"ನಾವು ನ್ಯಾಯಾಲಯಕ್ಕೆ ಅಗೌರವ ಕೊಡುತ್ತಿಲ್ಲ. ನಮಗೆ ಕುಡಿಯೋದಕ್ಕೇ ನೀರಿಲ್ಲ. ಹಾಗಾಗಿ ನೀರು ಬಿಡಲು ಸಾಧ್ಯವಾಗಿಲ್ಲ. ಇದು ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ಕೋರ್ಟ್'ಗೆ ಮನವರಿಕೆ ನಾವು ಮಾಡಿಕೊಡಬೇಕು"

ಬೆಂಗಳೂರು(ಸೆ. 13): ನೀರು ಬಿಡುವ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಕರ್ನಾಟಕ ಮಾಡಿಕೊಂಡ ಮನವಿಗೆ ಪ್ರತಿಯಾಗಿ ಸುಪ್ರೀಂಕೋರ್ಟ್'ನವರು ನೀರಿನ ಪ್ರಮಾಣವನ್ನು ಹೆಚ್ಚಿಸಿ ನೀಡಿದ ತೀರ್ಪನ್ನು ಹಿರಿಯ ಅಡ್ವೊಕೇಟ್ ಬಿ.ವಿ.ಆಚಾರ್ಯ ವಿರೋಧಿಸಿದ್ದಾರೆ. ಸುವರ್ಣನ್ಯೂಸ್ ಜೊತೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಚಾರ್ಯ, ಸುಪ್ರೀಂ ಕೋರ್ಟ್'ನ ಈ ತೀರ್ಪು ಕಾನೂನು ವಿರೋಧಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ತಮಿಳುನಾಡಿನವರು ಪ್ರತಿಯೊಂದಕ್ಕೂ ಸುಪ್ರೀಂಕೋರ್ಟ್'ಗೆ ಹೋಗಿಬಿಡುತ್ತಾರೆ. ನ್ಯಾಯಾಲಯದವರು ಇಂಥದ್ದಕ್ಕೆ ಎಂಟರ್ಟೇನ್ ಮಾಡಬಾರದಿತ್ತು... ನಾವು ಮೇಲ್ಮನವಿ ಹಾಕಿದ್ದು ತಪ್ಪಿರಬಹುದು. ಆದರೆ, ಸುಪ್ರೀಂಕೋರ್ಟ್'ನವರು ನಮ್ಮ ಆ ಅರ್ಜಿಯನ್ನು ತಿರಸ್ಕರಿಸಬಹುದಿತ್ತು. ಆದರೆ, ಹೆಚ್ಚು ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದ್ದು ಸರಿಯಾದ ಜುಡಿಷಿಯಲ್ ಅಪ್ರೋಚ್ ಅಲ್ಲ" ಎಂದು ಬಿವಿ ಆಚಾರ್ಯ ಹೇಳಿದ್ದಾರೆ.

ಕೋರ್ಟ್ ಆದೇಶ ಧಿಕ್ಕರಿಸಿದರೆ ಏನಾಗುತ್ತದೆ?
"ಕಂಟೆಂಪ್ಟ್ ಆಫ್ ಕೋರ್ಟ್ ಆರೋಪ ದಾಖಲಾಗಬಹುದು. ಅದನ್ನು ಎದುರಿಸೋಕೆ ಸಿದ್ಧರಾಗಿರಬೇಕು. ನಾವು ನ್ಯಾಯಾಲಯಕ್ಕೆ ಅಗೌರವ ಕೊಡುತ್ತಿಲ್ಲ. ನಮಗೆ ಕುಡಿಯೋದಕ್ಕೇ ನೀರಿಲ್ಲ. ಹಾಗಾಗಿ ನೀರು ಬಿಡಲು ಸಾಧ್ಯವಾಗಿಲ್ಲ. ಇದು ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ಕೋರ್ಟ್'ಗೆ ಮನವರಿಕೆ ನಾವು ಮಾಡಿಕೊಡಬೇಕು" ಎಂದು ಆಚಾರ್ಯರವರು ಸಲಹೆ ನೀಡಿದ್ದಾರೆ.