ಊಟಿ ಬಳಿ‌ ಕಮರಿಗೆ ಬಿದ್ದ ಬಸ್; ನಾಲ್ವರ ಸಾವು

Bus Accident in Ooty and 4 died
Highlights

ಊಟಿ ಬಳಿ‌ ಕಮರಿಗೆ ಬಸ್ ಬಿದ್ದು  ನಾಲ್ವರು ಸಾವನ್ನಪ್ಪಿದ್ದು, ಹದಿನೈದಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯಗೊಂಡಿದ್ದಾರೆ.  ಊಟಿಯಿಂದ‌ ಬೆಂಗಳೂರಿಗೆ ವಾಪಸ್ ಬರುವಾಗ ಕೂಡ್ಲೂರಿನ ಸಮೀಪ ತೀವ್ರ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಪಕ್ಕದ‌ 500 ಅಡಿ ಆಳಕ್ಕೆ ಬಿದ್ದಿದೆ.  

ಕೊಡಗು (ಮೇ. 27): ಊಟಿ ಬಳಿ‌ ಕಮರಿಗೆ ಬಸ್ ಬಿದ್ದು  ನಾಲ್ವರು ಸಾವನ್ನಪ್ಪಿದ್ದು, ಹದಿನೈದಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯಗೊಂಡಿದ್ದಾರೆ. 

ಊಟಿಯಿಂದ‌ ಬೆಂಗಳೂರಿಗೆ ವಾಪಸ್ ಬರುವಾಗ ಕೂಡ್ಲೂರಿನ ಸಮೀಪ ತೀವ್ರ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಪಕ್ಕದ‌ 500 ಅಡಿ ಆಳಕ್ಕೆ ಬಿದ್ದಿದೆ.  ಮೃತಪಟ್ಟವರೆಲ್ಲರೂ ಬೆಂಗಳೂರು‌ ನಿವಾಸಿಗಳು.  ಸ್ತ್ರೀ ಶಕ್ತಿ ಸಂಘವೊಂದರ ಆಶ್ರಯದಲ್ಲಿ ಊಟಿಗೆ ಟ್ರಿಪ್ ಗೆ ಹೋಗಿದ್ದರು.  ವಾಪಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ.  

ಬಸ್ ನಡಿ ಸಿಲುಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಆಸ್ಪತ್ರೆಗೆ ಸಾಗಿಸುವಾಗ ಮತ್ತಿಬ್ಬರು ಸಾವನ್ನಪ್ಪಿದ್ದಾರೆ.  15ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು  ಗಾಯಾಳುಗಳನ್ನು  ಮೈಸೂರಿನ‌ ಕೆ.ಆರ್. ಆಸ್ಪತ್ರೆಗೆ ರವಾನೆ ಮಾಡಲಾಗಿದೆ. 
 

loader