ಅಕ್ರಮ  ಡಿನೋಟಿಫಿಕೇಷನ್ ಪ್ರಕರಣ ಸಂಬಂಧ ಎಸಿಬಿ ಎಫ್​​'ಐಆರ್​​ ದಾಖಲಿಸಿ ಬಿಎಸ್'​​ವೈ ಗೆ ಬಿಗ್​ ಶಾಕ್​​ ನೀಡಿದೆ. ಹೀಗಾಗಿ ಬಂಧನ ಭೀತಿಯಿಂದ ತಪ್ಪಿಸ್ಸಿಕೋಳ್ಳಲು ಬಿಎಸ್​ ಯಡಿಯೂರಪ್ಪ ಸೈಲೆಂಟಾಗಿ ಕಾನೂನು ತಂತ್ರವನ್ನ  ಹೆಣೆಯುತ್ತಿದ್ದಾರೆ. ಎಸಿಬಿ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಬೆಂಗಳೂರು(ಆ.21): ಡಿನೋಟಿಪೀಕೇಶನ್​​ ಕೇಸ್​​ ರೀಓಪನ್ ಮಾಡಿ ಎಸಿಬಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪನವರ ಮೇಲೆ ಎಫ್​​ಐಆರ್​​ ದಾಖಲಿಸಿದೆ. ಹೀಗಾಗಿ ಬಿಎಸ್​​ವೈ ಸದ್ಯ ಬಂಧನದ ಭೀತಿಯಲ್ಲಿದ್ದು ಲೋಕಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಹಾಗೆಯೇ ಎಸಿಬಿ ವಿರುದ್ಧ ಕಾನೂನು ಸಮರ ನಡೆಸಲು ಮುಂದಾಗಿದ್ದಾರೆ.

ಎಸಿಬಿ ದಾಖಲಿಸಿರುವ ಎಫ್​​ಐಆರ್​​ ರದ್ದು ಕೋರಿ ಸಲ್ಲಿಸಿರುವ ಅರ್ಜಿ ಇಂದು ನ್ಯಾಯಲಯಕ್ಕೆ ಬರಲಿದೆ. ಹೀಗಾಗಿ ಬಿಎಸ್​​ ವೈ ಇಂದು ಲೋಕಾಯುಕ್ತ ವಿಶೇಷ ನ್ಯಾಯಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಎಲ್ಲಾ ಸಿದ್ಧತೆ ನಡೆಸಿದ್ದಾರೆ. ಪ್ರಕರಣದ ಉಳಿದ ಆರೋಪಿಗಳಾದ ಬಸವರಾಜೇಂದ್ರ, ಪ್ರೇಮಚಂದ್ರ, ಗೌರಿಶಂಕರ್​​, ಸುಬೀರ್​​ ಹರಿಸಿಂಗ್ ಕೂಡ ​​ಇಂದು ಸಂಜೆ ನೀರಿಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಬಸವರಾಜೇಂದ್ರ ಆರೋಪ ಮಾಡಿರೋದ್ರಿಂದ ಎಸಿಬಿ ಅಧಿಕಾರಿಗಳು ಸಹ ಪ್ರಕರಣವನ್ನ ಗಂಭಿರವಾಗಿ ಪರಿಗಣಿಸಿದ್ದಾರೆ. ಪ್ರಕರಣ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಲು ಮುಂದಾಗಿದ್ದಾರೆ.