Asianet Suvarna News Asianet Suvarna News

ಬಜೆಟ್ 2018: ಯಾರಿಗೆ ಲಾಭ; ಯಾರಿಗೆ ನಷ್ಟ..?

2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನರೇಂದ್ರ ಮೋದಿ ಸರ್ಕಾರದ ಬಜೆಟ್ ಮಂಡಿಸಿದೆ. ರೈತರು, ಗ್ರಾಮೀಣ ಪ್ರದೇಶದ ಜನರು, ರೈಲ್ವೇ ಅಭಿವೃದ್ದಿ, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದಂತೆ ಕಂಡುಬರುತ್ತಿದೆ. ಹಾಲಿ ಬಜೆಟ್ ಯಾರಿಗೆ ಲಾಭ ಹಾಗೆಯೇ ಯಾರಿಗೆ ನಷ್ಟ ಎನ್ನುವುದನ್ನು ನೋಡುವುದಾದರೆ,

Budget 2018 Healthcare Winner Losers Could Include Samsung Apple

2019ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನರೇಂದ್ರ ಮೋದಿ ಸರ್ಕಾರದ ಬಜೆಟ್ ಮಂಡಿಸಿದೆ. ರೈತರು, ಗ್ರಾಮೀಣ ಪ್ರದೇಶದ ಜನರು, ರೈಲ್ವೇ ಅಭಿವೃದ್ದಿ, ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದಂತೆ ಕಂಡುಬರುತ್ತಿದೆ. ಹಾಲಿ ಬಜೆಟ್ ಯಾರಿಗೆ ಲಾಭ ಹಾಗೆಯೇ ಯಾರಿಗೆ ನಷ್ಟ ಎನ್ನುವುದನ್ನು ನೋಡುವುದಾದರೆ,

ಲಾಭ:

ರೈತರಿಗೆ: ನಾನಾ ಕಾರಣಗಳಿಂದ ರೈತರು ದೇಶಾದ್ಯಂತ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನೀರಾವರಿ ಯೋಜನೆಗಳಿಗೆ, ಮೀನುಗಾರಿಕೆ ಯೋಜನೆಗಳಿಗೆ, ಸೋಲಾರ್ ಪಂಪ್'ಸೆಟ್ ಬಳಸಲು ಉತ್ತೇಜನ ನೀಡುವಂತ ಯೋಜನೆಗಳಿಗೆ ಈ ಬಾರಿ ಒತ್ತು ನೀಡುವ ಮೂಲಕ ರೈತರಿಗೆ ಅನುಕೂಲಕರವೆನಿಸಿದೆ.

ಆರೋಗ್ಯ ಕ್ಷೇತ್ರಕ್ಕೆ:  ಸರ್ಕಾರವು ರಾಷ್ಟ್ರೀಯ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೆ ತರುವ ಮೂಲಕ 50 ಕೋಟಿ ಜನರಿಗೆ ಉಪಯುಕ್ತವಾಗಲಿದೆ ಎಂದು ಸರ್ಕಾರ ಹೇಳಿದೆ.

ಟ್ರಾನ್ಸ್'ಫೋರ್ಟ್ ಕಂಪನಿಗಳಿಗೆ: ಮೂಲಭೂತ ಸೌಕರ್ಯಗಳ ಉತ್ತೇಜನ ಸರ್ಕಾರದ ಮೂಲ ಆಧ್ಯತೆಯಾಗಿದ್ದು, ಸರ್ಕಾರ ರಸ್ತೆ ಹಾಗೂ ರೈಲ್ವೇ ಮಾರ್ಗವನ್ನು ತ್ವರಿತಗತಿಯಲ್ಲಿ ಉನ್ನತೀಕರಿಸುವುದಾಗಿ ಜೇಟ್ಲಿ ತಿಳಿಸಿದ್ದಾರೆ.

* ಆನ್'ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್

* ಸೋಲಾರ್ ಘಟಕದಲ್ಲಿ ಬಳಸುವ ಸೋಲಾರ್ ಟೆಂಪರ್ಡ್ ಗ್ಲಾಸ್

* ರಕ್ಷಣಾ ಸೇವೆಗಳ ಗುಂಪು ವಿಮೆ

* ಗೃಹ ಬಳಕೆಯ RO ಮೆಂಬ್ರೇನ್ ವಸ್ತುಗಳು

ದುಬಾರಿ:

* ಆ್ಯಪಲ್-ಸ್ಯಾಮ್ಸಸಂಗ್ ಮೊಬೈಲ್'ಗಳು ದುಬಾರಿ

* ತಂಬಾಕು ಉತ್ಫನ್ನಗಳು

* ಅಲ್ಯೂಮೀನಿಯಂ ಅದಿರು

* ಬೆಳ್ಳಿ ನಾಣ್ಯ

Follow Us:
Download App:
  • android
  • ios