ದೇಶದ ಮೊದಲ ಬುಲೆಟ್‌ ರೈಲು 2 ಹಂತದಲ್ಲಿ ಜಾರಿ?

ಒಂದೇ ಹಂತದಲ್ಲಿ ಮುಗಿಯಲ್ಲ ಬುಲೆಟ್‌ ರೈಲು ಯೋಜನೆ | ಮಹಾರಾಷ್ಟ್ರ ಸರ್ಕಾರದ ವಿರೋಧದ ಕಾರಣದಿಂದಾಗಿ ಎರಡು ಹಂತದಲ್ಲಿ ಯೋಜನೆ

Bullet train might launch in two phases if land acquisition issue persists says Railway Board: Report dpl

ನವದೆಹಲಿ(ಡಿ.27): ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಹಮದಾಬಾದ್‌ ಹಾಗೂ ಮುಂಬೈ ನಡುವಿನ ಬುಲೆಟ್‌ ರೈಲು ಯೋಜನೆ ಒಂದೇ ಹಂತದಲ್ಲಿ ಮುಗಿಯುವ ನಿರೀಕ್ಷೆ ಹುಸಿಯಾಗತೊಡಗಿದೆ.

ಮಹಾರಾಷ್ಟ್ರ ಸರ್ಕಾರದ ವಿರೋಧದ ಕಾರಣದಿಂದಾಗಿ ಎರಡು ಹಂತದಲ್ಲಿ ಯೋಜನೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಹಮದಾಬಾದ್‌ ಹಾಗೂ ವಾಪಿ ನಡುವಿನ 325 ಕಿ.ಮೀ. ಮಾರ್ಗದಲ್ಲಿ ಮೊದಲ ಹಂತದಲ್ಲಿ ಬುಲೆಟ್‌ ರೈಲು ಸಂಚರಿಸುವ ನಿರೀಕ್ಷೆ ಇದೆ.

ಸಂಧಾನಕ್ಕೆ ರೈತರ ಸಮ್ಮತಿ: ಕೃಷಿ ಕಾಯ್ದೆ ವಾಪಸ್‌ಗೆ ಬಿಗಿಪಟ್ಟು

ಮಹಾರಾಷ್ಟ್ರದಲ್ಲಿ ಯೋಜನೆಗೆ ಅನುಮತಿ ಸಿಕ್ಕ ಬಳಿಕ ವಾಪಿ ಮತ್ತು ಬಾಂದ್ರಾ ಮಧ್ಯೆ ಎರಡನೇ ಹಂತದ ಕಾಮಗಾರಿ ಆರಂಭವಾಗಲಿದೆ. ಇದೇ ವೇಳೆ ಮಹಾಷ್ಟ್ರದಲ್ಲಿ ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆಗಾಗಿ ರಾಜ್ಯ ಸರ್ಕಾರದ ಜೊತೆಗೆ ಮಾತುಕತೆ ನಡೆಸಲಾಗುತ್ತಿದ್ದು, ಬಿಕ್ಕಟ್ಟು ಬಗೆಹರಿಯುವ ನಿರೀಕ್ಷೆ ಇದೆ ಎಂದು ರೈಲ್ವೆ ಮಂಡಳಿಯ ಮುಖ್ಯಸ್ಥರು ತಿಳಿಸಿದ್ದಾರೆ.

ಮುಂಬೈ ಮತ್ತು ಅಹಮದಾಬಾದ್ ನಡುವಿನ ಭೂ ದೂರವನ್ನು ಗಮನಿಸಿದರೆ, ಬುಲೆಟ್-ರೈಲಿನಲ್ಲಿ ಪ್ರಯಾಣವು ಈಗಿನ 11 ಗಂಟೆಗಳಿಗೆ ಹೋಲಿಸಿದರೆ 3 ಗಂಟೆಗಳಲ್ಲಿ ಮುಗಿಯಲಿದೆ. ಈ ರೈಲು ಮುಂಬೈ, ಥಾಣೆ, ವಿರಾರ್, ಬೋಯಿಸರ್, ವಾಪಿ, ಬಿಲಿಮೋರಾ, ಸೂರತ್, ಭರೂಚ್, ವಡೋದರಾ, ಆನಂದ್, ಅಹಮದಾಬಾದ್ ಮತ್ತು ಸಬರಮತಿ ಸೇರಿದಂತೆ 12 ನಿಲ್ದಾಣಗಳ ಮೂಲಕ ಹಾದುಹೋಗಲಿದೆ.

Latest Videos
Follow Us:
Download App:
  • android
  • ios