ದಿಲ್ಲಿಯಲ್ಲಿ 11 ಮಂದಿ ಆತ್ಮಹತ್ಯೆ ಪ್ರಕರಣ : ಸಿಸಿಟಿವಿ ಬಿಚ್ಚಿಟ್ಟ ಸತ್ಯವೇನು..?

First Published 5, Jul 2018, 2:29 PM IST
Burari deaths: CCTV footage shows family brought stools, wires used for hanging
Highlights

ಇತ್ತೀಚೆಗಷ್ಟೇ ಇಲ್ಲಿನ ಬುರಾರಿಯಲ್ಲಿ ನೇಣು ಬಿಗಿದುಕೊಂಡು ಒಂದೇ ಕುಟುಂಬದ 11 ಸದಸ್ಯರ ಆತ್ಮಹತ್ಯೆ ಪ್ರಕರಣ ಸಂಬಂಧ ಮತ್ತಷ್ಟು ವಿಚಾರಗಳು ಹೊರಬಿದ್ದಿವೆ. 
 

ನವದೆಹಲಿ :  ಇತ್ತೀಚೆಗಷ್ಟೇ ಇಲ್ಲಿನ ಬುರಾರಿಯಲ್ಲಿ ನೇಣು ಬಿಗಿದುಕೊಂಡು ಒಂದೇ ಕುಟುಂಬದ 11 ಸದಸ್ಯರ ಆತ್ಮಹತ್ಯೆ ಪ್ರಕರಣ ಸಂಬಂಧ ಮತ್ತಷ್ಟು ವಿಚಾರಗಳು ಹೊರಬಿದ್ದಿವೆ. 

11 ಮಂದಿ ಆತ್ಮಹತ್ಯೆ ಮಾಡಿಕೊಂಡ ಮನೆಯ ಬಗ್ಗೆ ಮತ್ತೊಂದು ವಿಚಾರ ಹೊರಬಿದ್ದಿದ್ದು, ಅಲ್ಲಿನ ಸಿಸಿಟವಿ ದೃಶ್ಯಾವಳಿಗಳು ಲಭ್ಯವಾಗಿದೆ.  

ಅಲ್ಲದೇ ಅವರು ಕಳೆದ 11 ವರ್ಷಗಳಿಂದಲೂ ಕೂಡ ನಿರ್ವಹಣೆ ಮಾಡುತ್ತಿದ್ದ ಡೈರಿ ಪತ್ತೆಯಾಗಿದೆ. ಅಲ್ಲದೇ ಈ ಡೈರಿಯಲ್ಲಿ ವಿವಿಧ ರೀತಿಯ ವಿಚಾರಗಳನ್ನು ಬರೆಯಲಾಗಿದೆ. 

ಇನ್ನು ಮನೆಯಲ್ಲಿ ಅಳವಡಿಸಿದ ಸಿಸಿಟಿವಿ ದೃಶ್ಯ ಪತ್ತೆಯಾಗಿದ್ದು, ವೈರ್ ಗಳು ಹಾಗೂ ಸ್ಟೂಲ್ ಗಳನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಕುಟುಂಬ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳುವ ಜಾಗದಲ್ಲಿ ಹೊಂದಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡು ಬಂದಿದೆ.  ಇಷ್ಟಾದರೂ ಕೂಡ ಇದೊಂದು ಬಗೆಹರಿಯದ ವಿಚಾರವಾಗಿದ್ದು, ಪೊಲೀಸರು ಹೆಚ್ಚಿನ ಪ್ರಮಾಣದ ತನಿಖೆಯನ್ನು ಕೈಗೊಂಡಿದ್ದಾರೆ. 

loader