Asianet Suvarna News Asianet Suvarna News

ಬಜೆಟ್ ಮಂಡನೆಗೆ ಕ್ಷಣಗಣನೆ; ಜೇಟ್ಲಿ ಜೋಳಿಗೆಯಲ್ಲೇನಿದೆ? ನಿರೀಕ್ಷೆಗಳೇನು? ಸಾಧ್ಯತೆಗಳೇನು? ರಾಜ್ಯಕ್ಕೆ ಸಿಗುತ್ತಾ ಬಂಪರ್ ಕೊಡುಗೆ?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಹು ನಿರೀಕ್ಷಿತ ಬಜೆಟ್-2018 ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಜೋಳಿಗೆಯಲ್ಲಿ ಏನೆಲ್ಲಾ ಇವೆ ಎಂಬ ಕುತೂಹಲ ದೇಶದ ಜನರಿಗಿದೆ. ಯಾವ್ಯಾವ ಕ್ಷೇತ್ರಕ್ಕೆ ಏನೆಲ್ಲಾ ಸಿಗಬಹುದು, ಏನೆಲ್ಲಾ ನಿರೀಕ್ಷೆಗಳಿವೆ ಇಲ್ಲಿವೆ ನೋಡಿ.

Budget 2018

ಬೆಂಗಳೂರು (ಫೆ.01): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಹು ನಿರೀಕ್ಷಿತ ಬಜೆಟ್-2018 ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ವಿತ್ತ ಸಚಿವ ಅರುಣ್ ಜೇಟ್ಲಿ ಜೋಳಿಗೆಯಲ್ಲಿ ಏನೆಲ್ಲಾ ಇವೆ ಎಂಬ ಕುತೂಹಲ ದೇಶದ ಜನರಿಗಿದೆ. ಯಾವ್ಯಾವ ಕ್ಷೇತ್ರಕ್ಕೆ ಏನೆಲ್ಲಾ ಸಿಗಬಹುದು, ಏನೆಲ್ಲಾ ನಿರೀಕ್ಷೆಗಳಿವೆ ಇಲ್ಲಿವೆ ನೋಡಿ.

ಬಜೆಟ್ ಸವಾಲು?

