ಚಿತ್ರದುರ್ಗ (ಜ. 30):  ಚಳ್ಳಕೆರೆ ಜೆಡಿಎಸ್ ಮುಖಂಡ ಬಸವರಾಜ್ ಮಂಡಿಮಠ್ ಅವರಿಗೆ ದೂರವಾಣಿ ಕರೆ ಬಿಎಸ್ ವೈ ಆಹ್ವಾನಿಸಿದ ಆಡಿಯೋ ವೈರಲ್ ಆಗಿದೆ.

ಮೋದಿಯಂತೆ ನಾನು ಜಾತಿ ರಾಜಕಾರಣ ಮಾಡಲ್ಲ : ಬಿಜೆಪಿ ಶಾಸಕ

ಬಿಜೆಪಿಗೆ ಬನ್ನಿ.  ಆಗೋದೆಲ್ಲ ಆಯ್ತು. ನಮ್ಮಿಂದ ತಪ್ಪಾಗಿದೆ. ಪರಶುರಾಂಪುರಕ್ಕೆ ಬಂದಿದ್ದೇನೆ. ಪಕ್ಷ ಕಟ್ಟಬೇಕು. ದಯವಿಟ್ಟು ತಾಲ್ಲೂಕಿನ ಜವಾಬ್ದಾರಿ ತೆಗೆದುಕೊಳ್ಳಿ ಎಂದು ಬಿಎಸ್ ವೈ ಹೇಳಿದ್ದಾರೆ. ಈ ಆಡಿಯೋ ವೈರಲ್ ಆಗಿದೆ. 

ರಾಜಸ್ಥಾನ BJPಯಲ್ಲಿ ಮೇಜರ್ ಸರ್ಜರಿ : 15 ಮುಖಂಡರಿಗೆ ಗೇಟ್ ಪಾಸ್

ದಯವಿಟ್ಟು ಬನ್ನಿ. ಯಾರು ಬೇಕೋ ಅವರನ್ನ ಎಂಎಲ್ ಎ ಮಾಡಿ. ಪರಶುರಾಂಪುರಕ್ಕೆ ಬನ್ನಿ ಉಳಿದ ಎಲ್ಲಾ ಜವಾಬ್ದಾರಿ ನೀವು ತೆಗೆದುಕೊಳ್ಳಿ ಎಂದು ಚಳ್ಳಕೆರೆ ಪ್ರಭಾವಿ ಮುಖಂಡ ಬಸವರಾಜ್ ಮಂಡಿಮಠ್ ಗೆ ಬಿಎಸ್ ವೈ ಹೇಳಿದ್ದಾರೆ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ  ಮಂಡಿಮಠ್ ಬಿಜೆಪಿ ತ್ಯಜಿಸಿ ಜೆಡಿಎಸ್ ಸೇರ್ಪಡೆಯಾಗಿದ್ದರು. ಬಿಜೆಪಿಗೆ ಬಿಎಸ್ ವೈ ಆಹ್ವಾನಿಸಿದ ಆಡಿಯೋ  ವೈರಲ್ ಆಗಿದೆ.