ಇಂದಿನಿಂದ ಬಜೆಟ್ ಅಧಿವೇಶನ : ಏನಿದೆ ನಿರೀಕ್ಷೆಗಳು ..?

First Published 29, Jan 2018, 7:17 AM IST
Budget Session Start Frome today
Highlights

ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಭಾಗ ಇಂದಿನಿಂದ ಆರಂಭವಾಗಲಿದೆ. ಕಳೆದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಪಾಸಾದರೂ ರಾಜ್ಯಸಭೆಯಲ್ಲಿ ಪಾಸಾಗದೇ ತ್ರಿಶಂಕು ಸ್ಥಿತಿಯಲ್ಲಿರುವ ತ್ರಿವಳಿ ತಲಾಖ್ ಮಸೂದೆಯನ್ನು ಅಂಗೀಕರಿಸಿಕೊಳ್ಳಲು ಸರ್ಕಾರ ಶತಾಯ ಗತಾಯ ಯತ್ನ ನಡೆಸಲು ನಿರ್ಧರಿಸಿದೆ.

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಭಾಗ ಇಂದಿನಿಂದ ಆರಂಭವಾಗಲಿದೆ. ಕಳೆದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಪಾಸಾದರೂ ರಾಜ್ಯಸಭೆಯಲ್ಲಿ ಪಾಸಾಗದೇ ತ್ರಿಶಂಕು ಸ್ಥಿತಿಯಲ್ಲಿರುವ ತ್ರಿವಳಿ ತಲಾಖ್ ಮಸೂದೆಯನ್ನು ಅಂಗೀಕರಿಸಿಕೊಳ್ಳಲು ಸರ್ಕಾರ ಶತಾಯ ಗತಾಯ ಯತ್ನ ನಡೆಸಲು ನಿರ್ಧರಿಸಿದೆ.

ಅಧಿವೇಶನದ ಆರಂಭದ ದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಬೆಳಗ್ಗೆ 11 ಗಂಟೆಗೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ ಆರ್ಥಿಕ ಸಮೀಕ್ಷೆ ಉಭಯ ಸದನಗಳಲ್ಲಿ ಸೋಮವಾರವೇ ಮಂಡನೆಯಾಗಲಿದೆ. ಫೆಬ್ರವರಿ 1ರ ಗುರುವಾರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಎನ್ ಡಿಎ ಸರ್ಕಾರದ ಈ ಅವಧಿಯ ಕೊನೆಯ ‘ಸಂಪೂರ್ಣ ಪ್ರಮಾಣದ’ ಮುಂಗಡಪತ್ರ ಮಂಡಿಸಲಿದ್ದಾರೆ.

ಇನ್ನೊಂದೆಡೆ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಕೂಡ ಕಾವೇರಿದ ಚರ್ಚೆಗೆ ನಾಂದಿ ಹಾಡುವ ನಿರೀಕ್ಷೆಯಿದೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮಸೂದೆಯೂ ಸರ್ಕಾರದ ಅಜೆಂಡಾದಲ್ಲಿದೆ. ಮೊದಲ ಹಂತದ ಅಧಿವೇಶನ, ಫೆಬ್ರವರಿ 9ರವರೆಗೆ ನಡೆಯಲಿದೆ. ಬಜೆಟ್ ಅಧಿವೇಶನದ ದ್ವಿತೀಯ ಚರಣ ಮಾರ್ಚ್ 5ರಿಂದ ಏಪ್ರಿಲ್ 6ರವರೆಗೆ ಜರುಗಲಿದೆ.

loader