Asianet Suvarna News Asianet Suvarna News

2018ರ ಕೇಂದ್ರ ಸರ್ಕಾರದ ಬಜೆಟ್: ವೇತನದಾರ ತೆರಿಗೆದಾರರು ನಿರೀಕ್ಷಿಸುವ 5 ಪ್ರಮುಖ ಅಂಶಗಳು

ಆಯವ್ಯಯದಲ್ಲಿ ಪ್ರತಿಯೊಬ್ಬರಿಗೂ ನಿರೀಕ್ಷೆಯಿರುತ್ತದೆ. ಆದರೆ ವೇತನದಾರ ತೆರಿಗೆದಾರರಿಗೆ ಹೆಚ್ಚು ನಿರೀಕ್ಷೆಯಿರುತ್ತದೆ. ಅವರು ಆಯವ್ಯಯದಲ್ಲಿ ನಿರೀಕ್ಷಿಸುವ ಪ್ರಮುಖ 5 ಅಂಶಗಳು ಇಂತಿವೆ.

Budget 2018 5 things salaried tax payers expect from FM Arun Jaitley

ನವದೆಹಲಿ(ಜ.30): ಕೇಂದ್ರ ಸರ್ಕಾರದ ನಾಲ್ಕನೇ ವರ್ಷದ ಬಜೆಟ್'ಅನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಫೆ.1ರಂದು ಮಂಡಿಸುತ್ತಿದ್ದು, ಇದು ಕೇಂದ್ರದ ನಿರೀಕ್ಷಿತ ಕೊನೆಯ ಬಜೆಟ್ ಎನ್ನಬಹುದು. ಮುಂದಿನ ವರ್ಷವೂ ಬಜೆಟ್ ಮಂಡಿಸಿದರೂ ಅದು ಚುನಾವಣೆ ಬಜೆಟ್ ಆಗಿರುತ್ತದೆ. ಈ ನಿಟ್ಟಿನಲ್ಲಿ ಬಜೆಟ್ ಅತ್ಯಂತ ಮಹತ್ವ ಪಡೆದುಕೊಂಡಿದೆ.

ಆಯವ್ಯಯದಲ್ಲಿ ಪ್ರತಿಯೊಬ್ಬರಿಗೂ ನಿರೀಕ್ಷೆಯಿರುತ್ತದೆ. ಆದರೆ ವೇತನದಾರ ತೆರಿಗೆದಾರರಿಗೆ ಹೆಚ್ಚು ನಿರೀಕ್ಷೆಯಿರುತ್ತದೆ. ಅವರು ಆಯವ್ಯಯದಲ್ಲಿ ನಿರೀಕ್ಷಿಸುವ ಪ್ರಮುಖ 5 ಅಂಶಗಳು ಇಂತಿವೆ.

1) ತೆರಿಗೆ ವಿನಾಯಿತಿ ಮಿತಿ ಏರಿಕೆ: ತೆರಿಗೆ ವಿನಾಯಿತಿ ಮಿತಿ ಪ್ರಮುಖ ಅಂಶವಾಗಿದ್ದು, ಪ್ರತಿಯೊಬ್ಬರ ತೆರಿಗೆ ಮಿತಿಯನ್ನು ನಿರೀಕ್ಷಿಸುತ್ತಿರುತ್ತಾರೆ. ಪ್ರಸ್ತುತ ತೆರಿಗೆ ಮಿತಿಯು 2.5 ಲಕ್ಷ ರೂ.ಗಳವರೆಗಿದ್ದು ಕಳೆದ ಮೂರು ವರ್ಷಗಳಿಂದ ಬದಲಾಯಿಸಿಲ್ಲ. ಆರ್ಥಿಕ ಪರಿಣಿತರ ಅಭಿಪ್ರಾಯದಂತೆ ತೆರಿಗೆ ಮಿತಿ 5 ಲಕ್ಷಕ್ಕೆ ಏರಿಸುವ ಅಂದಾಜಿದೆ.

