Asianet Suvarna News Asianet Suvarna News

ಸಿದ್ದು ಬಂದ್ರು ನಿವಾರಣೆಯಾಗಲಿಲ್ಲ ಗೊಂದಲ ?

ಇಂದು ಕೆ.ಆರ್. ಪೇಟೆಯಲ್ಲಿ ನಡೆಯುತ್ತಿರುವ ಸಭೆಗೆ ಉಭಯ ಪಕ್ಷಗಳ ನಾಯಕರು ಗೈರು ಹಾಜರಾಗಿದ್ದಾರೆ. ಅ. 27ರಂದು  ಕೆ.ಆರ್. ಪೇಟೆಗೆ ಚುನಾವಣಾ ಪ್ರಚಾರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಲಿದ್ದು, ಈ ಹಿನ್ನಲೆಯಲ್ಲಿ ಸಭೆ ನಡೆಯುತ್ತಿದ್ದು ಕಾಂಗ್ರೆಸ್ ಮುಖಂಡರ್ಯಾರು ಸಭೆಗೆ ಆಗಮಿಸಿಲ್ಲ. ಬಿಕ್ಕಟ್ಟಿನ ಬಗ್ಗೆ ಬಾಯ್ಬಿಟ್ಟರೆ ಶಿಸ್ತುಕ್ರಮ ಎದುರಿಸ ಬೇಕಾಗುತ್ತದೆ. ಆದ ಕಾರಣ ಮೌನವಾಗಿ ಜೆಡಿಎಸ್'ನಿಂದ ಕಾಂಗ್ರೆಸ್ ನಾಯಕರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

By Poll: JDS feels the heat in Mandya
Author
Bengaluru, First Published Oct 25, 2018, 5:19 PM IST

ಮಂಡ್ಯ[ಅ.25]: ಸಕ್ಕರೆ ನಾಡಿನ ಕೈ - ಜೆಡಿಎಸ್ ನಾಯಕರಲ್ಲಿ ಇನ್ನೂ ಅಸಮಾಧಾನದ ಹೊಗೆ ನಿವಾರಣೆಯಾಗಿಲ್ಲ. ಉಪ ಚುನಾವಣೆಗೆ ಪ್ರಚಾರ ಆರಂಭವಾದರೂ ಇಂದಿಗೂ ಎರಡೂ ಪಕ್ಷದ ಮುಖಂಡರು ಒಟ್ಟಿಗೆ ಕಾಣಿಸಿಕೊಂಡಿಲ್ಲ.

ನಿನ್ನೆಯಷ್ಟೆ ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ, ಎರಡೂ ಪಕ್ಷದ ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿಲ್ಲ. ನಾಳೆಯಿಂದ ಜೆಡಿಎಸ್ ಪರ ಕಾಂಗ್ರೆಸ್ ನಾಯಕರು ಪ್ರಚಾರ ಮಾಡಲಿದ್ದಾರೆ ಎಂಬ ಭರವಸೆ ನೀಡಿದ್ದರು. ಆದರೆ ನಿನ್ನೆ ಸಿದ್ದರಾಮಯ್ಯ ಎದುರು ಕಾಂಗ್ರೆಸ್ ಮುಖಂಡರು ಮೌನವಾಗಿದ್ದರು.

ಇಂದು ಕೆ.ಆರ್. ಪೇಟೆಯಲ್ಲಿ ನಡೆಯುತ್ತಿರುವ ಸಭೆಗೆ ಉಭಯ ಪಕ್ಷಗಳ ನಾಯಕರು ಗೈರು ಹಾಜರಾಗಿದ್ದಾರೆ. ಅ. 27ರಂದು ಕೆ.ಆರ್. ಪೇಟೆಗೆ ಚುನಾವಣಾ ಪ್ರಚಾರಕ್ಕೆ ಹೆಚ್.ಡಿ. ಕುಮಾರಸ್ವಾಮಿ ಆಗಮಿಸಲಿದ್ದು, ಈ ಹಿನ್ನಲೆಯಲ್ಲಿ ಸಭೆ ನಡೆಯುತ್ತಿದ್ದು ಕಾಂಗ್ರೆಸ್ ಮುಖಂಡರ್ಯಾರು ಸಭೆಗೆ ಆಗಮಿಸಿಲ್ಲ. ಬಿಕ್ಕಟ್ಟಿನ ಬಗ್ಗೆ ಬಾಯ್ಬಿಟ್ಟರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ. ಆದ ಕಾರಣ ಮೌನವಾಗಿ ಜೆಡಿಎಸ್'ನಿಂದ ಕಾಂಗ್ರೆಸ್ ನಾಯಕರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

ರಾಮನಗರದಲ್ಲಿ ಅನಿತಾ ಬಿರುಸಿನ ಪ್ರಚಾರ 
ರಾಮನಗರ ಉಪ ಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅನಿತಾ ಕುಮಾರಸ್ವಾಮಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದ ಹಾರೋಹಳ್ಳಿ, ಮರಳವಾಡಿಯಲ್ಲಿ ನಡೆಸಿದ ಪ್ರಚಾರದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್, ಎಂಎಲ್'ಸಿ ರವಿ ಹಾಗೂ ಜೆಡಿಎಸ್ ಮುಖಂಡ ಪಿ.ಜಿ.ಆರ್. ಸಿಂಧ್ಯಾ ಸೇರಿದಂತೆ ಹಲವು ಮುಖಂಡರು ಜೊತೆಯಾದರು.

 

Follow Us:
Download App:
  • android
  • ios