ಉದ್ಯಮಿಗಳ ಮರ್ಜಿಗೆ ಸರ್ಕಾರವೇ ತಲೆಬಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಮಂಗಳೂರಿನಲ್ಲಿ ಫಲ್ಗುಣಿ ಉಪ ನದಿಯನ್ನೇ ಭೂ ಮಾಫಿಯಾ ಒತ್ತುವರಿ ಮಾಡಿಕೊಂಡಿದೆ. ಉದ್ಯಮಿಯೊಬ್ಬರ ಪುತ್ರಿ ವಿವಾಹಕ್ಕೆ ಕೃಷಿ ಭೂಮಿಗೆ ಮಣ್ಣು ಹಾಕಲಾಗಿದ್ದು, ಇದರ ಜೊತೆ ರಾಜಾ ಕಾಲುವೆಗೂ ಮಣ್ಣು ಹಾಕಲಾಗಿದೆ. ಜನರು ದೂರು ನೀಡಿದ್ದರೂ ಆಡಳಿತ ಕೈಕಟ್ಟಿ ಕೂತಿದೆ.
ಮಂಗಳೂರು(ಜ.12): ಉದ್ಯಮಿಗಳ ಮರ್ಜಿಗೆ ಸರ್ಕಾರವೇ ತಲೆಬಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಮಂಗಳೂರಿನಲ್ಲಿ ಫಲ್ಗುಣಿ ಉಪ ನದಿಯನ್ನೇ ಭೂ ಮಾಫಿಯಾ ಒತ್ತುವರಿ ಮಾಡಿಕೊಂಡಿದೆ. ಉದ್ಯಮಿಯೊಬ್ಬರ ಪುತ್ರಿ ವಿವಾಹಕ್ಕೆ ಕೃಷಿ ಭೂಮಿಗೆ ಮಣ್ಣು ಹಾಕಲಾಗಿದ್ದು, ಇದರ ಜೊತೆ ರಾಜಾ ಕಾಲುವೆಗೂ ಮಣ್ಣು ಹಾಕಲಾಗಿದೆ. ಜನರು ದೂರು ನೀಡಿದ್ದರೂ ಆಡಳಿತ ಕೈಕಟ್ಟಿ ಕೂತಿದೆ.
ಭೂಮಾಫಿಯಾಗೆ ಸಲಾಂ ಹೊಡೆದಿದ್ದಾರಾ ಅಧಿಕಾರಿಗಳು?
ಬೆಂಗಳೂರಲ್ಲಿ ರಾಜಕಾಲುವೆ ಒತ್ತುವರಿ ವಿರುದ್ಧ ಜಿಲ್ಲಾಡಳಿತ ಸಮರ ಸಾರಿದೆ. ಇಂಥದ್ದೇ ಪರಿಸ್ಥಿತಿ ಭವಿಷ್ಯದಲ್ಲಿ ಮಂಗಳೂರಿಗೂ ಬಂದರೂ ಅಚ್ಚರಿಯಿಲ್ಲ. ಇದಕ್ಕೆ ಕಾರಣ ಭೂ ಮಾಫಿಯಾ. ಇದೊಂದು ಕೃಷಿ ಭೂಮಿ, ಪ್ರತಿಷ್ಠಿತ ಹೋಟೆಲ್ ಉದ್ಯಮಿ ಗೋಲ್ಡ್ ಫಿಂಚ್ ಮಾಲಕ ಪ್ರಕಾಶ್ ಶೆಟ್ಟಿ ಅವರ ಪುತ್ರಿ ವಿವಾಹ ನಿಮಿತ್ತ ಮಣ್ಣು ತುಂಬಿ ಗದ್ದೆಯನ್ನೇ ಮೈದಾನ ಮಾಡಲಾಗುತ್ತಿದೆ. ಆದರೆ, ಇದೇ ಸಮಯದಲ್ಲಿ ಪಕ್ಕದಲ್ಲೇ ಇದ್ದ ಫಲ್ಗುಣಿ ಉಪನದಿಗೂ ಮಣ್ಣು ತುಂಬಿ ಒತ್ತುವರಿ ಮಾಡಿಕೊಂಡಿದ್ದಾರೆ. ಅನುಮತಿ ಪಡೆಯದೆ ರಾಜಾರೋಷವಾಗಿ ಉದ್ಯಮಿ ಕಡೆಯವರು ಕಾಮಗಾರಿ ನಡೆಸುತ್ತಿದ್ದರು. ಸ್ಥಳೀಯರು ದೂರು ನೀಡಿದರೂ. ಜಿಲ್ಲಾಡಳಿತವಾಗಲಿ, ಪಾಲಿಕೆಯಾಗಲಿ ಸೌಜನ್ಯಕ್ಕೂ ಪ್ರಶ್ನೆ ಮಾಡುವ ಕೆಲಸಕ್ಕೂ ಮುಂದಾಗಿಲ್ಲ.
ಮಳೆ ಬಂದರೆ ಮಂಗಳೂರಿನ ಅತಿ ಹೆಚ್ಚು ಮುಳುಗಡೆ ಪ್ರದೇಶ ಎಂದರೆ ಬಂಗ್ರ ಕೂಳೂರು ಸುತ್ತಮುತ್ತ ಪ್ರದೇಶ. ಇದನ್ನು ಪ್ರವಾಹದಿಂದ ತಪ್ಪಿಸಲೆಂದೇ ಇಲ್ಲಿನ ನೀರು ಹರಿದು ಸಮುದ್ರ ಸೇರಲು ರಾಜಾ ಕಾಲುವೆ ನಿರ್ಮಿಸಲಾಗಿತ್ತು. ಆದರೆ ಈಗ ಒಂದೆಡೆ ಅದನ್ನು ಒತ್ತುವರಿ ಮಾಡಿದ್ದರೆ, ಇನ್ನೊಂದೆಡೆ ಫಲ್ಗುಣಿಯ ಉಪನದಿಗೆ ಮಣ್ಣು ತುಂಬಲಾಗಿದೆ. ಇದು ಸ್ಥಳೀಯರಲ್ಲಿ ಪ್ರವಾಹದ ಆತಂಕ ಹೆಚ್ಚುವಂತೆ ಮಾಡಿದೆ.
ಜಿಲ್ಲಾಡಳಿತದ ಅನುಮತಿ ಪಡೆಯದೇ ರಾಜಾ ರೋಷವಾಗಿ ಕಾಮಗಾರಿ ನಡೆಯುತ್ತಿದೆ. ಆದರೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಪ್ರಶ್ನಸುತ್ತಿಲ್ಲ. ಇದನ್ನೆಲ್ಲ ನೋಡುತ್ತಿದ್ದರೆ ಭೂಮಾಫಿಯಾಕ್ಕೆ ಅಧಿಕಾರಿಗಳು ಸಲಾಂ ಹೊಡೆದಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.
