ತುರ್ತು ಪರಿಸ್ಥಿತಿಯಲ್ಲೂ ಬೌದ್ಧರಿಂದ ಮುಸ್ಲಿಮರ ಮೇಲೆ ಮುಂದುವರೆದ ದಾಳಿ

Buddhist Attack Muslims In Sri Lanka
Highlights

ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರೂ, ಮಂಗಳವಾರ ರಾತ್ರಿ ಗಲಭೆ ಪೀಡಿತ ಪ್ರದೇಶಗಳಲ್ಲಿ ಬೌದ್ಧರ ಗುಂಪುಗಳು ಅಲ್ಪಸಂಖ್ಯಾತ ಮುಸ್ಲಿಮರ ಮಸೀದಿ ಮತ್ತು ವಾಣಿಜ್ಯ ಮಳಿಗೆಗಳ ಮೇಲೆ ದಾಳಿ ನಡೆಸಿವೆ.

ಕೊಲಂಬೊ: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರೂ, ಮಂಗಳವಾರ ರಾತ್ರಿ ಗಲಭೆ ಪೀಡಿತ ಪ್ರದೇಶಗಳಲ್ಲಿ ಬೌದ್ಧರ ಗುಂಪುಗಳು ಅಲ್ಪಸಂಖ್ಯಾತ ಮುಸ್ಲಿಮರ ಮಸೀದಿ ಮತ್ತು ವಾಣಿಜ್ಯ ಮಳಿಗೆಗಳ ಮೇಲೆ ದಾಳಿ ನಡೆಸಿವೆ.

ಮುಸ್ಲಿಮ್‌ ಗುಂಪೊಂದರ ಜೊತೆ ನಡೆದ ಘರ್ಷಣೆಯಲ್ಲಿ, ಬೌದ್ಧ ಯುವಕನೊಬ್ಬನ ಸಾವಿನ ಬಳಿಕ ಭಾನುವಾರ ಆರಂಭವಾದ ಹಿಂಸೆ ಕ್ಯಾಂಡಿ ಜಿಲ್ಲೆಯಲ್ಲಿ ಮುಂದುವರೆದಿದ್ದು, ಅನಿರ್ಧಿಷ್ಠಾವಧಿ ಕಫä್ರ್ಯ ವಿಧಿಸಲಾಗಿದೆ. ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.

ಮೂವರು ಪೊಲೀಸ್‌ ಅಧಿಕಾರಿಗಳೂ ಗಾಯಗೊಂಡಿದ್ದಾರೆ. ಕೆಲವು ಮುಸ್ಲಿಮರು ಬಲವಂತವಾಗಿ ಬೌದ್ಧರನ್ನು ಮತಾಂತರ ಮಾಡುತ್ತಿರುವ ಬಗ್ಗೆ ಬೌದ್ಧ ಸಂಘಟನೆಗಳು ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ, ಕಳೆದ ವರ್ಷದಿಂದ ಈ ಭಾಗದಲ್ಲಿ ಎರಡೂ ಸಮುದಾಯಗಳ ನಡುವೆ ದ್ವೇಷ ಹೆಚ್ಚಾಗುತ್ತಾ ಸಾಗಿದೆ. ಪ್ರಸ್ತುತ ಹಿಂಸಾಚಾರ ನಿಯಂತ್ರಣಕ್ಕೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ದೇಶದಲ್ಲಿ ಹತ್ತು ದಿನಗಳ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

loader