2018ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್’ನಲ್ಲಿ  ಹಿರಿಯ ನಾಗರಿಕರು ಹಲವು ರೀತಿಯಾದ ತೆರಿಗೆ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ.  

ನವದೆಹಲಿ : 2018ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್’ನಲ್ಲಿ ಹಿರಿಯ ನಾಗರಿಕರು ಹಲವು ರೀತಿಯಾದ ತೆರಿಗೆ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ.

ಪ್ರಮುಖವಾಗಿ ಈ ಬಜೆಟ್’ನಲ್ಲಿ ಟ್ಯಾಕ್ಸ್ ವಿನಾಯಿತಿ ಮಿತಿಯಲ್ಲಿ ಹೆಚ್ಚಳ ಮಾಡಲಾಗಿದೆ. ಬ್ಯಾಂಕ್, ಅಂಚೆ ಕಚೇರಿಗಳ ಠೇವಣಿಗಳ ಮೇಲಿನ ಬಡ್ಡಿಯ ಆದಾಯದ ವಿನಾಯಿತಿ 10 ಸಾವಿರದಿಂದ 50 ಸಾವಿರ ರು.ವರೆಗೆ ಏರಿಕೆಯಾಗಿದೆ.

ಎಲ್ಲಾ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲಾಗಿದೆ. ಆರೋಗ್ಯ ಸೇವೆಗಳ ಮೇಲಿನ ಖರ್ಚಿನ ಡಿಡಕ್ಷನ್ ಹೆಚ್ಚಳ ಮಾಡಲಾಗಿದೆ.

ಪ್ರಧಾನ ಮಂತ್ರಿ ವಯ ವಂದನ ಯೋಜನೆಯನ್ನು 2020ರವರೆಗೆ ವಿಸ್ತರಣೆ ಮಾಡಲು ಪ್ರಸ್ತಾವನೆ ಇಡಲಾಗಿದೆ.