ದೇಶದ ಪ್ರಧಾನಿ ನರೇಂದ್ರ ಮೋದಿ ಎಲ್ಲೆ ಹೋದ್ರು ಬೀಗಿ ಪೊಲೀಸ್​ ಬಂದೋಬಸ್ತ್​ ಇರುತ್ತೆ. ಜೊತೆಗೆ ಭದ್ರತೆಗೆ ಹೆಸರುವಾಸಿಯಾಗಿರುವ Special Protection Group ಕೂಡಾ ಮೋದಿ ಜೊತೆಗೇ ಇರುತ್ತೆ. ಇದಿಷ್ಟೇ ಅಲ್ಲ, ಯಾರ ಕಣ್ಣಿಗೂ ಕಾಣದ ಮತ್ತೊಂದು ಸ್ಪೆಷಲ್ ಭದ್ರತಾ ವ್ಯವಸ್ಥೆಯಾಗುತ್ತೆ. ಯಾವುದು ಅದು? ಇಲ್ಲಿದೆ ವಿವರ​.

ನವದೆಹಲಿ(ಅ.30): ಪ್ರಧಾನಿ ನರೇಂದ್ರ ಮೋದಿ, ಈ ಹೆಸರು ಕೇಳಿದ್ರೆ ಉಗ್ರರು ಉರಿದು ಬೀಳ್ತಾರೆ. ಯಾಕಂದ್ರೆ ಉಗ್ರರ ವಿರುದ್ಧ ಸೆಟೆದು ನಿಂತವರು ನರೇಂದ್ರ ಮೋದಿ. ಇದೇ ಕಾರಣಕ್ಕೆ ಉಗ್ರರ ಕೆಂಗಣ್ಣಿಗೆ ಗುರಿಯಾಗಿರೋ ಮೋದಿಯವರಿಗೆ ಭಾರೀ ಭದ್ರತೆ ಇರುತ್ತೆ. ಮೋದಿ ಹೋದೆಲ್ಲೆಲ್ಲಾ ಎನ್'ಎಸ್' ಜಿ, ಎಸ್'ಪಿಜಿ, ಎಎನ್'ಎಫ್, ಬಾಂಬ್ ಪತ್ತೆದಳಗಳು ಕಣ್ಗಾವಲಾಗಿರುತ್ತವೆ. ಇಷ್ಟೇ ಅಲ್ಲ ಮೋದಿ ಭಾಷಣ ಮಾಡುವ ಡಾಯಾಸ್ ಕೂಡ ಬುಲೆಟ್​ ಫ್ರೂಫ್.

ಮೋದಿ ಭಾಷಣಕ್ಕಾಗಿಯೇ ಸಿದ್ಧವಾಗುತ್ತೆ ಸ್ಪೆಷಲ್​ ಡಯಾಸ್​

ಪ್ರಧಾನಿ ಭಾಷಣಕ್ಕೂ ಮುನ್ನವೇ ಈ ಸ್ಪೆಷಲ್ ಡಯಾಸ್ ಸಿದ್ಧವಾಗುತ್ತೆ. ಸ್ವತಃ ಎಸ್'​ಪಿಜಿ ಭದ್ರತಾ ಸಿಬ್ಬಂದಿ ಯಾರ ಕಣ್ಣಿಗೂ ಕಾಣದ ರೀತಿಯಲ್ಲಿ ಈ ಡಯಾಸನ್ನು ಸಿದ್ಧಪಡಿಸುತ್ತಾರೆ. ಮೋದಿ ಭಾಷಣ ಮಾಡುವಾಗ ಅವರ ಕಣ್ಣಂಚ್ಚಿನಲ್ಲೇ ವಿಶೇಷ ಟೆಲಿ ಪ್ರೊಂಪ್ಟರ್ ಇರುತ್ತೆ. ಮೋದಿ ಭಾಷಣ ಮಾಡುವಾಗ ಈ ಟೆಲಿಪ್ರೊಂಪ್ಟರ್ ನೋಡಿಯೇ ಭಾಷಣ ಮಾಡ್ತಾರೆ. ನಿನ್ನೆ ಬೆಂಗಳೂರಲ್ಲಿ ಮೋದಿ ಭಾಷಣ ಮಾಡಿದ್ದು ಇದೇ ಬುಲೆಟ್ ಪ್ರೂಫ್ ಡಯಾಸ್​'ನಲ್ಲಿ.

ಮೋದಿ ಹೋದಲೆಲ್ಲಾ ಸಂಚರಿಸುತ್ತೆ ಈ ಸ್ಪೆಷಲ್​ ಡಯಾಸ್ 

ಬರೋಬ್ಬರಿ 500 ಕೆ.ಜಿ ತೂಕ ಇರುವ ಈ ಡಯಾಸ್​ ಮೋದಿ ಹೋದಲ್ಲೆಲ್ಲಾ ಸಂಚರಿಸುತ್ತೆ. ಮೋದಿ ಭಾಷಣ ಮುಗಿದ ಮೇಲೆ ಡಯಾಸನ್ನು ಕಳಚಿ ವಿಶೇಷ ಪೆಟ್ಟಿಗೆಯಲ್ಲಿ ತೆಗೆದುಕೊಂಡು ಹೋಗ್ತಾರೆ. ಒಟ್ಟಿನಲ್ಲಿ, ಈ ಡಯಾಸ್​ ಕೂಡ ಪ್ರಧಾನಿಯ ಭದ್ರತೆ ವಿಚಾರದಲ್ಲಿ ಮಹತ್ವದ ಪಾತ್ರ ವಹಿಸುತ್ತಿರೋದು ವಿಶೇಷ.