ಸಂತೋಷ್ ನಿವಾಸಕ್ಕೆ ಬಿಎಸ್'ವೈ ಭೇಟಿ; 1 ಲಕ್ಷ ರೂ ಪರಿಹಾರ ಧನ

First Published 2, Feb 2018, 10:47 AM IST
BSY Visits Santosh Resident and give 1 lakh Compansation
Highlights

ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಸಂತೋಷ್ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್'ವೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿದ್ದಾರೆ. 1 ಲಕ್ಷ ರೂ.ಪರಿಹಾರ ಧನವನ್ನು ಕುಟಂಬದವರಿಗೆ ನೀಡಿದ್ದಾರೆ. ತನ್ನ ಮಗನ ಸಾವಿನ ಬಗ್ಗೆ ನ್ಯಾಯ ನೀಡುವಂತೆ ಸಂತೋಷ್ ತಾಯಿ ಮನವಿ ಮಾಡಿಕೊಂಡಿದ್ದಾರೆ.

ಬೆಂಗಳೂರು (ಫೆ.02): ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಸಂತೋಷ್ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್'ವೈ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ನೀಡಿದ್ದಾರೆ. 1 ಲಕ್ಷ ರೂ.ಪರಿಹಾರ ಧನವನ್ನು ಕುಟಂಬದವರಿಗೆ ನೀಡಿದ್ದಾರೆ. ತನ್ನ ಮಗನ ಸಾವಿನ ಬಗ್ಗೆ ನ್ಯಾಯ ನೀಡುವಂತೆ ಸಂತೋಷ್ ತಾಯಿ ಮನವಿ ಮಾಡಿಕೊಂಡಿದ್ದಾರೆ.

ಈ ಏರಿಯಾದಲ್ಲಿ ಗಾಂಜಾ ಹುಡುಗರ ಕಾಟ ಹೆಚ್ಚಾಗಿದೆ . ಹೆಣ್ಣು ಮಕ್ಕಳಿಗೂ ಇಲ್ಲಿ ತೊಂದರೆಯಾಗುತ್ತಿದೆ. ಅವರಿಂದ ಇಂದು ನಮ್ಮ ಮಗನನ್ನ ಕಳೆದುಕೊಂಡಿದ್ದೇವೆ ಎಂದು  ಬಿಎಸ್​ವೈ ಎದುರು ಸಂತೋಷ್ ತಾಯಿ ಅಳಲು ತೋಡಿಕೊಂಡಿದ್ದಾರೆ.

ರಾಜಕೀಯ ಲಾಭಕ್ಕಾಗಿ ಈ ರೀತಿ ಕೊಲೆ ನಡೆಯುತ್ತಿದೆ.  ದೀಪಕ್ ರಾವ್ ಹತ್ಯೆಯಾಯ್ತು,  ಈಗ ಸಂತೋಷ್ ಹತ್ಯೆಯಾಗಿದೆ. ಗೃಹ ಸಚಿವ ರಾಮಲಿಂಗ ರೆಡ್ಡಿಯವರಿಗೆ ಬೇಜವಾಬ್ದಾರಿತನ ಇದೆ. ಇದು ಅಮಾನುಷ ಕೃತ್ಯ ಇದನ್ನ ನಾನು ಖಂಡಿಸುತ್ತೇನೆ.  ಸಿದ್ದರಾಮಯ್ಯ ಸರ್ಕಾರ ಸ್ವಾರ್ಥಕ್ಕಾಗಿ ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತಿದೆ.  ನಮ್ಮ ಕಡೆಯಿಂದ ಕುಟುಂಬಕ್ಕೆ ಪರಿಹಾರ ನೀಡುತ್ತೇವೆ.  ಸಿದ್ದರಾಮಯ್ಯನವರಿಗೆ ಸೌಜನ್ಯ ಕನಿಕರ ಇಲ್ಲ.  ಸಿಎಂ ಆಗಿ ಅವರು ಬೇಜವಬ್ದಾರಿಯನ್ನ ತೋರುತ್ತಿದ್ದಾರೆ ಎಂದು ಎಂದು ವಾಗ್ದಾಳಿ ನಡೆಸಿದ್ದಾರೆ.

loader