:
ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ಭರ್ಜರಿ ಗೆಲುವು ಪಡೆದಿದೆ. ಎರಡು ಲೋಕಸಭಾ ಕ್ಷೇತ್ರಗಳು ಹಾಗೂ ಒಂದು ವಿಧಾನಸಭಾ ಕ್ಷೇತ್ರ, ಈ ಎಲ್ಲದರಲ್ಲೂ ಟಿಎಂಸಿ ಪಾರಮ್ಯ ಮೆರೆದಿದೆ. ಮೋದಿಯವರ ನೋಟ್'ಬ್ಯಾನ್ ಕ್ರಮದ ವಿರುದ್ಧ ಬೀದಿಗೆ ಇಳಿದಿದ್ದ ಮಮತಾ ಬ್ಯಾನರ್ಜಿ, ಇದು ಮೋದಿ ವಿರುದ್ಧ ವ್ಯಕ್ತವಾದ ಜನಾದೇಶ ಎಂದು ಪ್ರತಿಪಾದಿಸಿದ್ದಾರೆ. ಈ ಮೂರು ಕ್ಷೇತ್ರಗಳಲ್ಲಿ ಎಡಪಕ್ಷಗಳು ಹೀನಾಯ ಸೋಲನುಭವಿಸಿವೆ. ಮೋಂಟೇಶ್ವರ್ ವಿಧಾನಸಭಾ ಕ್ಷೇತ್ರಗಳಲ್ಲಿ ಟಿಎಂಸಿ ಆರ್ಭಟಕ್ಕೆ ಸಿಕ್ಕು ಉಳಿದೆಲ್ಲಾ ಪಕ್ಷಗಳ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ತೀರಾ ನಗಣ್ಯವಾಗಿದ್ದ ಬಿಜೆಪಿಗೆ ಒಂದಷ್ಟು ಸಮಾಧಾನಕರ ಅಂಶವೂ ಸಿಕ್ಕಿದೆ. ಕೂಚ್ ಬಿಹಾರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಎರಡನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಇದು ಬಂಗಾಳದಲ್ಲಿ ಕೇಸರಿ ಬಣ್ಣ ಹರಡುತ್ತಿರುವ ಸೂಚನೆಯೇ? ಅಥವಾ ಮೋದಿಗೆ ವ್ಯಕ್ತವಾಗುತ್ತಿರುವ ಜನಪ್ರಿಯತೆಯೇ? ಕಾಲವೇ ಉತ್ತರಿಸಬೇಕು.

ಅಮ್ಮನಿಗೆ ಬೆಂಬಲ: ತಮಿಳುನಾಡಿನಲ್ಲಿ ನಡೆದ ಎಲ್ಲಾ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷ ಕ್ಲೀನ್ ಸ್ವೀಪ್ ಮಾಡಿದೆ. ಇದರಲ್ಲಿ ಡಿಎಂಕೆ ಒಂದು ಕ್ಷೇತ್ರವನ್ನು ಕಳೆದುಕೊಂಡಿದೆ.

ಕಾಂಗ್ರೆಸ್'ಗೆ ನಷ್ಟ:
ಒಟ್ಟು 14 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಒಂದೇ ಒಂದು. ಆದರೆ, ಕಳೆದುಕೊಂಡಿದ್ದು ಮೂರು. ಪುದುಚ್ಚೇರಿಯ ನೆಲ್ಲಿತೋಪ್ ವಿಧಾನಸಭಾ ಕ್ಷೇತ್ರವನ್ನು ಮಾತ್ರ ಕಾಂಗ್ರೆಸ್ ಉಳಿಸಿಕೊಂಡಿದೆ. ತ್ರಿಪುರಾದ ಎರಡು ಕ್ಷೇತ್ರಗಳಲ್ಲಿ ಸಿಪಿಐ-ಎಂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿಯನ್ನು ಹತ್ತಿಕ್ಕುವ ವಿಶ್ವಾಸದಲ್ಲಿದ್ದ ಕಾಂಗ್ರೆಸ್'ಗೆ ಒಂದೂ ದಕ್ಕದೇ ಹೋಗಿದ್ದು ನಿರಾಶೆ ತಂದಿದೆ.

