ಇಂದೇ ಬಜೆಟ್ ಮಂಡನೆಗೆ ಸರ್ವಪಕ್ಷಗಳು ಸಮ್ಮತಿ ನೀಡಿವೆ. ಬೆಳಿಗ್ಗೆ 11 ಗಂಟೆಗೆ ಲೋಕಸಭಾ ಕಲಾಪ ಆರಂಭಗೊಳ್ಳಲಿದ್ದು, ಸಂಸದ ಅಹ್ಮದ್ ನಿಧನಕ್ಕೆ ಸಂತಾಪ ಸೂಚಿಸಿದ ಬಳಿಕ ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ.

ನವದೆಹಲಿ(ಫೆ.01): ಇಂದೇ ಬಜೆಟ್ ಮಂಡನೆಗೆ ಸರ್ವಪಕ್ಷಗಳು ಸಮ್ಮತಿ ನೀಡಿವೆ. ಬೆಳಿಗ್ಗೆ 11 ಗಂಟೆಗೆ ಲೋಕಸಭಾ ಕಲಾಪ ಆರಂಭಗೊಳ್ಳಲಿದ್ದು, ಸಂಸದ ಅಹ್ಮದ್ ನಿಧನಕ್ಕೆ ಸಂತಾಪ ಸೂಚಿಸಿದ ಬಳಿಕ ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ.

ಲೋಕಸಭೆ ಅಥವಾ ರಾಜ್ಯಸಭೆಯ ಹಾಲಿ ಸದಸ್ಯರು ಮೃತಪಡ್ಡ ಸಂದರ್ಭದಲ್ಲಿ, ಕಲಾಪದ ವೇಳೆ ಮೃತಪಟ್ಟಾಗ ೊಂದು ದಿನದ ಕಲಾಪವನ್ನು ಮುಂದೂಡುವುದು ವಾಡಿಕೆ. ಆದರೆ ಬಜೆಟ್ ಮಂಡನೆಯ ದಿನವೇ ಲೋಕಸಭೆ ಅಥವಾ ರಾಜ್ಯಸಭೆಯ ಸದಸ್ಯರೊಬ್ಬರು ಮೃತಪಟ್ಟ ಘಟನೆ ಈವರೆಗೂ ನಡೆದಿರಲಿಲ್ಲ. ಮೊಟ್ಟ ಮೊದಲ ಬಾರಿಗೆ ಈ ರೀತಿ ನಡೆದಿದೆ.

ಪದ್ದತಿಯಂತೆ ಬಜೆಟ್ ಮುಂದೂಡಬೇಕು ಎಂದು ಪ್ರತಿಪಕ್ಷಗಳು ಆಗ್ರಹ ಮಾಡಿದ್ದವು. ಆದರೆ ಬಜೆಟ್ ಮಂಡನೆ ಎಂಬುವುದು ದೇಶದ ಆರ್ಥಿಕ ವ್ಯವಸ್ಥೆಯ ದೃಷ್ಟಿಯಿಂದ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಬಜೆಟ್ ಮಂಡನೆ ಮುಂದೂಡಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಸ್ಪೀಕರ್ ಅಧಿಕೃತ ಸಮ್ಮತಿ ಸೂಚಿಸುವುದು ಬಾಕಿ ಇದೆ.