ಇದೇ ಮೊದಲ ಬಾರಿಗೆ ನಾಳೆ ಕೇಂದ್ರ ಮತ್ತು ರೈಲ್ವೇ ಬಜೆಟ್ ಮಂಡನೆಯಾಗಲಿದ್ದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡುತ್ತಾ, ನರೇಂದ್ರ ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ಶ್ಲಾಘಿಸಿದ್ದಾರೆ.
ನವದೆಹಲಿ (ಜ.31): ಇದೇ ಮೊದಲ ಬಾರಿಗೆ ನಾಳೆ ಕೇಂದ್ರ ಮತ್ತು ರೈಲ್ವೇ ಬಜೆಟ್ ಮಂಡನೆಯಾಗಲಿದ್ದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡುತ್ತಾ, ನರೇಂದ್ರ ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ಶ್ಲಾಘಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರವು ಬಡವರ ಜೀವನ ಗುಣಮಟ್ಟವನ್ನು ಸುಧಾರಿಸಿದೆ. ರೈತರ ಜೀವನಮಟ್ಟ ಸುಧಾರಣೆ, ಮಹಿಳಾ ಸಬಲೀಕರಣ, ಬಡವರಿಗೆ ಎಲ್ ಪಿಜಿ ಸಬ್ಸಿಡಿ ನೀಡಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದೆ. ನೋಟು ಅಮಾನ್ಯ ಕ್ರಮವು ಕಪ್ಪುಹಣ ಹಾಗೂ ಭ್ರಷ್ಟಾಚಾರ ವಿರುದ್ಧದ ಹೋರಾಟವಾಗಿದ್ದು ಇದೊಂದು ಒಳ್ಳೆಯ ನಡೆ ಎಂದು ಶ್ಲಾಘಿಸಿದ್ದಾರೆ.
