ಇದ್ಯಾವ ಸೀಮೆ ಪೊಲೀಸರಪ್ಪ?| ಪ್ರತಿಭಟನಾಕಾರರ ಮೇಲೆ ಪೆಪ್ಪರ್ ಸ್ಪ್ರೇ ಸಿಂಪಡಿಸಲು ಹೋಗಿ ಯಡವಟ್ಟು| ತಮ್ಮ ಮೇಲೆಯೇ ಪೆಪ್ಪರ್ ಸ್ಪ್ರೇ ಸಿಂಪಡಿಸಿಕೊಂಡ ಪೊಲೀಸರು| ಬಲ್ಗೇರಿಯಾ ರಾಜಧಾನಿ ಸೋಫಿಯಾದಲ್ಲಿ ನಡೆದ ಘಟನೆ| ಶೀಘ್ರ ಚುನಾವಣೆಗಾಗಿ ಆಗ್ರಹಿಸಿ ಪ್ರತಿಭಟನೆ|

ಸೋಫಿಯಾ(ಮಾ.20): ಶೀಘ್ರ ಚುನಾವಣೆಗಾಗಿ ಆಗ್ರಹಿಸಿ ಬಲ್ಗೇರಿಯಾದಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನಾಕಾರರ ಮೇಲೆ ಬಳಸಬೇಕಿದ್ದ ಪೆಪ್ಪರ್ ಸ್ಪ್ರೇಯನ್ನು ಪೊಲೀಸರು ತಮ್ಮ ಮೇಲೆಯೇ ಸಿಂಪಡಿಸಿಕೊಂಡ ಘಟನೆ ನಡೆದಿದೆ.

ಅವಧಿಗೂ ಮೊದಲೇ ಚುನಾವಣೆಗಾಗಿ ಆಗ್ರಹಿಸುತ್ತಿರುವ ಬಲ್ಗೇರಿಯಾ ಜನತೆ, ರಾಜಧಾನಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಮುಂದಾದ ಪೊಲೀಸರು ಪೆಪ್ಪರ್ ಸ್ಪ್ರೇ ಸಿಂಪಡಿಸಿದ್ದಾರೆ.

Scroll to load tweet…

ಆದರೆ ಪ್ರತಿಭಟನಾಕಾರರತ್ತ ಪೆಪ್ಪರ್ ಸ್ಪ್ರೇ ಸಿಂಪಡಿಸುವ ಬದಲು ತಮ್ಮ ಮೇಲೆಯೇ ಪೊಲೀಸರು ಸಿಂಪಡಿಸಿಕೊಂಡಿದ್ದು, ಇದರ ವಿಡಿಯೋ ಭಾರೀ ವೈರಲ್ ಆಗಿದೆ. ಪೆಪ್ಪರ್ ಸ್ಪ್ರೇ ಸಿಂಪಡನೆ ಬಳಿಕ ಪೊಲೀಸರು ನೀರಿನಿಂದ ಕಣ್ಣು ತೊಳೆದುಕೊಳ್ಳುತ್ತಿರುವ ದೃಶ್ಯ ಸೆರೆಯಾಗಿದೆ.

ಬಲ್ಗೇರಿಯಾದ ಸಂಸತ್ತಿನ ಮುಂದೆ ಪ್ರತಿಭಟನೆ ನಡೆಸುವ ವೇಳೆ, ವಿರುದ್ಧ ದಿಕ್ಕಿನಲ್ಲಿ ಗಾಳಿ ಬೀಸಿದ ಪರಿಣಾಮ ಪೊಲೀಸರು ಸಿಂಪಡಿಸಿದ ಪೆಪ್ಪರ್ ಸ್ಪ್ರೇ ಅವರತ್ತಲೇ ತಿರುಗಿದೆ.