ಕೇವಲ ಒಂದೂವರೆ ವರ್ಷದ ಅಂತರದಲ್ಲಿ ಎದುರಾ ಗಲಿರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸರ್ವರನ್ನು ಖುಷಿ ಪಡಿಸುವ ತುಡಿತವನ್ನು ಈಡೇರಿ ಸಿಕೊಳ್ಳಬೇಕು ಎಂದರೆ ಬಜೆಟ್‌ ಗಾತ್ರವನ್ನು . 2 ಲಕ್ಷ ಕೋಟಿಗೆ ಹಿಗ್ಗಿಸಬೇಕು. ರಾಜ್ಯದ ಸಂಪನ್ಮೂಲ ಸಾಮರ್ಥ್ಯ ಈ ಹಿಗ್ಗುವಿಕೆಗೆ ಪೂರಕವಾಗಿಲ್ಲ. ಆದರೆ, ಪಕ್ಷ ಹಾಗೂ ಚುನಾವಣೆಯ ಒತ್ತಡದಿಂದ ಉದಾರ ಬಜೆಟ್‌ ಮಂಡಿಸುವ ಇಕ್ಕಟ್ಟಿಗೆ ಸಿಲುಕಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಯಾವ ಮಂತ್ರದಂಡವನ್ನು ಆಶ್ರಯಿಸಲಿದ್ದಾರೆ ಎಂಬುದು ಕುತೂಹಲ.

ಬೆಂಗಳೂರು(ಮಾ.10): ಕೇವಲ ಒಂದೂವರೆ ವರ್ಷದ ಅಂತರದಲ್ಲಿ ಎದುರಾ ಗಲಿರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಸರ್ವರನ್ನು ಖುಷಿ ಪಡಿಸುವ ತುಡಿತವನ್ನು ಈಡೇರಿ ಸಿಕೊಳ್ಳಬೇಕು ಎಂದರೆ ಬಜೆಟ್‌ ಗಾತ್ರವನ್ನು . 2 ಲಕ್ಷ ಕೋಟಿಗೆ ಹಿಗ್ಗಿಸಬೇಕು. ರಾಜ್ಯದ ಸಂಪನ್ಮೂಲ ಸಾಮರ್ಥ್ಯ ಈ ಹಿಗ್ಗುವಿಕೆಗೆ ಪೂರಕವಾಗಿಲ್ಲ. ಆದರೆ, ಪಕ್ಷ ಹಾಗೂ ಚುನಾವಣೆಯ ಒತ್ತಡದಿಂದ ಉದಾರ ಬಜೆಟ್‌ ಮಂಡಿಸುವ ಇಕ್ಕಟ್ಟಿಗೆ ಸಿಲುಕಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಯಾವ ಮಂತ್ರದಂಡವನ್ನು ಆಶ್ರಯಿಸಲಿದ್ದಾರೆ ಎಂಬುದು ಕುತೂಹಲ.

ಸದ್ಯಕ್ಕೆ ಸರ್ಕಾರದ ವಲಯಗಳಿಂದ ದೊರೆಯು ತ್ತಿರುವ ಮಾಹಿತಿ ಈ ಬಾರಿಯ ಬಜೆಟ್‌ ಅತ್ಯಂತ ಉದಾರ ಬಜೆಟ್‌ ಆಗಲಿದ್ದು, ಕಾಂಗ್ರೆಸ್‌ ಸರ್ಕಾರದ ಆದ್ಯತೆಯಾಗಿರುವ ಅಹಿಂದ, ರೈತರು ಹಾಗೂ ಮೂಲ ಸೌಕರ್ಯಕ್ಕೆ ಭರಪೂರ ಕೊಡುಗೆ ನೀಡುವ ಸಾಧ್ಯತೆಯಿದೆ. ಇದು ಆಗಬೇಕಾದರೇ ಬಜೆಟ್‌ ಗಾತ್ರ . 2 ಲಕ್ಷ ಕೋಟಿ ಮುಟ್ಟದಿದ್ದರೂ, ಅದರ ಅಕ್ಕ-ಪಕ್ಕ ಇರಬೇಕಾಗುತ್ತದೆ. ಈ ಪ್ರಮಾಣದಲ್ಲಿ ಬಜೆಟ್‌ ಗಾತ್ರ ಹಿಗ್ಗುವಿಕೆಗೆ ಆದಾಯದ ಮೂಲಗಳೇನು ಎಂಬುದನ್ನು ಅವಲೋಕಿಸಿದರೆ

ಮುಖ್ಯವಾಗಿ ಕಾಣುವ ಎರಡು ಮುಖ್ಯ ಅಂಶಗಳು.

