ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಚಾದೂರದಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರಗಾಮಿಗಳ ನಡುವೆ ಎನ್ ಕೌಂಟರ್ ನಡೆಯುತ್ತಿದ್ದ ವೇಳೆ ನಾಗರೀಕರೊಂದಿಗೆ ಘರ್ಷಣೆ ಉಂಟಾಗಿ ಮೂವರು ನಾಗರೀಕರು ಮೃತಪಟ್ಟಿದ್ದು 17 ಮಂದಿ ಗಾಯಗೊಂಡಿದ್ದಾರೆ. ಎನ್ ಕೌಂಟರ್ ನಲ್ಲಿ ಉಗ್ರಗಾಮಿಯೊಬ್ಬ ಮೃತಪಟ್ಟಿದ್ದು ಇನ್ನೂ ಪತ್ತೆಯಾಗಿಲ್ಲ.
ನವದೆಹಲಿ (ಮಾ.28): ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಚಾದೂರದಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರಗಾಮಿಗಳ ನಡುವೆ ಎನ್ ಕೌಂಟರ್ ನಡೆಯುತ್ತಿದ್ದ ವೇಳೆ ನಾಗರೀಕರೊಂದಿಗೆ ಘರ್ಷಣೆ ಉಂಟಾಗಿ ಮೂವರು ನಾಗರೀಕರು ಮೃತಪಟ್ಟಿದ್ದು 17 ಮಂದಿ ಗಾಯಗೊಂಡಿದ್ದಾರೆ. ಎನ್ ಕೌಂಟರ್ ನಲ್ಲಿ ಉಗ್ರಗಾಮಿಯೊಬ್ಬ ಮೃತಪಟ್ಟಿದ್ದು ಇನ್ನೂ ಪತ್ತೆಯಾಗಿಲ್ಲ.
ಚಾದೂರ ಸುತ್ತಮುತ್ತ ಉಗ್ರಗಾಮಿಗಳ ಅಡಗಿರಬಹುದಾ ಎಂದು ಮಾಹಿತಿ ತಿಳಿದುಕೊಳ್ಳಲು ನಸುಕಿನ ಜಾವದಿಂದಲೇ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸಿದವು. ಈ ಸಂದರ್ಭದಲ್ಲಿ ಉಗ್ರಗಾಮಿಗಳು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದರು. ಅದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದೇ ವೇಳೆ ನಾಗರೀಕರು ಕೂಡಾ ಕಲ್ಲು ತೂರಾಟ ನಡೆಸಿದರು. ಕಲ್ಲು ತೂರಾಟದಲ್ಲಿ 43 ಸಿಆರ್'ಪಿಎಫ್ ಯೋಧರು ಹಾಗೂ 20 ಪೊಲೀಸರು ಗಾಯಗೊಂಡಿದ್ದರೆ, ಸೇನಾ ಕಾರ್ಯಾಚರಣೆಯಲ್ಲಿ 17 ಮಂದಿ ನಾಗರಿಕರು ಗಾಯಗೊಂಡಿದ್ದಾರೆ.
ಮೃತಪಟ್ಟ ಮೂವರು ನಾಗರೀಕರ ಸಾವಿಗೆ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಸಂತಾಪ ವ್ಯಕ್ತಪಡಿಸಿದ್ದಾರೆ. ಯುವಕರು ಪ್ರಾಣ ಕಳೆದುಕೊಂಡಿದ್ದು ತುಂಬಾ ನೋವಿನ ಸಂಗತಿ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಎಲ್ಲಾ ಕಡೆಗಳಲ್ಲಿ ಶಾಂತಿ ಕಾಪಾಡಲು ಕರೆ ನೀಡಿದ್ದು ಹಿಂಸಾಚಾರ ಮಿತಿಮೀರಿದರೆ ಪರಿಸ್ಥಿತಿ ಬಿಗಡಾಯಿಸುತ್ತದೆ ಎಂದಿದ್ದಾರೆ.
