Asianet Suvarna News Asianet Suvarna News

ಆತಿಥ್ಯ ಕೊಟ್ಟ ದಲಿತರಿಗೆ ಶೀಘ್ರವೇ ಬಿಎಸ್‌ವೈ ಮನೆಯಲ್ಲಿ ಅತಿಥಿ ಸತ್ಕಾರ

ರಾಜ್ಯಾದ್ಯಂತ ಜನಸಂಪರ್ಕ ಅಭಿಯಾನ ಕೈಗೊಂಡ ವೇಳೆ ಆತ್ಮೀಯವಾಗಿ ತಮ್ಮನ್ನು ಸೇರಿದಂತೆ ಬಿಜೆಪಿ ನಾಯಕರಿಗೆ ಆತಿಥ್ಯ ಕಲ್ಪಿಸಿದ 66 ದಲಿತ ಕುಟುಂಬಗಳನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಆಹ್ವಾನಿಸಿ ತಮ್ಮ ಮನೆಯಲ್ಲಿ ಸತ್ಕರಿಸಲಿದ್ದಾರೆ. ಆದರೆ, ಈ ಬಗ್ಗೆ ಇನ್ನು ದಿನಾಂಕ ನಿಗದಿಯಾಗಿಲ್ಲ. ಶೀಘ್ರದಲ್ಲಿಯೇ ದಿನಾಂಕ ನಿಗದಿಗೊಳಿಸಲಾಗುತ್ತದೆ.

BSY Will Invites Dalits to his Home for Get Together
  • Facebook
  • Twitter
  • Whatsapp
ಬೆಂಗಳೂರು (ಜು.04): ರಾಜ್ಯಾದ್ಯಂತ ಜನಸಂಪರ್ಕ ಅಭಿಯಾನ ಕೈಗೊಂಡ ವೇಳೆ ಆತ್ಮೀಯವಾಗಿ ತಮ್ಮನ್ನು ಸೇರಿದಂತೆ ಬಿಜೆಪಿ ನಾಯಕರಿಗೆ ಆತಿಥ್ಯ ಕಲ್ಪಿಸಿದ 66 ದಲಿತ ಕುಟುಂಬಗಳನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಆಹ್ವಾನಿಸಿ ತಮ್ಮ ಮನೆಯಲ್ಲಿ ಸತ್ಕರಿಸಲಿದ್ದಾರೆ. ಆದರೆ, ಈ ಬಗ್ಗೆ ಇನ್ನು ದಿನಾಂಕ ನಿಗದಿಯಾಗಿಲ್ಲ. ಶೀಘ್ರದಲ್ಲಿಯೇ ದಿನಾಂಕ ನಿಗದಿಗೊಳಿಸಲಾಗುತ್ತದೆ.
 
ಈ ಮೂಲಕ ದಲಿತರೆಡೆಗಿನ ತಮ್ಮ ಬದ್ಧತೆ, ವಿಶ್ವಾಸಗಳನ್ನು ಮತ್ತಷ್ಟು ವಿಸ್ತರಿಸಿ ಗಟ್ಟಿಗೊಳಿಸಲಿದ್ದಾರೆ. ಅಲ್ಲದೇ, ದಲಿತರ ಮನೆಗಳಲ್ಲಿನ ಉಪಹಾರ ಸೇವನೆಯನ್ನು ಟೀಕಿಸುತ್ತಿದ್ದ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಮುಂದಾಗಿದ್ದಾರೆ.
ಜನಸಂಪರ್ಕ ಅಭಿಯಾನ ಸಂದರ್ಭದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿ ಯಶಸ್ವಿಯಾಗಿತ್ತು. ಈ ಅಭಿಯಾನದ ವೇಳೆ ಯಡಿಯೂರಪ್ಪ ಸೇರಿದಂತೆ ಪಕ್ಷದ ನಾಯಕರು, ಕಾರ್ಯಕರ್ತರು ಶೋಷಿತರ, ದಲಿತರ ಮತ್ತು ಹಿಂದುಳಿದವರ ಮನೆಗಳಲ್ಲಿ ಉಪಾಹಾರ ಮತ್ತು ಭೋಜನಗಳನ್ನು ಮಾಡಿದ್ದರು. ಅತ್ಯಂತ ಆತ್ಮೀಯವಾಗಿ ಸತ್ಕರಿಸಿದ ಆ ಎಲ್ಲಾ ಕುಟುಂಬಗಳ ಸದಸ್ಯರನ್ನು ಬೆಂಗಳೂರಿನ ತಮ್ಮ ಮನೆಗೆ ಆಮಂತ್ರಿಸುವ ಯಡಿಯೂರಪ್ಪ ಅವರು ಅವರೆಲ್ಲರನ್ನು ತಮ್ಮ ಆತಿಥ್ಯದ ಮೂಲಕ ಪ್ರತಿಸತ್ಕರಿಸಲಿದ್ದಾರೆ. 
 
ಮೇ 18 ರಿಂದ ಜೂ.29 ರವರೆಗೆ 27 ಜಿಲ್ಲೆಗಳ 87 ವಿಧಾನಸಭಾ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಪ್ರವಾಸ ಕೈಗೊಂಡು 10.600 ಕಿ.ಮೀ.ದೂರ ಕ್ರಮಿಸಿದ್ದಾರೆ. ಈ ಸಂದರ್ಭದಲ್ಲಿ 66 ದಲಿತ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಅಲ್ಲಿ ಉಪಹಾರ, ಭೋಜನ ಸೇವಿಸಿದ್ದಾರೆ. ಜನಸಂಪರ್ಕದಲ್ಲಿ ಜಿಲ್ಲಾ ಕೇಂದ್ರಗಳನ್ನು ಬಿಟ್ಟು ತಾಲೂಕು ಕೇಂದ್ರಗಳಲ್ಲಿ 32 ಬೃಹತ್ ಸಾರ್ವಜನಿಕ ಸಭೆಗಳು, 33 ಕ್ಕೂ ಹೆಚ್ಚು ಪಕ್ಷದ ಸಭೆಗಳನ್ನು ನಡೆಸಿದ್ದರು.

 

Follow Us:
Download App:
  • android
  • ios