* ಲೊಕಸಭೆ, 8 ರಾಜ್ಯಗಳ ವಿಧಾನಸಭೆ ಚುನಾವಣೆ ಗೆಲ್ಲುವ ಅನಿರ್ವಾತೆ

* ಉತ್ತಮ ಬಜೆಟ್ ಮಂಡಿಸಿ ದೇಶದ ಜನರ ಮನಗೆಲ್ಲಬೇಕು

* ಕೃಷಿ ಬೆಳವಣಿಗೆ ದರ 1.7 % ಕ್ಕೆ ಕುಸಿತ, ಪುನಚೇತನಗೊಳಿಸೋ ಅನಿವಾರ್ಯತೆ

* ಜಿಎಸ್‍ಟಿಯಿಂದ ಆಗಿರೋ ಗೊಂದಲ ನಿವಾರಣೆ ಮಾಡುವ ಅನಿವಾರ್ಯತೆ

* ನೋಟ್ ಬ್ಯಾನ್‍ನಿಂದ ಆರ್ಥಿಕ ಹಿಂಜರಿಕೆ ಆಗಿಲ್ಲ ಎಂದು ಸಾಬೀತು ಮಾಡಬೇಕು

2018-19ರ ಬಜೆಟ್ ನಿರೀಕ್ಷೆಗಳು 

ಕೃಷಿ ಕ್ಷೇತ್ರ

* ದೇಶದ ಜಿಡಿಪಿ ವೃದ್ಧಿಗೆ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು

* ಕೃಷಿ ಕ್ಷೇತ್ರದ ಅನುದಾನ ಹೆಚ್ಚಿಸಬೇಕು

* ಕೃಷಿ ಶಿಕ್ಷಣಕ್ಕೆ ಒತ್ತುಕೊಡುವ ಸಾಧ್ಯತೆ

* ರೈತರ ಸಾಲ ಸೌಲಭ್ಯಗಳನ್ನು ಹೆಚ್ಚಿಸ ಬೇಕು

* ಬೆಳೆ ವಿಮೆ ಯೋಜನೆಗಳಿಗೆ ಹೆಚ್ಚಿನ ಅನುದಾನ

* ಕೃಷಿಕರ ಆದಾಯ ದುಪ್ಪಟ್ಟುಗೊಳಿಸಲು ಕ್ರಮಕೈಗೊಳ್ಳಬೇಕು

* ಕಳೆದ ಬಾರಿಯ ಅನುದಾನ ರೂ.51,026 ಕೋಟಿ

* ಈ ಬಾರಿ 58 ಸಾವಿರ ಕೋಟಿ ದಾಟುವ ಸಾಧ್ಯತೆ

ಕೈಗಾರಿಕಾ ಕ್ಷೇತ್ರ  

* ಕಳೆದ ಬಾರಿ ಕೈಗಾರಿಕಾ ಕ್ಷೇತ್ರಕ್ಕೆ ರೂ 3,96,000 ಕೋಟಿ ಅನುದಾನ

* ಜಿಎಸ್‍ಟಿಯಿಂದ ಸೊರಗಿದ್ದ ಕೈಗಾರಿಕೆಗಳ ಪುನಶ್ಚೇತನಕ್ಕೆ ಕ್ರಮ

* ಮೇಕ್ ಇನ್ ಇಂಡಿಯಾ ಹೆಚ್ಚು ಪ್ರಸಿದ್ಧಿಗೊಳಿಸಲು ಕ್ರಮ

* ಸಕ್ಕರೆ ಅಭಿವೃದ್ಧಿ ನಿಧಿಗಾಗಿ ರೂ. 500 ಕೋಟಿ ನಿರೀಕ್ಷೆ

ಯುವಜನತೆ ಮತ್ತು ಸಾಮಾಜಿಕ ಭದ್ರತೆ

* ಬಿಜೆಪಿ ಅಧಿಕಾರಾವಧಿಯಲ್ಲಿ ನಿರುದ್ಯೊಗ ಪ್ರಮಾಣ ಶೇಕಡ 3.7ಕ್ಕೆ ಏರಿಕೆ

* ನಿರುದ್ಯೊಗ ಪ್ರಮಾಣ ತಗ್ಗಿಸುವತ್ತ ಕೇಂದ್ರ ಸರ್ಕಾರ ಗಮನ

* ವಿಧವೆಯರು, ಹಿರಿಯ ನಾಗರಿಕರಿಗೆ ಆದ್ಯತೆ

* ಮಾಸಿಕ ಪಿಂಚಣಿಯನ್ನ 800 ರೂನಿಂದ 1 ಸಾವಿರ ರೂ.ಗೆ ಹೆಚ್ಚಿಸುವ ಸಾಧ್ಯತೆ

* ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹಕ್ಕೆ ಅಗತ್ಯ ಕ್ರಮ

* ಪ್ರಧಾನ ಮಂತ್ರಿ ಕೌಶಲ ಕೇಂದ್ರ ವಿಸ್ತರಣೆ

* ಪ್ರವಾಸ ಮತ್ತು ಉದ್ಯೋಗ ಹೆಚ್ಚಳಕ್ಕೆ ಒತ್ತು.

