Asianet Suvarna News Asianet Suvarna News

ಡಿವೈ'ಎಸ್ಪಿ ಗಣಪತಿ ಪ್ರಕರಣ: ಜಾರ್ಜ್ ರಾಜಿನಾಮೆಗೆ ಬಿಎಸ್'ವೈ ಆಗ್ರಹ

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ದಾಖಲಿಸಿದ ಎಫ್'ಐಆರ್'ನಲ್ಲಿ ಸಚಿವ ಜಾರ್ಜ್ ಹೆಸರು ಕೇಳಿ ಬಂದಿದ್ದು,  ಹಿನ್ನಲೆಯಲ್ಲಿ ಜಾರ್ಜ್ ಅವರನ್ನು ಸಿಎಂ ತಕ್ಷಣ ಸಚಿವ ಸ್ಥಾನದಿಂದ ವಜಾ ಮಾಡಬೇಕು.  ಜಾರ್ಜ್ ಸಚಿವರಾಗಿ ಮುಂದುವರಿದರೆ ಸಾಕ್ಷಿ ನಾಶಪಡಿಸುವ ಸಾಧ್ಯತೆ ಇದೆ ಎಂದು ಬಿಎಸ್'ವೈ  ಹೇಳಿದ್ದಾರೆ.  

BSY Urges to George Resignation

ಬೆಂಗಳೂರು (ಅ.26): ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ದಾಖಲಿಸಿದ ಎಫ್'ಐಆರ್'ನಲ್ಲಿ ಸಚಿವ ಜಾರ್ಜ್ ಹೆಸರು ಕೇಳಿ ಬಂದಿದ್ದು,  ಹಿನ್ನಲೆಯಲ್ಲಿ ಜಾರ್ಜ್ ಅವರನ್ನು ಸಿಎಂ ತಕ್ಷಣ ಸಚಿವ ಸ್ಥಾನದಿಂದ ವಜಾ ಮಾಡಬೇಕು.  ಜಾರ್ಜ್ ಸಚಿವರಾಗಿ ಮುಂದುವರಿದರೆ ಸಾಕ್ಷಿ ನಾಶಪಡಿಸುವ ಸಾಧ್ಯತೆ ಇದೆ ಎಂದು ಬಿಎಸ್'ವೈ  ಹೇಳಿದ್ದಾರೆ.  

ಮಗನ ಸಾವಿಗೆ ನ್ಯಾಯ ಕೇಳಿ ಸುಪ್ರೀಂ ಕೋರ್ಟ್'ಗೆ ಹೋಗಿದ್ದು ಗಣಪತಿ ತಂದೆ.  ಸುಪ್ರೀಂ ಆದೇಶದ ಬಗ್ಗೆ ಸಿದ್ದರಾಮಯ್ಯ ಸಂಪುಟದ ಸಚಿವರು ಹಗುರವಾಗಿ ಮಾತನಾಡಿದ್ರೆ ರಾಜ್ಯದ ಜನ ಅರ್ಥ ಮಾಡ್ಕೋತಾರೆ.  ಜಾರ್ಜ್'ಗೆ  ಸಿಎಂ, ಯಾವುದೋ ಸಚಿವರು ಸರ್ಟಿಫಿಕೇಟ್ ಕೊಟ್ರೆ ಆಗಲ್ಲ ಎಂದು ಯಡಿಯೂರಪ್ಪಖಡಕ್ಕಾಗಿ ಹೇಳಿದ್ದಾರೆ.

ಸುಪ್ರೀಂಕೋರ್ಟ್​ ಸಿಬಿಐ ತನಿಖೆ ಮಾಡಬೇಕೆಂದು ಸೂಚಿಸಿತ್ತು. ಪ್ರಕರಣಕ್ಕೆ ಸಂಬಂಧ ಪಟ್ಟಂತಹ ಎಲ್ಲಾ ಪುರಾವೆಗಳು ಇರುವುದರಿಂದ  ತಕ್ಷಣಾ ಸಚಿವ ಜಾರ್ಜ್​ ರಾಜೀನಾಮೆ ನೀಡಬೇಕು. ಸಿಎಂ ಸಿದ್ದರಾಮಯ್ಯ ತಕ್ಷಣ ಜಾರ್ಜ್​ರನ್ನು ವಜಾ ಮಾಡಬೇಕು ಎಂದು ಬಿಎಸ್'ವೈ ಆಗ್ರಹಿಸಿದ್ದಾರೆ.

ಸಿಐಡಿ ತನಿಖೆಗೆ ಕೊಟ್ಟಾಗ ರಾಜೀನಾಮೆ ಕೊಟ್ಟವರು ಸಿಬಿಐಗೆ ಕೊಟ್ಟಾಗ ಯಾಕೆ ಕೊಡಲ್ಲ? ಸಿಬಿಐನಲ್ಲೂ  ಕ್ಲೀನ್ ಚಿಟ್ ಸಿಕ್ಕರೆ ಮತ್ತೆ ಸಂಪುಟಕ್ಕೆ ಹೋಗಲಿ. ನಮ್ಮದೇನೂ ಅಭ್ಯಂತರ ಇಲ್ಲ-. ಆದರೆ ಈಗ ರಾಜೀನಾಮೆ ಕೊಡಲಿ. ವಿಧಾನ ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ ಹೇಳಿದ್ದಾರೆ.

Follow Us:
Download App:
  • android
  • ios