1 ಮುಂದಿನ ವರ್ಷದಿಂದ ಹೆಚ್ಚಿನ ಆದಾಯ ತರುವ ಸಾಧ್ಯತೆ ಸೃಷ್ಟಿಸಿರುವ ಜಿಎಸ್‌ಟಿ.

2 ಕಾನೂನು ಮಿತಿಯೊಳಗೆ ಸಾಧ್ಯವಾದಷ್ಟುಹೆಚ್ಚಿನ ಸಾಲವನ್ನು ಪಡೆಯುವುದು. ಉಳಿದಂತೆ ಮಿತ ವ್ಯಯ ತಂತ್ರ ಮತ್ತು ವಿದೇಶಿ ಬಂಡವಾಳ ಆಕ ರ್ಷಿಸುವ ಪರ್ಯಾಯಗಳನ್ನು ಅವಲೋಕಿಸಬೇಕು.

ರಾಜ್ಯದ ರಾಜಸ್ವದ ಪ್ರಮುಖ ಮೂಲಗಳಾದ ಸಾರಿಗೆ, ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ, ಮುದ್ರಾಂಕಗಳಿಂದ ಸರ್ಕಾರಕ್ಕೆ .80 ಸಾವಿರ ಕೋಟಿಗಳಷ್ಟುಆದಾಯ ಲಭಿಸಲಿದ್ದು, ನೋಟು ಮಾನ್ಯತೆ ರದ್ದು ಪರಿಣಾಮ ಅದರಲ್ಲೂ ಸದ್ಯ .4000ಕೋಟಿ ಕೊರತೆ ಇದೆ. ಇದು ಸದ್ಯದಲ್ಲೇ ಸರಿದೂಗಿಸಬಹುದಾದರೂ ಉಳಿದ .80 ಸಾವಿರ ಕೋಟಿಗಳನ್ನು ಎಲ್ಲಿಂದ ತರುವುದು ಎನ್ನುವ ಪ್ರಶ್ನೆ ಇದೆ. ಇದಕ್ಕಾಗಿ ವಿವಿಧ ಕ್ಷೇತ್ರಗಳಿಗೆ ಕತ್ತರಿ ಹಾಕಿ, ಮಿತವ್ಯಯ ಸಾಧಿಸಬೇಕಾಗುತ್ತದೆ.

ಜಿಎಸ್‌ಟಿ ಡಬಲ್‌ ಆದರೆ ಬಚಾವ್‌: ಹೀಗಾಗಿ ಸಿದ್ದರಾಮಯ್ಯ ಅವರು ಈ ಗಾತ್ರದ ಬಜೆಟ್‌ ಮಂಡಿಸಬೇಕಾದರೇ ಅನಿವಾರ್ಯವಾಗಿ ಅವಲಂಬಿಸಬೇಕಾಗಿರುವುದು ಜುಲೈನಿಂದ ಆರಂಭವಾಗಲಿರುವ ಜಿಎಸ್‌ಟಿಯ ಮೇಲೆ. ಆದರೆ, ಜಿಎಸ್‌ಟಿಯಿಂದ ಎಷ್ಟುಹಣ ರಾಜ್ಯಕ್ಕೆ ಬರಬಹುದು ಎಂಬ ಸ್ಪಷ್ಟಮಾಹಿತಿಯಿಲ್ಲ. ಆರ್ಥಿಕ ತಜ್ಞರ ಪ್ರಕಾರ ಜಿಎಸ್‌ಟಿಯಿಂದ ಸರ್ಕಾರದ ಹಾಲಿ ಆದಾಯದ ದುಪ್ಪಟ್ಟು ಆದಾಯ ಬರುವ ಸಾಧ್ಯತೆಯಿದೆ. ಹೀಗಾದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಉದ್ದೇಶದೊಂದಿಗೆ ಮುಂದುವರೆಯಬಹುದು. ಜಿಎಸ್‌ಟಿ ಜತೆಗೆ, ಕೇಂದ್ರದಿಂದ ಹೆಚ್ಚಿನಅನುದಾನ, ವಿದೇಶೀ ಬಂಡವಾಳ ಹೂಡಿಕೆಯಿಂದ ಸಂಪನ್ಮೂಲ ಕ್ರೋಡೀಕರಣ ಮಾಡುವ ದಾರಿ ಹುಡುಕಬೇಕಾಗಿದೆ. ಇದರೊಂದಿಗೆ ಸಾಲ ಸೌಲಭ್ಯದ ಮೂಲಗಳನ್ನು ಹೆಚ್ಚಿಸಿಕೊಳ್ಳುವ ಮೂಲಕ ಕೊರತೆ ಸರಿದೂಗಿಸಬೇಕು.

ವರದಿ: ಕನ್ನಡ ಪ್ರಭ