ಮಾಜಿ ಸಿಎಂ ಯಡಿಯೂರಪ್ಪನಿಗೆ ರಿಲೀಫ್ ಸಿಕ್ಕಿದ್ದು, ಪ್ರೇರಣಾ ಟ್ರಸ್ಟ್ ಮೂಲಕ ಕಿಕ್ ಬ್ಯಾಕ್ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ. ಸಿಬಿಐ ವಿಶೇಷ ನ್ಯಾಯಾಲಯದ ಮಹತ್ವದ ತೀರ್ಪು ಹೊರ ಬಂದಿದ್ದು, ಬಿಎಸ್'ವೈ ದೋಷಮುಕ್ತರಾಗಿದ್ದಾರೆ. ಇಷ್ಟೇ ಅಲ್ಲದೆಬಿಎಸ್ ವೈ ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಹಾಗೂ ಅಳಿಯ ಸೋಹನ್ಕುಮಾರ್ ಕೂಡಾ ಆರೋಪ ಮುಕ್ತರಾಗಿದ್ದಾರೆ.
ಬೆಂಗಳೂರು(ಅ.26): ಮಾಜಿ ಸಿಎಂ ಯಡಿಯೂರಪ್ಪನಿಗೆ ರಿಲೀಫ್ ಸಿಕ್ಕಿದ್ದು, ಪ್ರೇರಣಾ ಟ್ರಸ್ಟ್ ಮೂಲಕ ಕಿಕ್ ಬ್ಯಾಕ್ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಕ್ಲೀನ್ ಚಿಟ್ ನೀಡಿದೆ.
ಸಿಬಿಐ ವಿಶೇಷ ನ್ಯಾಯಾಲಯದ ಮಹತ್ವದ ತೀರ್ಪು ಹೊರ ಬಂದಿದ್ದು, ಬಿಎಸ್'ವೈ ರಾಜಕೀಯ ಭವಿಷ್ಯ ಸೇಫ್ ಆಗಿದೆ. ಈ ಪ್ರಕರಣದಲ್ಲಿ ಯಿಡಿಯೂರಪ್ಪ ಕುಟುಂಬವೂ ಜೈಲು ಪಾಲಾಗುವ ಆತಂಕದಲ್ಲಿತ್ತು. ಆದರೆ ಇಡೀ ಪ್ರಕರಣ ಸುಖಾಂತ್ಯಗೊಂಡಿದ್ದು ಬಿಎಸ್'ವೈ ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಹಾಗೂ ಅಳಿಯ ಸೋಹನ್ಕುಮಾರ್ ಕೂಡಾ ಆರೋಪ ಮುಕ್ತರಾಗಿದ್ದಾರೆ.
ಯಾವ ಪ್ರಕರಣದಿಂದ ಹೊರ ಬಂದರೂ ಪ್ರೇರಣಾ ಟ್ರಸ್ಟ್ ಕಿಕ್ ಬ್ಯಾಕ್ ಪ್ರಕರಣದಿಂದ ಬಿಎಸ್'ವೈ ಹೊರಬರಲು ಸಾಧ್ಯವಿಲ್ಲ ಎಂಬ ಮಾತುಗಳು ವಿಶ್ಲೇಷಕರದ್ದಾಗಿತ್ತು. ಆದರೆ ನ್ಯಾಯಾಲಯ ಇಂದು ನೀಡಿರುವ ತೀರ್ಪು ಇವರ ಮುಂದಿನ ರಾಜಕೀಯ ಭವಿಷ್ಯದ ಹಾದಿಯನ್ನು ಸುಗಮಗೊಳಿಸಿದೆ.
ತೀರ್ಪು ಹೊರಬರುತ್ತಿದ್ದಂತೆಯೇ ಟ್ವಿಟರ್ ಮೂಲಕ ತನ್ನ ಬೆಂಬಲಿಗರಿಗೆ ಧನ್ಯವಾದ ತಿಳಿಸಿರುವ ಯಡಿಯೂರಪ್ಪ, 'ಸತ್ಯಮೇವ ಜಯತೆ' ಎಂದೂ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:
