ಬೆಂಗಳೂರು [ಜು.16] : ಅತೃಪ್ತರಾಗಿ ಹೊರ ನಡೆದಿರುವ ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಅತೃಪ್ತಿ ಶಮನವಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. 

ರಾಜೀನಾಮೆ ವಾಪಸ್ ಪಡೆಯುವ ಮೂಲಕ ಅತೃಪ್ತರ ಪಡೆಯಿಂದ ಹಿರ ಬರುವ ಸಾಧ್ಯತೆಗಳು ಕಂಡು ಬರುತ್ತಿದೆ. 

ರಾಜೀನಾಮೆ ನೀಡಿದ ದಿನದಿಂದ ರಾಮಲಿಂಗಾ ರೆಡ್ಡಿ ವಿಧಾನಸೌಧಕ್ಕೂ ತೆರಳದೇ ಯಾವುದೇ ಅಧಿಕವೇಶನದಲ್ಲಿಯೂ ಪಾಲ್ಗೊಂಡಿರಲಿಲ್ಲ. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ಇದೀಗ ತಮಗೂ ಅತೃಪ್ತರಿಗೂ ಸಂಬಂಧ ಇಲ್ಲ, ತಾವು ಯಾರೊಂದಿಗೂ ಸಂಪರ್ಕದಲ್ಲಿ ಇಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿಕೆ ನೀಡಿದ್ದು, ಈ ನಿಟ್ಟಿನಲ್ಲಿ ರಾಜೀನಾಮೆ ವಾಪಸ್ ಪಡೆಯುತ್ತಾರಾ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. 

ನಾಳೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ  ಹೇಳಿಕೆ ನೀಡಿದ್ದು, ಬಹುತೇಕ ಕಾಂಗ್ರೆಸ್ ಮುಖಂಡರ ಮನವಿಗೆ ಒಪ್ಪಿಗೆ ಸೂಚಿಸಿರುವ ಸಾಧ್ಯತೆ ಇದೆ.