‘ನನಗೆ ವಯಸ್ಸಾಗಿದೆ. ಹೀಗಾಗಿ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡುವಂತೆ ಒತ್ತಾಯಿಸುವುದು ಸರಿಯಲ್ಲ. ನನ್ನ ನಿವಾಸದ ವಿಳಾಸ ಗೊತ್ತಿರುವುದರಿಂದ ತನಿಖಾಧಿಕಾರಿಯೇ ಮನೆಗೆ ಬಂದರೆ ಸಂಪೂರ್ಣ ಮಾಹಿತಿ ನೀಡುತ್ತೇನೆ.’ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಮಾಧ್ಯ ಸಂಚಾಲಕ ವಿನಯ್ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮಲ್ಲೇಶ್ವರ ಉಪವಿಭಾಗ ಎಸಿಪಿ ಆನಂದ್ ಬಡಿಗೇರ್ ಅವರಿಗೆ ಬರೆದಿರುವ ಪತ್ರದ ಸಾರಾಂಶ ಇದು.
ಬೆಂಗಳೂರು(ಸೆ.29): ‘ನನಗೆ ವಯಸ್ಸಾಗಿದೆ. ಹೀಗಾಗಿ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡುವಂತೆ ಒತ್ತಾಯಿಸುವುದು ಸರಿಯಲ್ಲ. ನನ್ನ ನಿವಾಸದ ವಿಳಾಸ ಗೊತ್ತಿರುವುದರಿಂದ ತನಿಖಾಧಿಕಾರಿಯೇ ಮನೆಗೆ ಬಂದರೆ ಸಂಪೂರ್ಣ ಮಾಹಿತಿ ನೀಡುತ್ತೇನೆ.’ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ನ ಮಾಧ್ಯ ಸಂಚಾಲಕ ವಿನಯ್ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮಲ್ಲೇಶ್ವರ ಉಪವಿಭಾಗ ಎಸಿಪಿ ಆನಂದ್ ಬಡಿಗೇರ್ ಅವರಿಗೆ ಬರೆದಿರುವ ಪತ್ರದ ಸಾರಾಂಶ ಇದು.
ಪ್ರಕರಣ ಸಂಬಂಧ ಗುರುವಾರ (ಸೆ.28) ವಿಚಾರಣೆಗೆ ಗೈರಾದ ಯಡಿಯೂರಪ್ಪ ಅವರು ತಮ್ಮ ವಕೀಲರ ಮೂಲಕ ಪತ್ರ ಕಳುಹಿಸಿಕೊಟ್ಟಿದ್ದಾರೆ. ಈ ಪತ್ರವನ್ನು ಯಡಿಯೂರಪ್ಪ ಪರ ವಕೀಲರು ಮಲ್ಲೇಶ್ವರ ಉಪವಿಭಾಗ ಕಚೇರಿಗೆ ಗುರುವಾರ ಹಾಜರಾಗಿ ಎಸಿಪಿ ಆನಂದ್ ಬಡಿಗೇರ್ ಅವರಿಗೆ ಸಲ್ಲಿಸಿದರು. ಐಪಿಸಿ ಸೆಕ್ಷನ್ 160ರ ಪ್ರಕಾರ ಹಿರಿಯ ನಾಗರಿಕರಿಗೆ ಠಾಣೆಗೆ ಬಂದು ಮಾಹಿತಿ ನೀಡುವಂತೆ ಒತ್ತಾಯ ಮಾಡುವಂತಿಲ್ಲ. ಬದಲಾಗಿ, ತನಿಖಾಧಿಕಾರಿಯೇ ಹಿರಿಯ ನಾಗರಿಕರ ನಿವಾಸಕ್ಕೆ ಬಂದ ಮಾಹಿತಿ ಸಂಗ್ರಹ ಮಾಡಬೇಕು. ಈಗ ನನಗೆ 65 ವರ್ಷ ವಯಸ್ಸಾಗಿದೆ. ತನಿಖಾಧಿಕಾರಿಗೆ ನನ್ನ ವಿಳಾಸವೂ ಗೊತ್ತಿದೆ. ಹೀಗಾಗಿ ಮನೆಗೆ ಬಂದರೆ ಮಾಹಿತಿ ನೀಡುತ್ತೇನೆ, ಈ ಪ್ರಕರಣದ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅಲ್ಲದೆ, ಡಾಲರ್ಸ್ ಕಾಲೋನಿಯಲ್ಲಿನ ನಿವಾಸದಲ್ಲಿ ಅಪಹರಣ ಯತ್ನ ಪ್ರಕರಣಕ್ಕೆ ಸಂಚು ನಡೆಸ ಲಾಗಿತ್ತು ಎಂಬ ಆರೋಪವು ಸತ್ಯಕ್ಕೆ ದೂರವಾದುದು. ಪ್ರತಿನಿತ್ಯ ನೂರಾರು ಕಾರ್ಯಕರ್ತರು ಆಗಮಿಸುವು ದರಿಂದ ವೈಯಕ್ತಿಕವಾಗಿ ಗಮನಿಸಲು ಸಾಧ್ಯವಿಲ್ಲ. ಪೊಲೀಸ್ ತನಿಖೆಯಲ್ಲಿ ಅನಗತ್ಯವಾಗಿ ಹಸ್ತಕ್ಷೇಪ ಮಾಡುವ ಕೆಲಸವನ್ನು ನಾನೂ ಎಂದಿಗೂ ಮಾಡಿಲ್ಲ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ತಮಗೆ ನೀಡಲಾದ ನೋಟಿಸ್ಗೆ ಪ್ರತಿಯಾಗಿ ಇಂತಹದೊಂದು ಪತ್ರ ಬರೆದಿರುವುದಲ್ಲದೆ, ಯಡಿಯೂರಪ್ಪ ಪರ ವಕೀಲರು ತನಿಖಾಧಿಕಾರಿ ಮುಂದೆ ಹಾಜರಾಗಿ ಸಮಜಾಯಿಷಿಯನ್ನು ಗುರು ವಾರ ನೀಡಿದರು. ಪ್ರಕರಣ ಸಂಬಂ‘ ಸೆಕ್ಷನ್ 91ರ ಅಡಿಯಲ್ಲಿ ನೋಟಿಸ್ ನೀಡಲಾಗಿದೆ. ತನಿಖೆಗೆ ಸಹಕಾರ ನೀಡಲು ತಮ್ಮ ಕಕ್ಷಿದಾರ ಸಿದ್ದರಿದ್ದಾರೆ. ಆದರೆ, ಅವರ ಬಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಸ್ತುಗಳಾಗಲಿ, ದಾಖಲೆಗಳಾಗಲಿ ಸಲ್ಲಿಕೆ ಮಾಡುವಂತೆ ನೋಟಿಸ್ನಲ್ಲಿ ಉಲ್ಲೇಖ ಮಾಡಲಾಗಿಲ್ಲ. ಹೀಗಾಗಿ ಪೊಲೀಸರು ನೀಡಿರುವ ನೋಟಿಸ್ನ ಸೆಕ್ಷನ್ ಅಡಿಯಲ್ಲಿ ಹಾಜರಾಗುವ ಅಗತ್ಯ ಇಲ್ಲ. ಸಹಕಾರ ನೀಡಬೇಕಾಗಿರುವುದರಿಂದ ಪೊಲೀಸರು ಯಡಿಯೂರಪ್ಪ ಮನೆಗೆ ತೆರಳಿ ಮಾಹಿತಿ ಪಡೆದುಕೊಳ್ಳಬಹುದು ಎಂದು ತನಿಖಾಧಿಕಾರಿಗೆ ಮಾಹಿತಿ ನೀಡಿದರು.
ವಿನಯ್ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿ ಸಿದಂತೆ ಎಸಿಪಿ ವಿಚಾರಣೆಗೆ ಗುರುವಾರ (ಸೆ.28) ಹಾಜರಾಗುವಂತೆ ಕಳೆದ 10 ದಿನಗಳ ಹಿಂದೆ ಎಸಿಪಿ ಆನಂದ್ ಬಡಿಗೇರ ನೋಟಿಸ್ ಜಾರಿಗೊಳಿಸಿದ್ದರು. ಆದರೆ, ಯಡಿಯೂರಪ್ಪ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಗುರುವಾರ ಹಾಜರಾಗಬೇಕಿರುವ ಕಾರಣ ವಯಸ್ಸಿನ ಕಾರಣ ಹೇಳಿ ವಿಚಾರಣೆಗೆ ಗೈರಾಗಿದ್ದಾರೆ. ಯಡಿಯೂರಪ್ಪ ಅವರು ವಿಚಾರಣೆಗೆ ಗೈರಾಗಿರುವುದರಿಂದ ಮತ್ತೊಂದು ನೋಟಿಸ್ ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ವಿನಯ್ ಅಪಹರಣ ಯತ್ನ ಪ್ರಕರಣದಲ್ಲಿ ಯೂಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ಹೆಸರು ಪ್ರಸ್ತಾಪವಾಗಿದೆ. ಹೀಗಾಗಿ ಸಂತೋಷ್ ಕುರಿತು ಮಾಹಿತಿ ಪಡೆದುಕೊಳ್ಳುವ ಸಂಬಂಧ ಯಡಿಯೂರಪ್ಪ ಅವರನ್ನು ವಿಚಾರಣೆ ನಡೆಸಲು ಪೊಲೀಸರು ಕರೆದಿದ್ದರು.
ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು ವಿನಯ್ ಅಪಹರಣ ಸಂಚು ಯಡಿಯೂರಪ್ಪ ಅವರ ನಿವಾಸದಲ್ಲಿ ನಡೆದಿದ್ದು, ಸಂತೋಷ್ ಅವರನ್ನು ಯಡಿಯೂರಪ್ಪ ನಿವಾಸದಲ್ಲಿಯೇ ಭೇಟಿಯಾಗಿ ರುವ ಬಗ್ಗೆ ಮಾಹಿತಿ ಒದಗಿಸಿದ್ದರು. ಈ ಮಾಹಿತಿ ಮೇರೆಗೆ ಯಡಿಯೂರಪ್ಪ ಅವರನ್ನು ಪೊಲೀಸರು ವಿಚಾರಣೆಗಾಗಿ ಕರೆದಿದ್ದರು.