2) ಹೆಚ್ಚು ಭತ್ಯೆಗಳು: ಪ್ರಸ್ತುತ ಕೇಂದ್ರ ಸರ್ಕಾರದ ನೌಕರರಿಗೆ ನೀಡುತ್ತಿರುವ ಭತ್ಯೆಗಳು ಯಾವುದಕ್ಕೂ ಸಾಕಾಗುತ್ತಲ್ಲ. ಸಾರಿಗೆ ಭತ್ಯೆ ತಿಂಗಳಿಗೆ 1600 ರೂ. ಇದ್ದು, ದೀರ್ಘಾವಧಿ ಪ್ರಯಾಣದ ಸಂದರ್ಭಕ್ಕಾಗಿ 3 ಸಾವಿರಕ್ಕೆ ಏರಿಸುವ ಅನಿವಾರ್ಯತೆಯಿದೆ.  ಆದಾಯ ತೆರಿಗೆ ಕಾಯಿದೆ 10(5)ರ ಪ್ರಕಾರ  ಉದ್ಯೋಗಿ ಅಥವಾ ಆತನ ಕುಟುಂಬಸ್ಥರು ದೇಶದೊಳಗೆ ಸಂಚರಿಸಲು ವರ್ಷದಲ್ಲಿ 2 ಬಾರಿ ಎಲ್'ಟಿಎ ಪಡೆಯಬಹುದು. ಈ ಪರಿಮಿತಿಯನ್ನು ತೆಗೆದುಹಾಕಬೇಕೆಂಬುಂದು ಉದ್ಯೋಗಿಗಳ ಒತ್ತಾಯವಾಗಿದೆ.

3) ಸೆಕ್ಷನ್ 80ಸಿ ಮಿತಿ: ಪ್ರಸ್ತುತ ಸೆಕ್ಷನ್ 80ಸಿ ಕಡಿತದ ಮಿತಿ ಕಳೆದ ಹಲವಾರು ವರ್ಷಗಳಿಂದ 1.50 ಲಕ್ಷ ರೂ. ಇದೆ. ಈ ಮಿತಿಯನ್ನು 3ರಿಂದ 4 ಲಕ್ಷ ರೂ.ಗಳಿಗೆ ಏರಿಸಬೇಕಾದ ಅನಿವಾರ್ಯತೆಯಿದೆ.

4) ಬ್ಯಾಂಕ್ ಉಳಿತಾಯ ಖಾತೆಯ ಬಡ್ಡಿ: ಉಳಿತಾಯ ಖಾತೆಯ ಬಡ್ಡಿ ದರದ ಮಿತಿ 10 ಸಾವಿರ ರೂ. ಇದ್ದು, ಇದನ್ನು  ಕಳೆದ ಕೆಲವು ವರ್ಷಗಳ ಹಣದುಬ್ಬರ ದರವನ್ನು ಪರಿಗಣಿಸಿ ಹೆಚ್ಚಿಸಬೇಕಾದ ಅಗತ್ಯವಿದೆ.

5) ಪ್ರಮಾಣಿತ ಕಡಿತ ಆಯ್ಕೆ ಮರು ಪರಿಚಯ: ಸ್ವದ್ಯೋಗಿ ಹಾಗೂ ಉದ್ಯಮದಾರರಿಗೆ ಹೋಲಿಸಿದರೆ  ವೇತನದಾರ ತೆರಿಗೆದಾರರಿಗೆ ತೆರಿಗೆ ಕಡಿತ ಹೆಚ್ಚಿದೆ.ಅವರಿಗೆ ನಿರ್ದಿಷ್ಟ ಅನುಕೂಲಗಳುಳ್ಳ ಆಯ್ಕೆಗಳು ಕಡಿಮೆಯಿದೆ. ಈ ರೀತಿ ಆಯ್ಕೆಯನ್ನು 1974-75ರಲ್ಲಿ ಪರಿಚಯಿಸಲಾಗಿತ್ತು. ಇದನ್ನು 2006-07ರಲ್ಲಿ ರದ್ದುಗೊಳಿಸಲಾಗಿತ್ತು. ಪ್ರಮಾಣಿತ ಕಡಿತ ಆಯ್ಕೆ ಶುರುವಾಗುವ ನಿರೀಕ್ಷೆಯಲ್ಲಿ ವೇತನದಾರರಿದ್ದಾರೆ.

Follow Us:
Download App:
  • android
  • ios