ಉಪಚುನಾವಣೆಯ ಫಲಿತಾಂಶದ ವಿವರ ಇಂತಿದೆ...

ಲೋಕಸಭಾ ಕ್ಷೇತ್ರಗಳು

ಸಂ.ಕ್ಷೇತ್ರಗೆಲುವುಹಿಂದಿನ ವಿಜೇತರು
1)ಲಖೀಂಪುರ್, ಅಸ್ಸಾಮ್ಬಿಜೆಪಿಬಿಜೆಪಿ
2)ಶಾಹದೋಲ್, ಮಧ್ಯಪ್ರದೇಶಬಿಜೆಪಿಬಿಜೆಪಿ
3)ಕೂಚ್ ಬಿಹಾರ್, ಪ.ಬಂಗಾಳಟಿಎಂಸಿಟಿಎಂಸಿ
4)ತಾಮಲುಕ್, ಪ.ಬಂಗಾಳಟಿಎಂಸಿಟಿಎಂಸಿ

ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ

ಸಂ.ಕ್ಷೇತ್ರಗೆಲುವುಹಿಂದಿನ ವಿಜೇತರು
1)ಬೈತಾಲಾಂಗ್ಸೋ, ಅಸ್ಸಾಮ್ಬಿಜೆಪಿಕಾಂಗ್ರೆಸ್
2)ಹಾಯುಲಿಯಾಂಗ್, ಅರುಣಾಚಲಪ್ರದೇಶಬಿಜೆಪಿಕಾಂಗ್ರೆಸ್
3)ನೆಪಾನಗರ್, ಮಧ್ಯಪ್ರದೇಶಬಿಜೆಪಿಬಿಜೆಪಿ
4)ಮೋಂಟೇಶ್ವರ್, ಪ.ಬಂಗಾಳಟಿಎಂಸಿಟಿಎಂಸಿ
5)ತಂಜಾವೂರ್, ತಮಿಳುನಾಡುಎಐಎಡಿಎಂಕೆಎಐಎಡಿಎಂಕೆ
6)ಅರವಕ್ಕುರಿಚಿ, ತಮಿಳುನಾಡುಎಐಎಡಿಎಂಕೆಡಿಎಂಕೆ
7)ತಿರುಪ್ರರನ್'ಕುಂಡ್ರಂ, ತಮಿಳುನಾಡುಎಐಎಡಿಎಂಕೆಎಐಎಡಿಎಂಕೆ
8)ನೆಲ್ಲಿತೋಪ್, ಪುದುಚೇರಿಕಾಂಗ್ರೆಸ್ಕಾಂಗ್ರೆಸ್
9)ಬರ್ಜಾಲಾ, ತ್ರಿಪುರಾಸಿಪಿಐ-ಎಂಕಾಂಗ್ರೆಸ್
10)ಖೊವಾಯ್, ತ್ರಿಪುರಾಸಿಪಿಐ-ಎಂಸಿಪಿಐ-ಎಂ

ಪಕ್ಷಾವಾರು ಫಲಿತಾಂಶ

ಲೋಕಸಭಾ ಕ್ಷೇತ್ರಗಳು(4)

ಪಕ್ಷ

ಗೆಲುವು

ಬಿಜೆಪಿ02
ಕಾಂಗ್ರೆಸ್00
ಟಿಎಂಸಿ02
ಸಿಪಿಐ-ಎಂ00
ಇತರೆ00

ವಿಧಾನಸಭಾ ಕ್ಷೇತ್ರಗಳು(14)

ಪಕ್ಷ

ಗೆಲುವು

ಬಿಜೆಪಿ03 (+2)
ಕಾಂಗ್ರೆಸ್01 (-3)
ಎಐಎಡಿಎಂಕೆ03 (+1)
ಸಿಪಿಐ-ಎಂ02 (+1)
ಟಿಎಂಸಿ01
ಡಿಎಂಕೆ00 (-1)