Asianet Suvarna News Asianet Suvarna News

ಆದಾಯ ಪಾವತಿದಾರರಿಗೆ ರಿಲೀಫ್; ತೆರಿಗೆ ಮಿತಿ ಏರಿಕೆಯಿಲ್ಲ

ಈ ಬಾರಿಯ ಬಹುನಿರೀಕ್ಷಿತ ಬಜೆಟ್ ನಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ಬಿಗ್ ರಿಲೀಫ್ ನೀಡಲಾಗಿದೆ. ಕೇಂದ್ರ ಸರ್ಕಾರ ಆದಾಯ ತೆರಿಗೆ ಮಿತಿಯನ್ನು ಏರಿಕೆ ಮಾಡಿಲ್ಲ.

Budget 2017 Relief to Tax payers

ನವದೆಹಲಿ (ಫೆ.01): ಈ ಬಾರಿಯ ಬಹುನಿರೀಕ್ಷಿತ ಬಜೆಟ್ ನಲ್ಲಿ ಆದಾಯ ತೆರಿಗೆ ಪಾವತಿದಾರರಿಗೆ ಬಿಗ್ ರಿಲೀಫ್ ನೀಡಲಾಗಿದೆ. ಕೇಂದ್ರ ಸರ್ಕಾರ ಆದಾಯ ತೆರಿಗೆ ಮಿತಿಯನ್ನು ಏರಿಕೆ ಮಾಡಿಲ್ಲ.

2.5-5 ಲಕ್ಷ  ಪಾವತಿಗೆ ಇದ್ದ ಶೇ. 10 ರಷ್ಟು ಆದಾಯ ತೆರಿಗೆ ದರವನ್ನು ಶೇ. 5 ಕ್ಕೆ ಇಳಿಸಲಾಗಿದೆ. ಈ ಇಳಿಕೆಯಿಂದ 3 ಲಕ್ಷ ಆದಾಯದಾರರು ತೆರಿಗೆ ಕಟ್ಟಬೇಕಾಗಿಲ್ಲ. ಇದರಿಂದ ತೆರಿಗೆದಾರರಿಗೆ 12500 ರೂ ಉಳಿತಾಯವಾಗಲಿದೆ. 5-10 ಲಕ್ಷ ಆದಾಯಕ್ಕೆ ಶೇ. 20 ರಷ್ಟು ತೆರಿಗೆ ದರ ವಿಧಿಸಲಾಗಿದೆ. 10 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ. 30 ರಷ್ಟು ತೆರಿಗೆ ವಿಧಿಸಲಾಗಿದೆ. 50 ಲಕ್ಷ- 1ಕೋಟಿ ಆದಾಯಕ್ಕೆ ಶೇ. 10 ರಷ್ಟು ಸರ್ ಚಾರ್ಜ್ ವಿಧಿಸಲಾಗುತ್ತದೆ.

ತೆರಿಗೆ ನೀತಿ ತಿದ್ದುಪಡಿ ಪ್ರಕಾರ 3 ಲಕ್ಷಕ್ಕಿಂತ ಹೆಚ್ಚು ನಗದು ವ್ಯವಹಾರ ಮಾಡುವಂತಿಲ್ಲ. ತೆರಿಗೆ ಪಾವತಿದಾರರು ಒಂದು ಪುಟದ ಫಾರ್ಮ್ ತುಂಬಿದರೆ ಸಾಕು.

Follow Us:
Download App:
  • android
  • ios