* ಉದ್ಯೋಗ ಖಾತ್ರಿ , ಗ್ರಾಮೀಣ ಮನೆ ನಿರ್ಮಾಣಕ್ಕೆ ಹೆಚ್ಚಿನ ಹಣ

ಆದಾಯ ತೆರಿಗೆ

* ಆದಾಯ ತೆರಿಗೆ ಕಡಿತದ ಪಾಲು ಹಿಂದಿರುಗಿಸುವ ಸಾಧ್ಯತೆ

* ತೆರಿಗೆ ವಿನಾಯಿತಿ ಪ್ರಮಾಣ ಹೆಚ್ಚಳ ಸಾಧ್ಯತೆ

* ಗರಿಷ್ಠ ಮಿತಿ 2.5 ಲಕ್ಷ ದಿಂದ 3 ಲಕ್ಷಕ್ಕೆ ಹೆಚ್ಚಳ ಸಾಧ್ಯತೆ

* ಗರಿಷ್ಠ ಆದಾಯ ತೆರಿಗೆ ದರವನ್ನು 25%ಗೆ ಇಳಿಸುವ ಸಾಧ್ಯತೆ

* 80ಸಿ ಅಡಿಯಲ್ಲಿ ವಿನಾಯತಿ ಮಿತಿ ಹೆಚ್ಚಿಸುವ ಸಾಧ್ಯತೆ

* ರೂ 1.5 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಿಸುವ ಸಾಧ್ಯತೆ

* ಸ್ಟಾಂಡರ್ಡ್ ಡಿಡಕ್ಷನ್ ಮರು ಜಾರಿ ಸಂಭವ

ಇಂಧನ

* ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಸುವಂತೆ ಒತ್ತಡ

* ಇಂಧನದ ಮೇಲಿನ ಅಬಕಾರಿ ಸುಂಕ ಕಡಿತ ಸಾಧ್ಯತೆ

ಬ್ಯಾಂಕಿಂಗ್ ಕ್ಷೇತ್ರ

* ನಿಶ್ಚಿತ ಠೇವಣಿಗಳ ಮೇಲೆ ತೆರಿಗೆ ಹೆಚ್ಚಿಸೋ ಸಾಧ್ಯತೆ

* ಹೂಡಿಕೆಗಳ ಮೇಲೆ ಹೊಸ ಕೊಡುಗೆ ಘೋಷಿಸುವ ನಿರೀಕ್ಷೆ

* ಅನುತ್ಪಾದಕ ಆಸ್ತಿ ಪ್ರಮಾಣ ತಗ್ಗಿಸಲು ಕ್ರಮ

* ಷೇರು ವಹಿವಾಟು ತೆರಿಗೆ ಹೆಚ್ಚಳ ನಿರೀಕ್ಷೆ

* ದೀರ್ಘಾವಧಿ ಹೂಡಿಕೆ ಮೇಲೂ ಕ್ಯಾಪಿಟಲ್ ಗೇನ್ ಹೆಚ್ಚಾಗುವ ಸಾಧ್ಯತೆ

ಆರೋಗ್ಯ

* ಆರೋಗ್ಯ ವಿಮೆ ಮೇಲಿನ ಪ್ರಯೋಜನಗಳ ಹೆಚ್ಚಳ

* ವೈದ್ಯಕೀಯ ಪರೀಕ್ಷೆ ಮತ್ತು ಔಷಧಗಳ ಬೆಲೆ ಇಳಿಕೆ ಸಾಧ್ಯತೆ

* ಸರ್ಕಾರಿ ಆಸ್ಪತ್ರೆಗಳ ಮೇಲ್ದರ್ಜೆಗೆ ಸೂಕ್ತ ಕ್ರಮ

ಜಿಎಸ್‍ಟಿ

* ಜಿಎಸ್‍ಟಿ ಜಾರಿ ನಂತರ ಮೊದಲ ಬಜೆಟ್

* ಜಿಎಸ್‍ಟಿಯಿಂದ ಹೊರಗಿರುವ ವಸ್ತುಗಳ ಮೇಲೆ ತೆರಿಗೆ ಹೆಚ್ಚಳ ಸಂಭವ

* ಸ್ಯಾನಿಟರಿ ಪ್ಯಾಡ್‍ಗಳ ಮೇಲೆ ಜಿಎಸ್‍ಟಿ ಇಳಿಸೋ ಸಾಧ್ಯತೆ

* ಜಿಎಸ್‍ಟಿ ದರವನ್ನ ಶೇಕಡ 18ಕ್ಕೆ ಇಳಿಸೋ ಸಾಧ್ಯತೆ

ರಕ್ಷಣಾ ವೆಚ್ಚ

* ಕಳೆದ ಬಾರಿ ಬಜೆಟ್‍ನಲ್ಲಿ 9%ರಷ್ಟು ರಕ್ಷಣಾ ವೆಚ್ಚಕ್ಕೆ ಮೀಸಲು

* ಈ ಬಾರೀ 15% ಗೆ ಅನುದಾನ ಹೆಚ್ಚಾಗುವ ಸಾಧ್ಯತೆ

* ಯುದ್ಧೋಪಕರಣಗಳ ಅಭಿವೃದ್ಧಿ ಹಾಗೂ ಸಂಶೋಧನೆಗೆ ಹೆಚ್ಚಿನ ಒತ್ತು

* ಕಳೆದ ಬಾರಿಯ ಒಟ್ಟು ರಕ್ಷಣಾವೆಚ್ಚ ರೂ. 2.74,114 ಕೋಟಿ

Follow Us:
Download App:
  • android
  • ios